ಬೆತ್ತಲಾಗಿ ಓಡಾಡ್ತಿದ್ದ ಬೆಂಗಳೂರಿನ ಬುದ್ಧಿಮಾಂದ್ಯ ಮಹಿಳೆಯ ರಕ್ಷಿಸಿ, ನೆರವಿನ ಹಸ್ತ ಚಾಚಿದ ಕೋಲಾರ ಪೊಲೀಸರು

| Updated By: ಆಯೇಷಾ ಬಾನು

Updated on: Mar 21, 2022 | 9:21 PM

ಬೆತ್ತಲಾಗಿ ಓಡಾಡುತ್ತಿದ್ದ ಬುದ್ಧಿ ಮಾಂದ್ಯ ಮಹಿಳೆಯನ್ನ ರಕ್ಷಿಸಿ ಆಕೆಗೆ ಬಟ್ಟೆ ಹಾಗೂ ಆರ್ಥಿಕ ಸಹಾಯ ಮಾಡಿ ಪೊಲೀಸರು ಆರೈಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಬೆತ್ತಲಾಗಿ ಓಡಾಡ್ತಿದ್ದ ಬೆಂಗಳೂರಿನ ಬುದ್ಧಿಮಾಂದ್ಯ ಮಹಿಳೆಯ ರಕ್ಷಿಸಿ, ನೆರವಿನ ಹಸ್ತ ಚಾಚಿದ ಕೋಲಾರ ಪೊಲೀಸರು
ಬೆತ್ತಲಾಗಿ ಓಡಾಡ್ತಿದ್ದ ಬೆಂಗಳೂರಿನ ಬುದ್ಧಿಮಾಂದ್ಯ ಮಹಿಳೆಯ ರಕ್ಷಿಸಿ, ನೆರವಿನ ಹಸ್ತ ಚಾಚಿದ ಕೋಲಾರ ಪೊಲೀಸರು
Follow us on

ಕೋಲಾರ: ಸಮಾನ್ಯವಾಗಿ ಪೊಲೀಸರು ಎಂದರೆ ಕಠಿಣ ಮನಸ್ಸಿನ ಜನ ಎಂದು ಅಂದುಕೊಳ್ಳುತ್ತೇವೆ, ಆದರೆ ಅವರಲ್ಲೂ ಮಾನವೀಯ, ಮೃದು ಮನಸ್ಸಿರುತ್ತದೆ, ಅವರಿಗೂ ಕಷ್ಟದಲ್ಲಿರುವ ಜನರಿಗೆ ಮರುಗುವ ಮನಸ್ಸಿರುತ್ತದೆ ಅನ್ನೋದಕ್ಕೆ ಕೋಲಾರದಲ್ಲೊಂದು ಜೀವಂತ ನಿದರ್ಶನ ನಡೆದಿದೆ. ಬೆತ್ತಲಾಗಿ ಓಡಾಡುತ್ತಿದ್ದ ಬುದ್ಧಿ ಮಾಂದ್ಯ ಮಹಿಳೆಯನ್ನ ರಕ್ಷಿಸಿ ಆಕೆಗೆ ಬಟ್ಟೆ ಹಾಗೂ ಆರ್ಥಿಕ ಸಹಾಯ ಮಾಡಿ ಪೊಲೀಸರು ಆರೈಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಸದ್ಯ ಪೊಲೀಸರು ಮಹಿಳೆಯನ್ನು ರಕ್ಷಿಸಿ ಸಂಬಂಧಿಕರ ಬಳಿ ಕಳಿಸಿದ್ದಾರೆ.

ಕೋಲಾರದ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 75 ರ ಮಸೀದಿ ಹಾಗೂ ದರ್ಗಾ ಬಳಿ ಮಹಿಳೆಯೊಬ್ಬರು ಬೆತ್ತಲಾಗಿ ಓಡಾಡುತ್ತಿದ್ದ ವಿಷಯ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅವರಿಗೆ ಸಾರ್ವಜನಿಕರೊಬ್ಬರು ಕರೆ ಮಾಡಿ ತಿಳಿಸಿದ ಹಿನ್ನೆಲೆ, ಎಸ್ಪಿ ದೇವರಾಜ್ ಕೋಲಾರ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ಅವರಿಗೆ ನೀಡಿದ ಸೂಚನೆ ಮೇರೆಗೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಬೆಂಗಳೂರು ಮೂಲದ ಮಹಿಳೆ ಮಾನಸೀಕ ಅಸ್ವಸ್ಥೆ ಅನ್ನೋದು ತಿಳಿದು ಮಹಿಳಾ ಪೊಲೀಸ್ ಸಿಬ್ಬಂದಿ ಸಹಾಯದಿಂದ ಆಕೆಗೆ ಹೊಸ‌ಬಟ್ಟೆ ತೊಡಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಹಿಳೆಯನ್ನು ಆರೈಕೆ ಮಾಡಿದ ಪೊಲೀಸರು ಮಹಿಳೆಗೆ ಊಟ, ತಿಂಡಿ ಕೊಡಿಸಿ ಮಹಿಳೆಯನ್ನು ಅವರ ಸಂಬಂಧಿಕರ ಬಳಿಗೆ ಕಳಿಸಿ‌ಕೊಟ್ಟಿದ್ದಾರೆ.

ಇದನ್ನೂ ಓದಿ: ಮುಸಲ್ಮಾನರ ಹತ್ಯೆಯ ಬಗ್ಗೆಯೂ ಸಿನಿಮಾ ಮಾಡಬೇಕು ಎಂದು ಟ್ವೀಟ್ ಮಾಡಿದ ಮಧ್ಯಪ್ರದೇಶದ ಐಎಎಸ್ ಅಧಿಕಾರಿ

ಬೆಂಗಳೂರಿನ ಗೌರವ, ಪ್ರತಿಷ್ಠೆ ಹಾಳುಮಾಡುತ್ತಿರುವ ಭ್ರಷ್ಟರು, ಮೊದಲು ಬಿಬಿಎಂಪಿಯನ್ನ ಸ್ವಚ್ಛಗೊಳಿಸಬೇಕಿದೆ -ಕುಮಾರಸ್ವಾಮಿ