ಸಂಭ್ರಮ ಸಡಗರ ಹೊತ್ತು ತರುವ ಸಂಕ್ರಾಂತಿ ಹಬ್ಬ ಅಂದ್ರೆ ಈ ಊರಿನ ಜನಕ್ಕೆ ಭಯ! ಯಾಕೆ?

ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ ಮಾಡೋದೆ ಇಲ್ಲ. ಹಬ್ಬ ಆಚರಣೆ ಮಾಡೋದನ್ನ ಬಿಟ್ಟು ನೂರಾರು ವರ್ಷಗಳೇ ಕಳೆದು ಹೋಗಿದೆ. ಹೌದು ಈ ಹಳ್ಳಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇದೆ.

ಸಂಭ್ರಮ ಸಡಗರ ಹೊತ್ತು ತರುವ ಸಂಕ್ರಾಂತಿ ಹಬ್ಬ ಅಂದ್ರೆ ಈ ಊರಿನ ಜನಕ್ಕೆ ಭಯ! ಯಾಕೆ?
ಅರಾಭಿಕೊತ್ತನೂರು ಗ್ರಾಮ

ಕೋಲಾರ: ಆ ಊರಲ್ಲಿ ಸಂಕ್ರಾಂತಿ ಹಬ್ಬ ಅಂದ್ರೆನೆ ಭಯ, ಸಂಕ್ರಾಂತಿ ಬಂತು ಅಂದ್ರೆ ಆ ಹಳ್ಳಿಯ ಜನ ಸೂತಕದ ರೀತಿ ಹಬ್ಬ ಆಚರಣೆ ಮಾಡುತ್ತಾರೆ. ಹಬ್ಬ ಮಾಡಿದ್ರೆ ಊರಿಗೇ ಕೇಡಾಗುತ್ತೆ, ಜನ ಜಾನುವಾರು ಸಾಯುತ್ತವೆ ಅನ್ನೋ ಭೀತಿಯ ನಂಬಿಕೆಯಿಂದ ಸಂಕ್ರಾಂತಿ ಹಬ್ಬ ಮಾಡೋದನ್ನ ಬಿಟ್ಟು ಬಿಟ್ಟಿದ್ದಾರೆ.

ಸಂಕ್ರಾಂತಿ ಹಬ್ಬ ಆಚರಣೆ ಮಾಡಿದರೆ ಕೆಡುಕಾಗುತ್ತದೆ ಅನ್ನೋ ಭಯ ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ ಮಾಡೋದೆ ಇಲ್ಲ. ಹಬ್ಬ ಆಚರಣೆ ಮಾಡೋದನ್ನ ಬಿಟ್ಟು ನೂರಾರು ವರ್ಷಗಳೇ ಕಳೆದು ಹೋಗಿದೆ. ಹೌದು ಈ ಹಳ್ಳಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇದೆ. ಕೋಲಾರ ನಗರಕ್ಕೆ ಕೂಗಳತೆ ದೂರದಲ್ಲಿರುವ ಈ ಗ್ರಾಮದಲ್ಲಿ ಇಂದಿಗೂ ಹಳೆ ಕಾಲದವರಂತೆ ಹಳೆಯ ಪದ್ದತಿಯ ಮೂಢನಂಬಿಕೆಯನ್ನೇ ಮುಂದುವರೆಸಿಕೊಂಡು ಬರಲಾಗುತ್ತಿದೆ. ಸಂಕ್ರಾಂತಿ ಹಬ್ಬವನ್ನು ಮಾಡಿದ್ರೆ ಊರಿಗೆ ಕೆಟ್ಟದಾಗುತ್ತದೆ ಅಂತಾ ಹಿಂದಿನವರು ಹೇಳಿರೋದನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ಸಂಕ್ರಾಂತಿ ಹಬ್ಬವನ್ನು ಮಾಡೋದೆ ಇಲ್ಲ, ಸಂಕ್ರಾಂತಿ ಹಬ್ಬ ಬಂತು ಅಂದ್ರೆ ಈ ಗ್ರಾಮಕ್ಕೆ ಭಯದ ವಾತಾವರಣ ಆವರಿಸಿಬಿಡುತ್ತೆ. ಪಕ್ಕದ ಊರುಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಗ್ರ್ಯಾಂಡ್ ಆಗಿ ಮಾಡ್ತಿದ್ರೆ, ಅರಾಭಿಕೊತ್ತನೂರಲ್ಲಿ ಮಾತ್ರ ಇವತ್ತು ಸೂತಕದ ಛಾಯೆಯಲ್ಲಿ ಮುಳಗಿರುತ್ತೆ.

makar sankranti festival celebration banned 1

ಅರಾಭಿಕೊತ್ತನೂರು ಗ್ರಾಮ

ಹಬ್ಬ ಯಾಕೆ ಆಚರಣೆ ಮಾಡೋದಿಲ್ಲ, ಏನಿದರ ನಂಬಿಕೆ? ಈ ಗ್ರಾಮದಲ್ಲಿ ಹಬ್ಬ ಆಚರಣೆ ಮಾಡದೆ ಇರಲು ಗ್ರಾಮಸ್ಥರು ನೀಡುವ ಕಾರಣವೇನೆಂದೆ, ಹಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಹಬ್ಬದ ಆಚರಣೆ ವೇಳೆ ದನಕರುಗಳಿಗೆ ಅಲಂಕಾರ ಮಾಡಿ ಗ್ರಾಮದಲ್ಲಿ ಓಡಿಸಲಾಯಿತಂತೆ, ಹೀಗೆ ಓಡಿಸಿದ ಜಾನುವಾರು ವಾಪಸ್ ಬಂದಿಲ್ಲವಂತೆ. ಅದಾದ ಬಳಿಕ ಗ್ರಾಮದಲ್ಲಿ ಉಳಿದ ದನ ಕರುಗಳು ಇದಕ್ಕಿದ್ದಂತೆ ಸಾವನ್ನಪ್ಪಲು ಆರಂಭಿಸಿದವಂತೆ, ಇದರಿಂದ ಬೆಚ್ಚಿ ಬಿದ್ದ ಜನರು ಇಂದಿಗೂ ಹಬ್ಬವನ್ನ ಶೋಕದ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಅಷ್ಟು ಮಾತ್ರವಲ್ಲದೆ ಈ ಹಿಂದೆ ಅರಾಭಿಕೊತ್ತನೂರಿಗೆ ದೊಡ್ಡ ಕಾಯಿಲೆಯೊಂದು ವಕ್ಕರಿಸಿಕೊಂಡು ಊರಲ್ಲಿದ್ದ ದನ-ಕರುಗಳು ಇದ್ದಕ್ಕಿದ್ದಂತೆ ಸಾಯೋದಿಕ್ಕೆ ಶುರುವಾಗಿತ್ತಂತೆ. ಆಗ ದಿಕ್ಕು ತೋಚದಂತಾದ ಊರಿನ ಹಿರಿಯರು ನಡಿತೀರೋ ಅನಾಹುತವನ್ನು ನಿಲ್ಲಿಸುವಂತೆ ಗ್ರಾಮದಲ್ಲಿರುವ ಬಸವಣ್ಣನ ದೇವಾಲಯದ ಬಳಿ ಹೋಗಿ ಬೇಡಿಕೊಂಡಿದ್ದಾರೆ ಆಗ ಸಾವು ನಿಂತಿತ್ತಂತೆ.

ಸಂಕ್ರಾಂತಿ ಹಬ್ಬವನ್ನು ಬೇರೊಂದು ದಿನ ಮಾಡಿ ಬಸವನಿಗೆ ಪೂಜೆ ಹೀಗೆ ಸಂಕ್ರಾಂತಿ ಹಬ್ಬದ ದಿನ ನಡೆದ ಅನಾಹುತದಿಂದ ಆಘಾತಗೊಂಡಿದ್ದ ಗ್ರಾಮಸ್ಥರು ಬಸವನ ದೇವಾಲಯದಲ್ಲಿ ಹರಕೆ ಮಾಡಿಕೊಂಡಂತೆ, ಸಂಕ್ರಾಂತಿ ಹಬ್ಬದಂದು ಮಾಡುವ ದನ-ಕರುಗಳ ಪೂಜೆಯನ್ನು ಬೇರೊಂದು ದಿನ ನಿನಗೆ ಮಾಡ್ತೀವಿ ಅಂತಾ ಪ್ರಾರ್ಥನೆಯನ್ನ ಮಾಡಿಕೊಂಡಿದ್ದಾರೆ. ಆಗ ರಾಸುಗಳ ಸಾವು ನಿಂತಿದ್ರಿಂದ ಸಂಕ್ರಾಂತಿ ಹಬ್ಬವನ್ನು ಊರಲ್ಲಿ ಮಾಡದಿರುವ ಪ್ರತೀತಿಯು ಅಂದಿನಿಂದಲೂ ಜಾರಿಗೆ ಬಂದಿದೆ. ಸಂಕ್ರಾಂತಿ ಅದ ಮೇಲೆ ಒಂದು ದಿನ ಊರಲ್ಲಿರೋ ಬಸವಣ್ಣನ ದೇವಸ್ಥಾನಕ್ಕೆ ರಾಸುಗಳನ್ನು ಅಲಂಕಾರ ಮಾಡಿಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬರೋದು ಗ್ರಾಮದಲ್ಲಿ ನಡೆದುಕೊಂಡು ಬಂದಿದೆ. ಅನ್ನೋದು ಗ್ರಾಮದ ಹಿರಿಯರಾದ ನಂಜುಂಡೇಗೌಡ ಅವರ ಮಾತು.

ಒಟ್ಟಾರೆ ಅರಾಭಿಕೊತ್ತನೂರಿನ ಹಿರಿಯರು ಆ ಕಾಲಕ್ಕೆ ಮಾಡಿದ್ದ ಸಂಕ್ರಾಂತಿ ಆಚರಣೆಯ ನಿಷೇಧ ಒಳಿತಿರಬಹುದು, ಆದ್ರೆ ಈ ಕಾಲಕ್ಕೂ ಆಧಾರ ರಹಿತವಾಗಿ ಆ ಪದ್ದತಿಯನ್ನೇ ಅನುಸರಿಸುತ್ತಾ ಬರ್ತಿರೋದು ಸರೀನಾ ಅನ್ನೋ ಪ್ರಶ್ನೆ ಈ ತಲೆಮಾರಿನವರಲ್ಲಿ ಕಾಡ್ತಾಯಿದ್ರೂ ಕೂಡಾ ಅದನ್ನು ಪ್ರಶ್ನೆ ಮಾಡದೆ ಅಪ್ಪ ಹಾಕಿದ ಆಲದ ಮರದಂತೆ ಇಂದಿಗೂ ಗ್ರಾಮದ ಜನರು ಅನುಸರಿಸುತ್ತಿದ್ದಾರೆ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ Cow

ಇದನ್ನೂ ಓದಿ: ಸಂಕ್ರಾಂತಿ ಹಬ್ಬದಲ್ಲಿ ಪುನೀತ್​ ರಾಜ್​ಕುಮಾರ್​ ನೆನಪು; ಫ್ಯಾನ್ಸ್​ ಜೊತೆ ಹೊಸ ಸುದ್ದಿ ಹಂಚಿಕೊಂಡ ಶಿವಣ್ಣ

Click on your DTH Provider to Add TV9 Kannada