Hunting: ನಾಲ್ವರು ಸ್ನೇಹಿತರು ಕಳೆದ ರಾತ್ರಿ ಬೇಟೆಗೆ ಹೋದಾಗ ಆಕಸ್ಮಿಕವಾಗಿ ಗುಂಡು ಹಾರಿ ಒಬ್ಬ ಸ್ನೇಹಿತ ಸ್ಥಳದಲ್ಲೇ ಸಾವು

Misfire: ಸೋಮವಾರ ರಾತ್ರಿ ನಾಲ್ವರು ಸ್ನೇಹಿತರು ಬೇಟೆಗೆಂದು ಹೋಗಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದ ಬಳಿ ಗುಂಡು ತಗುಲಿ ಶಂಕರ್ ಎಂಬುವವರು ಸಾವನ್ನಪ್ಪಿದ್ದಾರೆ.

Hunting: ನಾಲ್ವರು ಸ್ನೇಹಿತರು ಕಳೆದ ರಾತ್ರಿ ಬೇಟೆಗೆ ಹೋದಾಗ ಆಕಸ್ಮಿಕವಾಗಿ ಗುಂಡು ಹಾರಿ ಒಬ್ಬ ಸ್ನೇಹಿತ ಸ್ಥಳದಲ್ಲೇ ಸಾವು
ನಾಲ್ವರು ಸ್ನೇಹಿತರು ಕಳೆದ ರಾತ್ರಿ ಬೇಟೆಗೆ ಹೋದಾಗ ಆಕಸ್ಮಿಕವಾಗಿ ಗುಂಡು ಹಾರಿ ಒಬ್ಬ ಸ್ನೇಹಿತ ಸ್ಥಳದಲ್ಲೇ ಸಾವು
Updated By: ಸಾಧು ಶ್ರೀನಾಥ್​

Updated on: Jun 15, 2021 | 4:09 PM

ಕೋಲಾರ: ಸೋಮವಾರ ರಾತ್ರಿ ನಾಲ್ವರು ಸ್ನೇಹಿತರು ಬೇಟೆಗೆಂದು ಹೋಗಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದ ಬಳಿ ಗುಂಡು ತಗುಲಿ ಶಂಕರ್ ಎಂಬುವವರು ಸಾವನ್ನಪ್ಪಿದ್ದಾರೆ.

ಸೋಮವಾರ ರಾತ್ರಿ ನಾಲ್ವರು ಸ್ನೇಹಿತರಾದ ಕೋದಂಡಪ್ಪ, ಶ್ರೀನಿವಾಸ, ಚೌಡಪ್ಪ ಮತ್ತು ಶಂಕರ್ ಬೇಟೆಗೆಂದು ತೆರಳಿದ್ದಾಗ ಈ ಘಟನೆ ನಡೆದಿದೆ. ಲೈಸೆನ್ಸ್ ಹೊಂದಿದ್ದ ಕೋದಂಡಪ್ಪ ಗನ್​ನಿಂದ ಮಿಸ್ ಫೈರ್​​ ಆದಾಗ ಗುಂಡು ನೇರವಾಗಿ ಶಂಕರ್ ಹಣೆಗೆ ಬಿದ್ದಿದೆ. ಶಂಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಲೈಸೆನ್ಸ್ ಹೊಂದಿದ್ದ ಕೋದಂಡಪ್ಪ ಗನ್​ನಿಂದ ಮಿಸ್ ಫೈರ್​​ ಆದಾಗ ಗುಂಡು ನೇರವಾಗಿ ಶಂಕರ್ ಹಣೆಗೆ ಬಿದ್ದಿದೆ.

(misfire while in hunting near seegehalli in srinivaspur one friend died)

ಅಲ್ಮೇರಾದಲ್ಲಿದ್ದ ಲೋಡೆಡ್ ರಿವಾಲ್ವರ್ ಹೊರತೆಗೆದು ಆಡುತ್ತಿದ್ದ ಬಾಲಕನ ತೊಡೆಗೆ ಗುಂಡು ತಗುಲಿ ಗಾಯ

Published On - 3:19 pm, Tue, 15 June 21