ಮುಂಬೈ ಅಂಧೇರಿ ಸಂಘದಿಂದ ಕೋಲಾರದ ಗೋ.ನಾ. ಸ್ವಾಮಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ

| Updated By: ಸಾಧು ಶ್ರೀನಾಥ್​

Updated on: Jun 10, 2024 | 4:58 PM

ಕೋಲಾರದ ಸುಗಟೂರು ಗ್ರಾಮದ ಜಾನಪದ ಕಲಾವಿದ ಗೋ.ನಾ. ಸ್ವಾಮಿಗೆ ಮುಂಬೈ ನಗರದ ಕರ್ನಾಟಕ ಸಂಘ ಅಂಧೇರಿ 2024 ಸಾಲಿನಲ್ಲಿ ನೀಡುವ ಜಾನಪದ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮಹಾರಾಷ್ಟ್ರದ ರಾಜಧಾನಿ ಮುಂಬೈನ ರಾಧಾಬಾಯಿ ಟಿ‌. ಭಂಡಾರಿ ಸಭಾಗೃಹದ ಬಂಟರ ಭವನದಲ್ಲಿ ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಿದರು.

ಮುಂಬೈ ಅಂಧೇರಿ ಸಂಘದಿಂದ ಕೋಲಾರದ ಗೋ.ನಾ. ಸ್ವಾಮಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ
ಮುಂಬೈ ಸಂಘದಿಂದ ಕೋಲಾರದ ಗೋ.ನಾ. ಸ್ವಾಮಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ
Follow us on

ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಅಂತರಾಷ್ಟ್ರೀಯ ಜಾನಪದ ಕಲಾವಿದ ಹಾಗೂ ಪ್ರಖ್ಯಾತ ಹಾಡುಗಾರ ಗೋ.ನಾ. ಸ್ವಾಮಿಗೆ (Kolar Go.Na. Swamy) ಮಹಾರಾಷ್ಟ್ರದ ಮುಂಬೈ ನಗರದ ಕರ್ನಾಟಕ ಸಂಘ ಅಂಧೇರಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಕರ್ನಾಟಕ ವತಿಯಿಂದ ಹೊರನಾಡು ಕನ್ನಡ ಸಂಸ್ಕೃತಿ ಸಂಭ್ರಮ 2024 ಸಾಲಿನಲ್ಲಿ ನೀಡುವ ಜಾನಪದ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು (Folklore Siri award in Mumbai).

ಮಹಾರಾಷ್ಟ್ರದ ರಾಜಧಾನಿ ಮುಂಬೈನ ರಾಧಾಬಾಯಿ ಟಿ‌. ಭಂಡಾರಿ ಸಭಾಗೃಹದ ಬಂಟರ ಭವನದಲ್ಲಿ ಕರ್ನಾಟಕ ರಾಜ್ಯದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಿದರು. ಗೋ.ನಾ. ಸ್ವಾಮಿ ಜಾನಪದ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಕಲಾವಿದ ಅದಕ್ಕಾಗಿಯೇ ಅವರು ತಮಗೆ ಸಿಕ್ಕಿದ್ದ ಸರ್ಕಾರಿ ಶಿಕ್ಷಕ ವೃತ್ತಿಯನ್ನು ಬಿಟ್ಟು ಜಾನಪದ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಹತ್ತಾರು ಜಾನಪದ ಹಾಡುಗಳನ್ನು ಸ್ವತಃ ತಾವೇ ರಚಿಸಿ, ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ. ಇಂದಿಗೂ ಗೋ.ನಾ. ಸ್ವಾಮಿಯವರ ಹಲವು ಜಾನಪದ ಹಾಡುಗಳು ಸದ್ದು ಮಾಡುತ್ತಿವೆ.

Also read: ಕಡಿಮೆ ಕೊಬ್ಬು ಎಂದು ಲೇಬಲ್ ಹಾಕಲಾದ ಉತ್ಪನ್ನವು ಆರೋಗ್ಯಕರ ಎಂದು ಹೇಳಲಾಗುವುದಿಲ್ಲ, ಬದಲಿಗೆ ಅದು ಅಪಾಯಕಾರಿ! ಹೇಗೆ?

ಇನ್ನು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕನ್ನಡ ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವನಿಮರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಸಿ. ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಮಾಜಿ ನಿರ್ದೇಶಕ ವಿಶ್ವನಾಥ್ ಹಿರೇಮಠ ಸೇರಿದಂತೆ ಅನೇಕ ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ