ಕೋಲಾರ: ರಕ್ಷಕರೇ ಭಕ್ಷಕರಾದ್ರ? ಕೊಲಾರ ಜಿಲ್ಲೆಯಲ್ಲಿ ನಡೆದ ಈ ಒಂದು ಘಟನೆಯಿಂದ ಇಂತಹ ಅನುಮಾನ ಮೂಡಿದೆ. ಹೌದು ಸಾರ್ವಜನಿಕರ ರಕ್ಷಣೆಯ ಹೊಣೆ ಹೊತ್ತಿರುವ ಪೊಲೀಸ್ ಪೇದೆಯ ಮೇಲೆಯೇ ಈಗ ಅತ್ಯಾಚಾರದ ಆರೋಪ ಕೇಳಿಬಂದಿದೆ.
ಧರಣಿ ಕುಳಿತ ಮಹಿಳೆ ಪೊಲೀಸ್ ವಶಕ್ಕೆ?
ಈ ಸಂಬಂಧ ಪೇದೆಯನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತನಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕೋಲಾರ ನಗರದ ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹ ಕುಳಿತಿದ್ದಾರೆ. ಕೋಲಾರ ಪೊಲೀಸರು ಧರಣೆ ಹಿಂಪಡೆಯುವಂತೆ ಮಹಿಳೆಯ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ಮಹಿಳೆಯನ್ನ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.