ಪೆಹಲ್ಗಾಮ್​​ ಕೇಂದ್ರದ ಪೂರ್ವ ನಿಯೋಜಿತ ಕೃತ್ಯ ಎಂದ ಕೋಲಾರದ ಮುನಿರ್​​ ವಿರುದ್ಧ ಕೇಸ್

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿ ಬಳಿಕ ಇದೀಗ ಭಾರತ ಪ್ರತೀಕಾರ ತೀಸಿಕೊಂಡಿದೆ. ಪಾಕಿಸ್ತಾನದಲ್ಲಿದ್ದ ಉಗ್ರರ ನೆಲಗಳ ಮೇಲೆ ಭಾರತ ದಾಳಿ ಮಾಡಿ ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಆಪರೇಷನ್ ಸಿಂಧೂರ್​ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಮಧ್ಯ ಕೋಲಾರದ ವ್ಯಕ್ತಿಯೊರ್ವ, ಪೆಹಲ್ಗಾಮ್​​ ಕೇಂದ್ರ ಸರ್ಕಾರದ ಪೂರ್ವ ನಿಯೋಜಿತ ಕೃತ್ಯ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದು, ಇದೀಗ ಈತನ ವಿರುದ್ಧ ಕೇಸ್​ ಬುಕ್​ ಅಗಿದೆ.

ಪೆಹಲ್ಗಾಮ್​​ ಕೇಂದ್ರದ ಪೂರ್ವ ನಿಯೋಜಿತ ಕೃತ್ಯ ಎಂದ ಕೋಲಾರದ ಮುನಿರ್​​ ವಿರುದ್ಧ ಕೇಸ್
Kolar Munir
Updated By: ರಮೇಶ್ ಬಿ. ಜವಳಗೇರಾ

Updated on: May 09, 2025 | 4:03 PM

ಕೋಲಾರ, (ಮೇ 09): ಪಹಲ್ಗಾಮ್ ದಾಳಿಯನ್ನು (pahalgam terror attack) ಕೇಂದ್ರ ಸರ್ಕಾರದ ಪೂರ್ವ ನಿಯೋಜಿತ ಕೃತ್ಯ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕೋಲಾರದ (Kolar) ಯುವಕನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಈತ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸುಳ್ಳು ಸುದ್ದಿ ಹಬ್ಬಿಸಿದ್ದ. ಬಿಹಾರ ಚುನಾವಣೆಯಲ್ಲಿ ಹಿಂದೂ ಮತಗಳ ಕ್ರೋಡೀಕರಿಸಲು ಯತ್ನಿಸುತಿದ್ದಾರೆಂದು ಕೋಲಾರದ ಕುಂಬಾರ ಪೇಟೆ ನಿವಾಸಿ ಮುನೀರ್ ಖಾನ್ ಖುರೇಷಿ ಎನ್ನುವಾತ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದ. ಈ ಸಂಬಂಧ ಇದೀಗ ಕೋಲಾರದ ಗಲ್ ಪೇಟೆ ಠಾಣೆ ಪೊಲೀಸರು ಮುನೀರ್ ಖಾನ್ ಖುರೇಷಿ ವಿರುದ್ಧ ಸ್ವಯಂ ಪ್ರೇರಿತ ದೂರು (ಸುಮೋಟೋ ಕೇಸ್) ದಾಖಲಿಸಿಕೊಂಡಿದ್ದಾರೆ.

ಕೋಲಾರದ ಕುಂಬಾರ ಪೇಟೆ ನಿವಾಸಿಯಾಗಿರುವ ಮುನೀರ್ ಖಾನ್, ಚಿಕನ್ ಅಂಗಡಿಯ ಮಾಲೀಕನಾಗಿದ್ದು, ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ಪಹಲ್ಗಾಮ್ ದಾಳಿಯನ್ನು ಕೇಂದ್ರ ಸರ್ಕಾರದ ಪೂರ್ವ ಯೋಜಿತ ಕೃತ್ಯ. ಬಿಹಾರ ಚುನಾವಣೆಯಲ್ಲಿ ಹಿಂದೂಗಳ ಮತ ಗಳಿಸಲು ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದ.

ಇದನ್ನೂ ಓದಿ: ಕರ್ನಾಟಕದಲ್ಲಿ ಬಾಲ ಬಿಚ್ಚಿದ ಪಾಕ್​ ಪ್ರೇಮಿ: ವಿಜಯಪುರದ ವಿದ್ಯಾರ್ಥಿನಿಯಿಂದ ಪಾಕ್​ ಪರ ಪೋಸ್ಟ್​​, ದೂರು ದಾಖಲು

ಈ ವಿಡಿಯೋ ಸಾರ್ವಜನಿಕರಲ್ಲಿ ಗೊಂದಲ, ಅಶಾಂತಿ ಹಾಗೂ ಕೋಮು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದ್ದ ಕಾರಣ, ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಕೋಮು ಗಲಭೆ ತಡೆಗಟ್ಟಲು ಯೂಟ್ಯೂಬ್‌ನಿಂದ ಆ ವಿಡಿಯೋವನ್ನು ತೆಗೆದುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಮಂಗಳೂರು: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಅಲರ್ಟ್: ಬೇಗ ಬರಲು ಪ್ರಯಾಣಿಕರಿಗೆ ಸೂಚನೆ
ಸುಳ್ಳು ಸುದ್ದಿಗಳನ್ನ ಹರಡುವವರ ವಿರುದ್ಧ ಕ್ರಮ: ದಯಾನಂದ್ ಎಚ್ಚರಿಕೆ

​​ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಏಪ್ರಿಲ್ 22ರಂದು ಉಗ್ರರು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದರು. ಧರ್ಮ ಕೇಳಿ ಕೇಳಿ ಹಿಂದೂಗಳನ್ನೇ ಗುಂಡಿಕ್ಕಿ ಹತ್ಯೆಗೈದಿದ್ದರು. ಈ ಕೃತ್ಯವನ್ನು ವಿಶ್ವದ ಹಲವು ದೇಶಗಳು ಖಂಡಿಸಿ ದುಖ ವ್ಯಕ್ತಪಡಿಸಿದ್ದವು. ಇದರ ನಡುವೆ ಕೋಲಾರದ ಮುನಿರ್, ಇದು ಕೇಂದ್ರ ಸರ್ಕಾರದ ಪೂರ್ವ ನಿಯೋಜಿತ ಕೃತ್ಯ. ಬಿಹಾರದ ಚುನಾವಣೆಯಲ್ಲಿ ಹಿಂದೂಗಳ ಮತ ಬ್ಯಾಂಕ್​ ಸೆಳೆಯಲು ಈ ರೀತಿ ಮಾಡಲಾಗಿದೆ ಎಂದು ವಿಡಿಯೋ ಮಾಡಿ ಯುಟ್ಯೂಬ್​​ನಲ್ಲಿ ಹರಿಬಿಟ್ಟಿದ್ದ.​