ದೇಶದ್ರೋಹ ಕ್ಯಾನ್ಸರ್ ಇದ್ದ ಹಾಗೆ, ಆಪರೇಷನ್ ಮಾಡದಿದ್ದರೆ ದೇಶದ ತುಂಬ ಹರಡುತ್ತದೆ: ಪ್ರಮೋದ್ ಮುತಾಲಿಕ್

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಬಗ್ಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ದೇಶದ್ರೋಹಿಗಳನ್ನು ಬಂಧಿಸಬಾರದು. ಗುಂಡಿಕ್ಕಿ ಕೊಲ್ಲಬೇಕು ಎಂದರು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದ ವಿಚಾರವಾಗಿ ಮಾತನಾಡಿದ ಮುತಾಲಿಕ್, ಬಾಂಬ್ ಸ್ಪೋಟ ಪೂರ್ವ ಯೋಜಿತ. ಬಾಂಬ್ ತಯಾರಿ ಮಾಡಿರುವುದರ ಹಿಂದೆ ವ್ಯಕ್ತಿ ಅಲ್ಲ ಒಂದು ತಂಡ, ಸಂಘಟನೆ ಇದೆ ಎಂದರು.

ದೇಶದ್ರೋಹ ಕ್ಯಾನ್ಸರ್ ಇದ್ದ ಹಾಗೆ, ಆಪರೇಷನ್ ಮಾಡದಿದ್ದರೆ ದೇಶದ ತುಂಬ ಹರಡುತ್ತದೆ: ಪ್ರಮೋದ್ ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರನ್ನು ಬಂಧಿಸಬಾರದು, ಗುಂಡಿಕ್ಕಿ ಕೊಲ್ಲಬೇಕು ಎಂದ ಪ್ರಮೋದ್ ಮುತಾಲಿಕ್
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: Rakesh Nayak Manchi

Updated on:Mar 03, 2024 | 7:51 PM

ಕೋಲಾರ, ಮಾ.3: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಬಗ್ಗೆ ಮಾತನಾಡಿದ ಪ್ರಮೋದ್ ಮುತಾಲಿಕ್ (Pramod Muthalik), ದೇಶದ್ರೋಹಿಗಳನ್ನು ಬಂಧಿಸಬಾರದು. ಗುಂಡಿಕ್ಕಿ ಕೊಲ್ಲಬೇಕು ಎಂದರು. ಕೋಲಾರದಲ್ಲಿ (Kolar) ಮಾತನಾಡಿದ ಅವರು, ದೇಶದ್ರೋಹ ಕ್ಯಾನ್ಸರ್ ಇದ್ದಹಾಗೆ. ಅದಕ್ಕೆ ಔಷಧ ಇಲ್ಲ, ಮುಲಾಮಿಲ್ಲ. ಅದನ್ನು ಆಪರೇಷನ್ ಮಾಡಬೇಕು. ಇಲ್ಲವಾದರೆ ದೇಶದ ತುಂಬ ಹರಡುತ್ತದೆ ಎಂದರು.

ಮುಸ್ಲಿಂರಿಂದಲೇ ಗೆದ್ದಿದ್ದೇವೆ ಅನ್ನೋ ಸೊಕ್ಕು, ಅಹಂಕಾರದಿಂದಲೇ ಅವರು ಏನು ಬೇಕಾದರೂ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಉದಾಹರಣೆಗೆ ಹಿಜಾಬ್ ಹಾಕಿಕೊಳ್ಳಿ ಎನ್ನುತ್ತಾರೆ. ಯಾಕೆ ಹಾಕಿಕೊಳ್ಳಬೇಕು ಎಂದರೆ, ಸುಪ್ರೀಂಕೋರ್ಟ್​ನಿಂದ ತೀರ್ಪು ಬಂದಿಲ್ಲ ಎನ್ನುತ್ತಾರೆ. ಸಮಾನತೆ ಬಗ್ಗೆ ಮಾತನಾಡುವ ನೀವು ಹಿಜಾಬ್ ಹಾಕಿಕೊಳ್ಳಿ ಎಂದರೆ ಸಮಾನತೆ ಎಲ್ಲಿ ಬರುತ್ತದೆ. ಹುಬ್ಬಳ್ಳಿಯಲ್ಲಿ 10 ಸಾವಿರ ಕೋಟಿ ಮುಸ್ಲಿಂ ಅಭಿವೃದ್ದಿಗೆ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಮುಸ್ಲಿಂ ಕುಮ್ಮುಕ್ಕು ಸಿಗುತ್ತಿರುವುದರಿಂದ ವಿಧಾನಾಸೌಧ ಒಳಗೆ ಪಾಕಿಸ್ತಾನ ಜಿಂದಾಬಾದ್ ಎನ್ನುವ ಸೊಕ್ಕು ಕಿಡಿಗೇಡಿಗಳಿಗೆ ಬಂದಿದೆ‌ ಎಂದರು.

ಬಾಂಬ್ ಸ್ಫೋಟ ಪೂರ್ವ ಯೋಜಿತ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪೂರ್ವ ಯೋಜಿತವಾಗಿದೆ. ಬಾಂಬ್ ತಯಾರಿ ಮಾಡಿರುವುದರ ಹಿಂದೆ ಒಬ್ಬ ವ್ಯಕ್ತಿ ಅಲ್ಲ, ಒಂದು ತಂಡ ಮತ್ತು ಸಂಘಟನೆಯ ಕೈವಾಡ ಇದೆ. ಸರ್ಕಾರ ಹಾಗೂ ವಿರೋಧ ಪಕ್ಷದವರು ಬಾಯಿ ಮುಚ್ಚಿಕೊಂಡಿರಿ. ಪೊಲೀಸರಿಗೆ ಮುಕ್ತ ಅವಕಾಶ ಕೊಡಿ. 24 ಗಂಟೆಯಲ್ಲಿ ಬಂಧಿಸುತ್ತಾರೆ. ಎಫ್​ಎಸ್​ಎಲ್ ವರದಿ ತಿರುಚಲಾಗುವುದಿಲ್ಲ. ಮಾದ್ಯಮದವರಿಗೆ ಸಿಕ್ಕ ಹಾಗೂ ಖಾಸಗಿ ಎಫ್​ಎಸ್​ ಎಲ್​ಗೆ ಕೊಟ್ಟರೆ ಇವರ ಸತ್ಯಾಂಶ ಹೊರ ಬರಲಿದೆ ಎಂದರು.

ಇದನ್ನೂ ಓದಿ: ಪಾಕ್ ಪರ ಘೋಷಣೆ ಪ್ರಕರಣ: FSL ವರದಿಯಲ್ಲಿ ಸತ್ಯ ಬಹಿರಂಗ, ಆರೋಪಿ ಬಂಧನಕ್ಕೆ ತಯಾರಿ

ಲೋಕಸಭೆ ಚುನಾವಣೆಯಲ್ಲಿ ಮುತಾಲಿಕ್ ಸ್ಪರ್ಧೆ?

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮಾಡುವುದಿಲ್ಲ ಎಂದ ಪ್ರಮೋದ್ ಮುತಾಲಿಕ್, ಮೋದಿ ಗೆಲ್ಲಿಸಿ ದೇಶ ಉಳಿಸಿ ಅನ್ನೋ ಅಭಿಯಾನ ರಾಜ್ಯದಲ್ಲಿ ಕೈಗೊಂಡಿದ್ದೇನೆ. ಹಾಗಾಗಿ ಇಂದು ಕೋಲಾರದಲ್ಲಿ ಅಭಿಯಾನ ಮಾಡಲಿದ್ದೇನೆ ಎಂದರು.

ಸರ್ಕಾರ ಮುಜರಾಯಿ ಅರ್ಚಕರಿಗೆ 5 ಸಾವಿರ ಕೊಡುತ್ತಿದೆ. ಮೌಲ್ವಿಗೆ 1 ಲಕ್ಷ ರೂಪಾಯಿ ಕೊಡಲಾಗುತ್ತಿದೆ. ಯಾಕೆ ಈ ಸರ್ಕಾರಗಳು ತಾರತಮ್ಯ ಮಾಡುತ್ತಿದೆ? ಮುಸ್ಲಿಂ ತುಷ್ಠಿಕರಣದಿಂದ ಹೀಗೆ ಸರ್ಕಾರ ಓಲೈಕೆಗೆ ಮುಂದಾಗಿದೆ. ಇನ್ನು ಕೋಲಾರ ಬಸ್ ನಿಲ್ದಾಣದ ಮಾರುತಿ ದೇವಸ್ಥಾನ ಪುನರುಜ್ಜೀವನ ಮಾಡಲಾಗಿಲ್ಲ ಎಂದರೆ ಕೋಲಾರದ ರಾಮ ಭಕ್ತರೆ ದೇವಾಲಯವನ್ನು ಅಭಿವೃದ್ದಿ ಮಾಡಲಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Sun, 3 March 24

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ