ಹೊಸ ವರ್ಷದಂದು ದೇಗುಲದಲ್ಲಿ ಪ್ರಸಾದ ಸೇವಿಸಿ 12 ಮಕ್ಕಳು, 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ; 10 ಮಂದಿ ಡಿಸ್ಚಾರ್ಜ್, ಪ್ರಸಾದವೇ ವಿಶವಾಯ್ತಾ?

ಸಾದ ತಿಂದು ಜನರು ಮನೆಗೆ ಹೋಗಿದ್ದರು. ಆದರೆ ಸಂಜೆ ವೇಳೆಗೆ ಪ್ರಸಾದ ತಿಂದಿದ್ದ ಕೆಲವು ಭಕ್ತರಿಗೆ ವಾಂತಿ, ಬೇದಿ ಕಾಣಿಸಿಕೊಂಡಿತ್ತು. ಒಬ್ಬರಾದ ಮೇಲೆ ಒಬ್ಬರಿಗೆ ಇದೇ ರೀತಿ ಸಮಸ್ಯೆ ಕಾಣಿಸಿಕೊಂಡಿದೆ ತಕ್ಷಣ ಅಸ್ವಸ್ಥರನ್ನು ಪಕ್ಕದ‌ ಯಲ್ದೂರು ಸೇರಿದಂತೆ ಶ್ರೀನಿವಾಸಪುರ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಕೆಲವು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಹೊಸ ವರ್ಷದಂದು ದೇಗುಲದಲ್ಲಿ ಪ್ರಸಾದ ಸೇವಿಸಿ 12 ಮಕ್ಕಳು, 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ; 10 ಮಂದಿ ಡಿಸ್ಚಾರ್ಜ್, ಪ್ರಸಾದವೇ ವಿಶವಾಯ್ತಾ?
ಹೊಸ ವರ್ಷದಂದು ದೇಗುಲದಲ್ಲಿ ಪ್ರಸಾದ ಸೇವಿಸಿ 12 ಮಕ್ಕಳು, 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ; 10 ಮಂದಿ ಡಿಸ್ಚಾರ್ಜ್, ಪ್ರಸಾದವೇ ವಿಶವಾಯ್ತಾ?
Follow us
TV9 Web
| Updated By: ಆಯೇಷಾ ಬಾನು

Updated on: Jan 02, 2022 | 11:26 AM

ಕೋಲಾರ: ಹೊಸ ವರ್ಷದ ಹಿನ್ನಲೆಯಲ್ಲಿ ಅದೊಂದು ಗ್ರಾಮದ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಬಂದಿದ್ದ ನೂರಾರು ಭಕ್ತರಿಗೆ ಪೂಜೆ‌ ನಂತರ ಪ್ರಸಾದ ಕೂಡಾ ನೀಡಲಾಗಿತ್ತು. ಆದರೆ ಸಂಜೆ ವೇಳೆಗೆ ಆ ಪ್ರಸಾದ ಭಕ್ತರಿಗೆ ಆತಂಕ ಸೃಷ್ಟಿಮಾಡಿತ್ತು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಬೈರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಾಲಯದಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ ಹೋಮ ಏರ್ಪಡಿಸಲಾಗಿತ್ತು. ಪೂಜೆಗೆ ಗ್ರಾಮಸ್ಥರು ಸೇರಿದಂತೆ ಅಕ್ಕ ಪಕ್ಕದ‌ ಗ್ರಾಮದ ನೂರಾರು ಜನರು ಬಂದಿದ್ದರು. ಪೂಜೆ ನಂತರ ಬಂದಿದ್ದ ಜನಕ್ಕೆ ಕೇಸರಿಬಾತ್ ಹಾಗೂ ಚಿತ್ರಾನ್ನವನ್ನು ಪ್ರಸಾದವಾಗಿ ನೀಡಲಾಗಿತ್ತು. ಪ್ರಸಾದ ತಿಂದು ಜನರು ಮನೆಗೆ ಹೋಗಿದ್ದರು. ಆದರೆ ಸಂಜೆ ವೇಳೆಗೆ ಪ್ರಸಾದ ತಿಂದಿದ್ದ ಕೆಲವು ಭಕ್ತರಿಗೆ ವಾಂತಿ, ಬೇದಿ ಕಾಣಿಸಿಕೊಂಡಿತ್ತು. ಒಬ್ಬರಾದ ಮೇಲೆ ಒಬ್ಬರಿಗೆ ಇದೇ ರೀತಿ ಸಮಸ್ಯೆ ಕಾಣಿಸಿಕೊಂಡಿದೆ ತಕ್ಷಣ ಅಸ್ವಸ್ಥರನ್ನು ಪಕ್ಕದ‌ ಯಲ್ದೂರು ಸೇರಿದಂತೆ ಶ್ರೀನಿವಾಸಪುರ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಕೆಲವು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ದೇಗುಲದಲ್ಲಿ ಪ್ರಸಾದ ಸೇವಿಸಿ 12 ಮಕ್ಕಳು, 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಸಂಜೆ ವೇಳೆಗೆ ಬೀರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಾಲಯಕ್ಕೆ ಹೋಗಿದ್ದ ನೂರಾರು ಭಕ್ತರ ಪೈಕಿ ಒಬ್ಬರಾದ ಮೇಲೆ‌ ಒಬ್ಬರಂತೆ ವಾಂತಿ ಬೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಯತ್ತ ಬರಲು ಶುರುಮಾಡಿದರು. ಬಂದವರಿಗೆ ಶ್ರೀನಿವಾಸಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಇನ್ನು ಸುಮಾರು 12 ಜನ ಮಕ್ಕಳು ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಜನ ವಿವಿಧ ಆಸ್ಪತ್ರೆಗಳಿಗೆ ಬಂದು ದಾಖಲಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು. ಅಲ್ಲದೆ ಜನರು ಗಾಬರಿಯಾಗದಂತೆ ಧೈರ್ಯಹೇಳಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ರಾತ್ರಿ ವೇಳೆಗೆ ಅಸ್ವಸ್ಥರಲ್ಲಿ ಚೇತರಿಕೆ ಕಂಡ ನಂತರ ಸುಮಾರು ಹತ್ತು ಜನರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ ಎಂದು ತಾಲೂಕು ಆಸ್ಪತ್ರೆ ವೈದ್ಯ ಶ್ರೀನಿವಾಸ್ ತಿಳಿಸಿದ್ದಾರೆ.

ಇನ್ನು ಘಟನೆ ಸಂಬಂಧ ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ದೇವಾಲಯದ ಆಡಳಿತ ಮಂಡಳಿ‌ಯವರ ವಿರುದ್ಧ ಪ್ರಕರಣ ದಾಖಲು‌ ಮಾಡಿ ತನಿಖೆ‌ ಕೈಗೊಂಡಿದ್ದಾರೆ. ಒಟ್ಟಾರೆ ಹೊಸ ವರ್ಷದ ದಿನ ಒಳ್ಳೇದು ಮಾಡಪ್ಪಾ ದೇವರೇ ಎಂದು ದೇವಾಲಯಕ್ಕೆ‌ ಹೋದವರಿಗೆ ವರ್ಷದ ಮೊದಲ‌ ದಿನವೇ ಜೀವ ಹೋಗಿ ಬಂದಂತಾಗಿರೋದು ಮಾತ್ರ ಸುಳ್ಳಲ್ಲ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

ಇದನ್ನೂ ಓದಿ: ಕೋಲಾರ: ದೇಗುಲದಲ್ಲಿ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ; ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ