ಸಿಎಂ ಬೊಮ್ಮಾಯಿ ಈ ಬಾರಿ ಬಜೆಟ್​ನಲ್ಲಿ ಕೋಲಾರಕ್ಕೆ ಏನೇನು ಕೊಡ್ತಾರೆ ಗೊತ್ತಾ? ಕೋಲಾರದಲ್ಲಿ ವರ್ತೂರ್ ಪ್ರಕಾಶ್​ ಘೋಷಣೆ ಮಾಡಿದರು!

| Updated By: ಸಾಧು ಶ್ರೀನಾಥ್​

Updated on: Jan 06, 2023 | 6:07 PM

ಮುಖ್ಯಮಂತ್ರಿಗಳು ನನಗೆ ಕರೆ ಮಾಡಿದ್ದಾರೆ ಬಜೆಟ್​ನಲ್ಲಿ ಕೋಲಾರಕ್ಕೆ ಏನೇನು ಕೊಡಬೇಕು ಪಟ್ಟಿ ಕೊಡು ಎಂದು ಸೂಚಿಸಿದ್ದಾರೆ. ಎಲ್ಲವನ್ನೂ ಈ ಬಜೆಟ್​ನಲ್ಲಿ ಘೋಷಣೆ ಮಾಡ್ತಾರೆ.

ಸಿಎಂ ಬೊಮ್ಮಾಯಿ ಈ ಬಾರಿ ಬಜೆಟ್​ನಲ್ಲಿ ಕೋಲಾರಕ್ಕೆ ಏನೇನು ಕೊಡ್ತಾರೆ ಗೊತ್ತಾ? ಕೋಲಾರದಲ್ಲಿ ವರ್ತೂರ್ ಪ್ರಕಾಶ್​ ಘೋಷಣೆ ಮಾಡಿದರು!
ಸಿಎಂ ಬೊಮ್ಮಾಯಿ ಈ ಬಾರಿ ಬಜೆಟ್​ನಲ್ಲಿ ಕೋಲಾರಕ್ಕೆ ಏನೇನು ಕೊಡ್ತಾರೆ ಗೊತ್ತಾ?
Follow us on

ಕೋಲಾರ: ಜನವರಿ 9 ಕ್ಕೆ ಕೋಲಾರದಲ್ಲಿ ಸಂಭಾವ್ಯ ಅಸೆಂಬ್ಲಿ ಅಭ್ಯರ್ಥಿ (Karnataka Assembly Elections 2023), ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಮಾಜಿ ಸಚಿವ ವರ್ತೂರ್ ಪ್ರಕಾಶ್ (Varthur Prakash) ಸುದ್ದಿಗಾರರೊಂದಿಗೆ ಮಾತನಾಡಿದ್ದು, ಸಿದ್ದರಾಮಯ್ಯ ಅವರ ವಿರುದ್ಧ ವರ್ತೂರ್ ಪ್ರಕಾಶ್ ಅವರನ್ನ ಗೆಲ್ಲಿಸಬೇಕು ಅನ್ನೋದು ಕಾರ್ಯಕರ್ತರ ಆಸೆ. ಕೋಲಾರಕ್ಕೆ (Kolar) ಸಿದ್ದರಾಮಯ್ಯ ಬರಬೇಕು ಎಂಬುದಷ್ಟೆ ಕಾರ್ಯಕರ್ತರ ಆಸೆ. ನನ್ನ ಒಂದು ಕರೆಗೆ 25 ಸಾವಿರ ಜನ ಕಾರ್ಯಕ್ರಮಕ್ಕೆ ಬರ್ತಾರೆ. ಇದಕ್ಕೆ ಭಯಪಟ್ಟು ಸಿದ್ದರಾಮಯ್ಯ ಎಲ್ಲಿ ಬರೋದಿಲ್ಲವೋ ಎಂದು.. ಜ. 9 ರಂದು ನಾವು ನಡೆಸಬೇಕಿದ್ದ ಕಾರ್ಯಕ್ರಮವನ್ನ ಮುಂದೂಡಿದ್ದೇವೆ‌. ಸಿದ್ದರಾಮಯ್ಯ ಬರಬೇಕೆನ್ನುವುದು ನಮ್ಮೆಲ್ಲರ ಇಷ್ಟ. ಜನವರಿ 9 ಸೋಮವಾರ ಇದ್ದಿದ್ದೇ ಬೇರೆ ಪ್ಲಾನ್​. ಸಿದ್ದರಾಮಯ್ಯ ಕೋಲಾರಕ್ಕೆ ಬರಬೇಕು ಅನ್ನೋದು ನಮ್ಮ ಆಸೆ. ಅದು ತಪ್ಪೋಗುತ್ತದೆ ಅನ್ನೋ ಕಾರಣಕ್ಕೆ ಸೋಮವಾರದ ನನ್ನ ಕಾರ್ಯಕ್ರಮವನ್ನು ಮುಂದೂಡಿದೆ. ಸಿದ್ದರಾಮಯ್ಯ ಅವರನ್ನು ಸ್ವಾಗತ ಮಾಡುತ್ತೇವೆ, ಅದಾದ ನಂತರ ಮುಂದೆ ಹೋಗುತ್ತೇವೆ. ಆದರೆ ಘಟಭಂದನ್ ಅಂಕಿಅಂಶಗಳಂತೆ ಒಂದು ಲಕ್ಷ ಮತಗಳ ಅಂತರದಿಂದ ಸಿದ್ದರಾಮಯ್ಯ ಅವರನ್ನ ಗೆಲ್ಲಿಸುವುದು ಸುಳ್ಳು. ಯಾವ ಹಳ್ಳಿಯಲ್ಲೂ ಕಾಂಗ್ರೆಸ್ ಪಕ್ಷ ಇಲ್ಲ‌, ಇನ್ನು ಜನ ಯಾವ ರೀತಿ ಕಾರ್ಯಕ್ರಮಕ್ಕೆ ಬರ್ತಾರೆ ಅನ್ನೋದು ಕುತೂಹಲ ಅಷ್ಟೆ ಎಂದು ವರ್ತೂರ್ ಪ್ರಕಾಶ್ ಹೇಳಿದ್ದಾರೆ.

ವರ್ತೂರ್ ಪ್ರಕಾಶ್ ಇನ್ನೂ ಏನೆಲ್ಲ ಹೇಳಿದ್ದಾರೆ…

ಸಿದ್ದರಾಮಯ್ಯ ಅವರಿಗೆ ಪುತ್ರ ವ್ಯಾಮೋಹವಿದೆ. ಮಗನೂ ಎಂ.ಎಲ್.ಎ ಆಗಬೇಕು. ವರ್ತೂರ್ ಪ್ರಕಾಶ್ ಹಾಳಾಗಬೇಕು, ಇನ್ನೊಂದು ಕಡೆ ಸಮಾಜವೂ ಹಾಳಾಗಬೇಕು. ಇದು ಸಿದ್ದರಾಮಯ್ಯ ಅವರ ತಂತ್ರ. ಅವರ ಭವಿಷ್ಯ ಈ ಚುನಾವಣೆಯಲ್ಲಿ ನಿರ್ಧಾರ ಆಗುತ್ತದೆ. ಕೋಲಾರದಲ್ಲಿ ಜನರನ್ನ ಮನವೊಲಿಸಲು ಅಭಿವೃದ್ದಿ ಕಾರ್ಯಗಳು ಮಾಡ್ತಾರೆ ಎಂದು ಹೇಳ್ತಿದಾರೆ‌. ಆದರೆ ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು? ಬಾದಾಮಿಯಲ್ಲಿ ಸಾವಿರಾರು ಕೋಟಿ ಕೆಲಸ ಮಾಡಿದರೂ ಯಾಕೆ ಅಲ್ಲಿ ಸ್ಪರ್ದಿಸುತ್ತಿಲ್ಲ‌? ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಠೇವಣಿ ಸಹ ಬರುವುದಿಲ್ಲ. ಅವರಿಗೆ ಉಳಿದಿರುವುದು ವರುಣ ಕ್ಷೇತ್ರ ಒಂದೇ, ಆದರೆ ಪುತ್ರ ವ್ಯಾಮೋಹ. ಬಿಟ್ಟುಕೊಡ್ತಿಲ್ಲ.

ಕೋಲಾರದಲ್ಲಿ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗಳಾಗಬೇಕು ಎಂದುಕೊಂಡಿದ್ದವರು ನನಗೆ ಪೋನ್​ ಮಾಡಿ ನನಗೇ ಸಪೋರ್ಟ್​ ಮಾಡೋದಾಗಿ ಹೇಳಿದ್ದಾರೆ. ಬೆಂಗಳೂರಿನಿಂದ ಪ್ರತಿನಿತ್ಯ ಪೋನ್​ ಕಾಲ್​ಗಳು ಬರುತ್ತಲೇ ಇವೆ. ನೀನು ಹುಲಿ, ಮೈಸೂರು ಹುಲಿಯನ್ನು ಸೋಲಿಸಲೇಬೇಕು. ಕಾಂಗ್ರೆಸ್​ ಕಾರ್ಯಕರ್ತರಿಲ್ಲ ಊರಿಗೆ ಹತ್ತು ಜನರಿಲ್ಲ ಎಂದು ಹೇಳುತ್ತಿದ್ದಾರೆ.

ಮುಖ್ಯಮಂತ್ರಿಗಳು ನನಗೆ ಕರೆ ಮಾಡಿದ್ದಾರೆ ಬಜೆಟ್​ನಲ್ಲಿ ಕೋಲಾರಕ್ಕೆ ಏನೇನು ಕೊಡಬೇಕು ಪಟ್ಟಿ ಕೊಡು ಎಂದು ಸೂಚಿಸಿದ್ದಾರೆ. ಕೋಲಾರಕ್ಕೆ ರಿಂಗ್ ರಸ್ತೆ, ಏಷ್ಯಾದಲ್ಲೇ ನಂಬರ್​ ಒನ್​ ಮಾರುಕಟ್ಟೆ ಶಿಫ್ಟ್​ ​ಮಾಡಿ, ದೊಡ್ಡ ಮಾರುಕಟ್ಟೆ ಮಾಡೋದಕ್ಕೆ ಬೇಕಾದ ಅನುದಾನದ ಕೊಡ್ತಾರೆ, ಎಲ್ಲವನ್ನೂ ಈ ಬಜೆಟ್​ನಲ್ಲಿ ಘೋಷಣೆ ಮಾಡ್ತಾರೆ.

ಸಿಎಂ ಸಿದ್ದರಾಮಯ್ಯ ಹೆಸರೇಳೋದಿಲ್ಲ ಅವರಿಗೆ ವರ್ತೂರ್ ಪ್ರಕಾಶ್​ ಗೆಲ್ಲಬೇಕು ಅಷ್ಟೇ. ಇದು ನನ್ನ ಜೀವನದಲ್ಲಿ ಮಹಾಯುದ್ದ. ಜೀವನದಲ್ಲಿ ಸೋಲೋದಿಲ್ಲ, ನಿಮ್ಮ ಮನೆಯ ಮಗನಾಗಿ ಕೆಲಸ ಮಾಡ್ತೀನಿ. ನಾನೇನು ಸನ್ಯಾಸಿ ಅಲ್ಲ, ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಎರಡು ಬಾರಿ ಇಂಡಿಪೆಂಡೆಂಟ್​ ಎಂಎಲ್​ಎ ಆಗಿದ್ದವ. ಸಿದ್ದರಾಮಯ್ಯ ಬರಲಿ, ರಾಹುಲ್​ ಗಾಂಧಿ ಬರಲಿ, ಯಾರೇ ಬರಲಿ ಒಳ್ಳೆ ವಾತಾವರಣವಿದೆ. ಕಳೆದ ಮೂರು ದಿನಗಳಿಂದ ಅಲ್ಪಸಂಖ್ಯಾತರು ಕೂಡಾ ನನಗೆ ಸಪೋರ್ಟ್​ ಮಾಡೋದಕ್ಕೆ ಸಿದ್ದವಾಗಿದ್ದಾರೆ. ಇನ್ನು ಮುಂದೆ ನಾನು ಅಲ್ಪಸಂಖ್ಯಾಂತರ ಏರಿಯಾಗಳಿಗೆ ಹೋಗುತ್ತೇನೆ. ಕಾಂಗ್ರೆಸ್​​ ಪಕ್ಷಕ್ಕೆ ಎಷ್ಟು ಓಟು ಬರುತ್ತದೋ ಅಷ್ಟೇ ಓಟು ನಮಗೂ ಬರಬೇಕು. ನಾನು ಯಾವತ್ತೂ ಮುಸ್ಲಿಂ ಮತಗಳು ಬೇಡ ಎಂದು ಹೇಳಿಲ್ಲ. ಅಲ್ಪಸಂಖ್ಯಾತರ ಓಟುಗಳು ವರ್ತೂರ್ ಪ್ರಕಾಶ್​ಗೆ ಬೇಕು. ಯಾರು ಹಿಂದುತ್ವವನ್ನು ಮೆಚ್ಚಿದರೆ, ಯಾರು ನಮ್ಮ ದೇಶದ ಸ್ವಾಭಿಮಾನವನ್ನು ಮೆಚ್ಚಿದ್ದಾರೆ ಅವರನ್ನು ನಾನು ಸ್ವಾಗತಿಸುತ್ತೇನೆ. ಯಾರು ಹಿಂದುತ್ವನ್ನು ವಿರೋಧಿಸುತ್ತಾರೆ, ಯಾರೂ ದೇಶವನ್ನು ವಿರೋಧಿಸುತ್ತಾರೆ ಅವರನ್ನು ನಾವು ವಿರೋಧಿಸುತ್ತೇವೆ.

ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ