ಕೋಲಾರ: ಚಿನ್ನದ ನಾಡು ಕೋಲಾರಕ್ಕೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಭೇಟಿ ಕೊಟ್ಟಿದ್ದಾರೆ. ಕೋಲಾರ ಬಂಗಾರಪೇಟೆ ವೃತ್ತದ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಮಾಲಾರ್ಪಣೆ ಬಳಿಕ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿರುವ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲು ಕೋಲಾರಕ್ಕೆ ಬಂದಿದ್ದೇನೆ ಎಂದರು.
ಬಿಜೆಪಿ ಸಂಸದರು ಬಂದ ಮೇಲೆ ಕೋಲಾರ ಸಾಕಷ್ಟು ಬದಲಾವಣೆ ಖಂಡಿದೆ. ಕೆಜಿಎಫ್ನಲ್ಲಿ ಇರುವವರು ತಮಿಳುನಾಡು ಹಾಗೂ ಕರ್ನಾಟಕ ಎರಡು ಕಡೆ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಭಾರತದಲ್ಲಿ ರಾಜಕೀಯವನ್ನ ಎರಡು ಕಡೆ ನೋಡಬಹುದು. ಕರ್ನಾಟಕ ಹಾಗು ತಮಿಳುನಾಡು ಒಗ್ಗಾಟ್ಟಾಗಿರೋದಕ್ಕೆ ಅನೇಕ ನಿದರ್ಶನಗಳಿವೆ. ಬೆಂಗಳೂರಿನಲ್ಲಿ ಸಾಕಷ್ಟು ಮಂದಿ ತಮಿಳುನಾಡಿನವರು ಕೆಲಸ ಮಾಡ್ತಿದ್ದಾರೆ. ಕರ್ನಾಟಕದಿಂದ ತರಕಾರಿ ಸೇರಿದಂತೆ ಅನೇಕ ವಸ್ತುಗಳು ತಮಿಳುನಾಡಿಗೆ ಬರುತ್ತಿದೆ. ಹೀಗಾಗಿ ಕರ್ನಾಟಕ ತಮಿಳುನಾಡು ಅನುನ್ಯವಾಗಿದೆ ಎಂದರು.
ಇನ್ನು ಮೇಕೆದಾಟು ವಿವಾದ ವಿಚಾರ ಕುರಿತು ಅಣ್ಣಾಮಲೈ ಮಾತನಾಡಿದ್ರು, ಕಾಂಗ್ರೆಸ್ ನವರು ಕರ್ನಾಟಕ ಹಾಗೂ ತಮಿಳುನಾಡು ಎಂದು ಬೇರ್ಪಡಿಸ್ತಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನ ಮಾಡುತ್ತೆ. ತಮಿಳುನಾಡು ಮುಖ್ಯಮಂತ್ರಿ ಕರ್ನಾಟಕ ಮುಖ್ಯಮಂತ್ರಿ ಸ್ಪಷ್ಟವಾಗಿ ಇದ್ದಾರೆ ಎಂದರು. ಇನ್ನು ಇದೇ ವೇಳೆ ಪಿಎಸ್ಐ ಹಗರಣ ಕುರಿತು, ತಮಿಳುನಾಡಿನಲ್ಲಿ ರಾಜಕೀಯ ಸಭೆ ಸಮಾರಂಭಗಳಲ್ಲಿ ತುಂಬಾ ಬ್ಯುಸಿ ಇದ್ದೇನೆ. ಪಿಎಸ್ಐ ಹಗರಣ ಕುರಿತು ನನಗೆ ಮಾಹಿತಿ ಇಲ್ಲ. ಅದರ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ. ಆದ್ರೆ ಯಾರಿಗೂ ಅನ್ಯಾಯವಾಗಬಾರದು. ನೇಮಕಾತಿ ಪಾರದರ್ಶಕವಾಗಿ ಆಗಬೇಕು ಅನ್ನೋದು ನನ್ನ ಅಭಿಪ್ರಾಯ ಎಂದರು.
ಮಧುರೈ ಅಧೀನಂ ಪೀಠದವರಿಗೆ ಜೀವಭಯ ಇದೆ
ಇನ್ನು ಮತ್ತೊಂದೆಡೆ ಮಧುರೈ ಅಧೀನಂ ಪೀಠದ ಉತ್ಸವದಲ್ಲಿ ಪಲ್ಲಕಿ ಬ್ಯಾನ್ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸರ್ಕಾರ ಮೊದಲ ಬಾರಿ ಬಿಜೆಪಿಗೆ ಮಣಿದಿದೆ ಎಂದು ಕೋಲಾರದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ರು.
ಉತ್ಸವ ಮೇಲೆ ಹೇರಿದ್ದ ನಿಷೇಧವನ್ನ ಸರ್ಕಾರ ವಾಪಸ್ ಪಡೆದಿದೆ. ಮಾನವ ಹಕ್ಕು ಉಲ್ಲಂಘನೆ ಎಂದು ಸ್ಟಾಲಿನ್ ಸರ್ಕಾರ ಉತ್ಸವದ ಮೇಲೆ ನಿಷೇಧ ಹೇರಿತ್ತು. ತಮಿಳುನಾಡಿನಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ. ಮಧುರೈ ಅಧೀನಂ ಪೀಠದವರಿಗೆ ಜೀವ ಭಯವಿದೆ. ಹೀಗಾಗಿ ಜೀವಭಯದ ಬಗ್ಗೆ ಪ್ರಧಾನಿ ಮೋದಿಗೆ ದೂರು ನೀಡಲಾಗಿದೆ. ಡಿಎಂಕೆ ತಮಿಳುನಾಡಿಗೆ ಬೇರೆ ರೂಪ ಕೊಡಲು ಯತ್ನಿಸುತ್ತಿದೆ. ಬಿಜೆಪಿ ಹಾಗೂ ಮೋದಿ ಸರ್ಕಾರ ಇದಕ್ಕೆಲ್ಲ ಅವಕಾಶ ನೀಡಲ್ಲ. ತಮಿಳುನಾಡು ಸಂಸ್ಕೃತಿ ಹಾಳು ಮಾಡಲು ಬಿಜೆಪಿ ಬಿಡುವುದಿಲ್ಲ ಎಂದು ಕೋಲಾರದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ರು.
Published On - 4:30 pm, Sun, 8 May 22