ಕೋಲಾರ: ಗಣಪತಿಯನ್ನು ವಿವಿಧ ರೀತಿಯಲ್ಲಿ, ವಿವಿಧ ಪರಿಕಲ್ಪನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಇದೇ ವೇಳೆ ಸೃಜನಶೀಲತೆಯನ್ನು ಬಳಸಿಕೊಂಡು ವರ್ತಮಾನದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಕಾರ್ಯಗಳನ್ನೂ ಕಲಾಕಾರರು ಮಾಡುತ್ತಾರೆ. ಮಾಸ್ಕ್ ಧರಿಸಿರುವ ಗಣಪ ಇದಕ್ಕೆ ಉತ್ತಮ ಉದಾಹರಣೆ. ಅಂತೆಯೇ ಸಿನಿ ರಂಗದ ಪ್ರೇಮಿಗಳು ತಮ್ಮ ನೆಚ್ಚಿನ ನಟನ ನೂತನ ಚಿತ್ರದ ಪರಿಕಲ್ಪನೆಯಲ್ಲಿ ಗಣೇಶನನ್ನು ತಯಾರಿಸಿ ಈ ಬಾರಿ ಗಮನ ಸೆಳೆದಿದ್ಧಾರೆ. ಅಂತೆಯೇ ಕೋಲಾರದ ಶಿಕ್ಷಕ ದಂಪತಿ, ಟಿವಿ9ನಲ್ಲಿ ಪ್ರಸಾರವಾದ ವಿಶೇಷ ಸುದ್ದಿಗಳನ್ನು ಆಧರಿಸಿ ಗಣೇಶನ ಮೂರ್ತಿಗಳನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
ಟಿವಿ9 ಅಭಿಮಾನಿ ಕುಟುಂಬದಿಂದ ವಿನೂತನ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದ್ದು ಎಲ್ಲರ ಗಮನ ಸೆಳೆದಿದೆ. ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ದಯಾನಂದ್ ಹಾಗೂ ಕೋಮಲ ಶಿಕ್ಷಕ ದಂಪತಿಯು ವಿನೂತನ ಪ್ರಯತ್ನ ನಡೆಸಿದ್ದಾರೆ. ಕಾಬೂಲ್ ಏರ್ಪೋರ್ಟ್ ನಿರ್ಮಾಣ ಮಾಡಿ ತಾಲಿಬಾನಿಗಳ ಅಟ್ಟಹಾಸದ ಚಿತ್ರಣ, ಸ್ಟಾಪ್ ಟೆರರಿಸಂ ಅನ್ನೋ ಸಂದೇಶದ ಚಿತ್ರಣ, ತಾಲಿಬಾನಿಗಳಿಗೆ ಬುದ್ದಿ ಕಲಿಸುತ್ತಿರುವ ಗಣೇಶ ಮೊದಲಾದ ಪರಿಕಲ್ಪನೆಯಲ್ಲಿ ಗಣೇಶನನ್ನು ಸ್ಥಾಪಿಸಿದ್ದಾರೆ.
ಇದರೊಂದಿಗೆ, ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳ ರುಂಡ ಕತ್ತರಿಸಿ ಶಿಕ್ಷೆ ನೀಡುತ್ತಿರುವ ಗಣೇಶನ ಕಲ್ಪನೆಯಲ್ಲೂ ಮೂರ್ತಿ ರಚಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಟಿವಿ9 ಮಾಡಿದ ಅಭಿಯಾನಕ್ಕೆ ಗಣೇಶನ ಶ್ಲಾಘನೆ ಪರಿಕಲ್ಪನೆಯಲ್ಲಿ ಕಲಾಕೃತಿ ರಚಿಸಿದ್ದಾರೆ. ಈ ಮೂಲಕ ಗಣೇಶ ಹಬ್ಬದಂದು ಸಮಾಜಕ್ಕ ಸಂದೇಶ ಕೊಡುವ ಪ್ರಯತ್ನ ನಡೆಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ:
‘ಮಾಸ್ಕ್ ಧರಿಸಿ ವ್ಯಾಕ್ಸಿನ್ ಹಿಡಿದ ಗಣಪ’ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗಣೇಶ ಚತುರ್ಥಿಗೆ ಶುಭಾಶಯ
Vikrant Rona: ವಿಕ್ರಾಂತ್ ರೋಣ ಗೆಟಪ್ನಲ್ಲಿ ಕಂಗೊಳಿಸುತ್ತಿರುವ ಗಣೇಶ; ಹೇಗಿದೆ ನೋಡಿ ಸುದೀಪ್ ಸಿನಿಮಾ ಕ್ರೇಜ್
(TV9 fan family recreate Afghanisthan and Mysuru issue news with Ganapathi imgination see pics)
Published On - 12:51 pm, Fri, 10 September 21