ಕೋಲಾರ: ಮೀಟರ್ ಬಡ್ಡಿಗೆ ಬೇಸತ್ತು ನಿದ್ದೆ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಅತ್ತಗಿರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀದೇವಮ್ಮ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿಟ್ಟಿರುವ ಲಕ್ಷ್ಮೀದೇವಮ್ಮ ವಿಡಿಯೋದಲ್ಲಿ ಮೂವರ ವಿರುದ್ಧ ಆರೋಪ ಮಾಡಿದ್ದಾರೆ.
ಕೋಲಾರದಲ್ಲಿ ಮೀಟರ್ ಬಡ್ಡಿಕೋರರ ಕಿರುಕುಳ ತಾಳಲಾಗದೆ ನಿದ್ರೆ ಮಾತ್ರೆ ಸೇವಿಸಿ ಲಕ್ಷ್ಮೀದೇವಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದು ಸಾವಿಗೂ ಮುನ್ನ ವಿಡಿಯೋ ಮಾಡಿದ್ದಾರೆ. ಮೃತ ಲಕ್ಷ್ಮೀದೇವಮ್ಮ ಬಂಗಾರಪೇಟೆ ಹಾಗೂ ಹುಲಿಬೆಲೆ ಗ್ರಾಮದ ಕೆಲವರ ಬಳಿ ಸಾಲ ಪಡೆದಿದ್ದರು. ಸಾಲ ತೀರಿಸದಿದ್ದಕ್ಕೆ ಮನಬಂದಂತೆ ಬಡ್ಡಿ ಹಣ ಕೇಳುತ್ತಿದ್ದರು. ಹಣ ಕೊಡದೇ ಇದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾರೆ ಎಂದು ಲಕ್ಷ್ಮೀದೇವಮ್ಮ ಆರೋಪ ಮಾಡಿದ್ದಾರೆ.
ಲಕ್ಷ್ಮೀದೇವಮ್ಮ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಸಂಬಂಧಿಕರು ಮಹಿಳೆಯನ್ನು ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಸದ್ಯ ಘಟನೆ ಸಂಬಂಧ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಡಿಯೋ ಆಧರಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವೃದ್ಧ ಬಲಿ
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವೃದ್ಧ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ರಸ್ತೆಯಲ್ಲಿ ನಡೆದಿದೆ. ಹೊಸಹಳ್ಳಿ ಗ್ರಾಮದ ದಾಮೋದರ್ ರಾಜು(62) ಮೃತ ದುರ್ದೈವಿ. ಹಾಲು ತೆಗೆದುಕೊಂಡು ಡೈರಿಗೆ ಹೋಗ್ತಿದ್ದ ವೇಳೆ ರಾತ್ರಿ ತುಂಡಾಗಿ ಬಿದ್ದಿದ್ದ 11 ಕೆವಿ ವಿದ್ಯುತ್ ತಂತಿಯಿಂದ ಅವಘಡ ಸಂಭವಿಸಿದೆ. ರಾತ್ರಿ ತುಂಡಾಗಿ ಬಿದ್ದ ತಂತಿಯನ್ನು ಬೆಳಗ್ಗೆ ವರೆಗೂ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಕರೆಂಟ್ ಶಾಖ್ ಹೊಡೆತಕ್ಕೆ ಸ್ಥಳದಲ್ಲೆ ಮೃತನ ಕಾಲು ಮತ್ತು ಕೈ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಖಾಸಗಿ ಶಾಲೆಗಳನ್ನು ಮೀರಿಸಿ ನಂ.1 ಸ್ಥಾನ ಪಡೆದ ಸರ್ಕಾರಿ ಶಾಲೆ; ರಾಯಚೂರಿನಲ್ಲೇ ನಂಬರ್ ಒನ್ ಹೈಟೆಕ್ ಕಂಪ್ಯೂಟರ್ ಲ್ಯಾಬ್!
Published On - 11:06 am, Fri, 24 December 21