ಖಾಸಗಿ ಶಾಲೆಗಳನ್ನು ಮೀರಿಸಿ ನಂ.1 ಸ್ಥಾನ ಪಡೆದ ಸರ್ಕಾರಿ ಶಾಲೆ; ರಾಯಚೂರಿನಲ್ಲೇ ನಂಬರ್ ಒನ್ ಹೈಟೆಕ್ ಕಂಪ್ಯೂಟರ್ ಲ್ಯಾಬ್!
ವಿಜ್ಞಾನ, ಗಣಿತ ಸೇರಿ ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಡೆಮೊ ರೂಂ ಹಾಗೂ ಲ್ಯಾಬ್ ರೂಂ ಅಂತ ವಿಂಗಡಿಸಿ ಬೋಧನೆ ಮಾಡಲಾಗುತ್ತಿದೆ.
ರಾಯಚೂರು: ಖಾಸಗಿ ಶಾಲೆಗಳನ್ನು ಮೀರಿಸಿ ನಂ.1 ಸ್ಥಾನ ಪಡೆಯುವಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಸರ್ಕಾರಿ ಶಾಲೆ ಯಶಸ್ವಿಯಾಗಿದೆ. ರಾಯಚೂರು ಜಿಲ್ಲೆಯಲ್ಲೇ ನಂಬರ್ ಒನ್ ಹೈಟೆಕ್ ಕಂಪ್ಯೂಟರ್ ಲ್ಯಾಬ್ (Computer lab) ಅನ್ನು ಜವಳಗೇರಾ ಸರ್ಕಾರಿ ಶಾಲೆ ಹೊಂದಿದ್ದು, ಈಗ ಕಂಪ್ಯೂಟರ್ ಲ್ಯಾಬ್ಗೆ ನಂ.1 ಸ್ಥಾನ ಸಿಕ್ಕಿದೆ. ಸುಮಾರು 1980 ವಿದ್ಯಾರ್ಥಿಗಳು (Students) ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಸರ್ಕಾರಿ ಹೈಟೆಕ್ ಕಂಪ್ಯೂಟರ್ ಲ್ಯಾಬ್ಗೆ ಖಾಸಗಿ ಶಾಲಾ ಮಕ್ಕಳು ಮನಸೋತಿದ್ದಾರೆ. ಜವಳಗೇರಾ ಸರ್ಕಾರಿ ಶಾಲೆಯಲ್ಲಿ ಪ್ರೊಜೆಕ್ಟರ್, ಏಸಿ, ಎಲ್ಇಡಿ ಡಿಸ್ಪ್ಲೇಯಲ್ಲಿ ಕಂಪ್ಯೂಟರ್ ಮೂಲಕವೇ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ. 50ಕ್ಕೂ ಹೆಚ್ಚು ಕಂಪ್ಯೂಟರ್ಗಳ ಮೂಲಕ ಭೋಧಿಸಲಾಗುತ್ತಿದ್ದು, ವಿವಿಧ ಹೈಟೆಕ್ ಉಪಕರಣಗಳ ಬಳಕೆ ಈ ಸರ್ಕಾರಿ ಶಾಲೆಯಲ್ಲಿ ಇದೆ.
ವಿಜ್ಞಾನ, ಗಣಿತ ಸೇರಿ ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಡೆಮೊ ರೂಂ ಹಾಗೂ ಲ್ಯಾಬ್ ರೂಂ ಅಂತ ವಿಂಗಡಿಸಿ ಬೋಧನೆ ಮಾಡಲಾಗುತ್ತಿದೆ. ವಿವಿಧ ಉಚಿತ ಸಾಫ್ಟ್ವೇರ್ಗಳ ಮೂಲಕವೇ ಮಕ್ಕಳಿಗೆ ತರಬೇತಿ ನೀಡುತ್ತಿರುವುದು ವಿಶೇಷ.
ಕೆಪಿಎಸ್ಸಿ ಮೂಲಕ ಈ ಸೌಲಭ್ಯ ಸದ್ಬಳಕೆ ಮಾಡಿಕೊಂಡಿದ್ದೇವೆ. ಕಂಪ್ಯೂಟರ್ ಮೂಲಕವೇ ತರಬೇತಿ ನೀಡುತ್ತಿದ್ದೇವೆ. ಎಲ್ಲಾ ಮಕ್ಕಳಿಗೂ ಕಂಪ್ಯೂಟರ್ ಮೂಲಕವೇ ಟ್ರೈನಿಂಗ್ ನೀಡಲಾಗುತ್ತಿದೆ. ರಆಯಚೂರಿನಲ್ಲೇ ನಂಬರ್ ಒನ್ ಸ್ಥಾನ ಪಡೆದಿದ್ದೇವೆ ಎಂದು ಜವಳಗೇರಾ ಸರ್ಕಾರಿ ಶಾಲೆ ಶಿಕ್ಷಕ ಗಿರೀಶ್ ಹೇಳಿದ್ದಾರೆ.
ಕಂಪ್ಯೂಟರ್ ನೋಡಿದ್ವಿ ಅಷ್ಟೇ. ಅದನ್ನು ಬಳಕೆ ಮಾಡಿರಲಿಲ್ಲ. ಈ ಲ್ಯಾಬ್ನಿಂದ ನಾವೇ ಕಂಪ್ಯೂಟರ್ನಲ್ಲಿ ಕಲಿಯುತ್ತಿದ್ದೇವೆ. ಖಾಸಗಿ ಶಾಲೆ ಮಕ್ಕಳು, ನಮ್ಮ ಶಾಲೆಯಲ್ಲಿರುವ ಸೌಲಭ್ಯ ನಿಮ್ಮಲಿಲ್ಲ ಅಂತಿದ್ದರು. ಈಗ ನಮಗೂ ಎಲ್ಲಾ ಸೌಲಭ್ಯವಿದೆ. ಸರ್ಕಾರಿ ಶಾಲೆ ಮಕ್ಕಳು ದಡ್ಡರು ಅಂತಾರೆ. ಆದರೆ ಈಗ ನಮ್ಮ ಶಾಲೆ ಮಕ್ಕಳು ಯಾರಿಗೂ ಕಮ್ಮಿಯಿಲ್ಲ ಎಂದು ವಿದ್ಯಾರ್ಥಿನಿ ವಿಜಯಲಕ್ಷ್ಮೀ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:
ಉಡುಪಿ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಮಟ್ಟದ ಸಾಧನೆ; ಎಲ್ಪಿಜಿ ಉಳಿತಾಯ ಜಿಎಸ್ಕೆ ಕಿಟ್ ತಯಾರಿ
Published On - 10:53 am, Fri, 24 December 21