Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಮಟ್ಟದ ಸಾಧನೆ; ಎಲ್​ಪಿಜಿ ಉಳಿತಾಯ ಜಿಎಸ್​ಕೆ ಕಿಟ್​ ತಯಾರಿ

ಕೇವಲ 600 ರೂಪಾಯಿಯ ಆಸುಪಾಸಿನಲ್ಲಿ ತಯಾರಿಸಲಾದ ಜಿಎಸ್​ಕೆ (GAS SAVING KIT) ಉಪಕರಣವನ್ನು, ಗ್ಯಾಸ್ ಸ್ಟೌಗೆ ಅಳವಡಿಸಿದರೆ, ಒಲೆಯ ಮೇಲೆ ಅಡುಗೆ ಆಗುತ್ತಿರುವಾಗಲೇ, ಇಡೀ ಕುಟುಂಬಕ್ಕೆ ಬೇಕಾಗುವಷ್ಟು ಸ್ನಾನದ ಬಿಸಿ ನೀರು ಪುಕ್ಕಟೆಯಾಗಿ ದೊರಕುತ್ತದೆ.

ಉಡುಪಿ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಮಟ್ಟದ ಸಾಧನೆ; ಎಲ್​ಪಿಜಿ ಉಳಿತಾಯ ಜಿಎಸ್​ಕೆ ಕಿಟ್​ ತಯಾರಿ
ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ
Follow us
TV9 Web
| Updated By: preethi shettigar

Updated on:Oct 26, 2021 | 8:57 AM

ಉಡುಪಿ: ಪಶ್ಚಿಮ ಘಟ್ಟಗಳ ಸಾಲು, ಎಲ್ಲಿ ನೋಡಿದರೂ ಹೆಜ್ಜೆಹೆಜ್ಜೆಗೆ ಎಡತಾಕುವ ಹಸಿರಿನ ಕಾಡುಗಳು, ಎಣಿಕೆಗೆ ಸಿಗದ ಬೆಟ್ಟಗಳು, ಕ್ಷಣಕ್ಷಣಕೆ ಹೊಸತನ್ನು ತಿಳಿಸುವ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ. ಇಂತಹಾ ಸುಂದರ ವಾತಾವರಣದ ಮಧ್ಯೆ ಚಿಗುರಿದ ಎರಡು ಪುಟ್ಟ ಪ್ರತಿಭೆಗಳು ರಾಷ್ಟ್ರಮಟ್ಟದ ಸಾಧನೆಯ ಮೂಲಕ ಹೆಸರು ಮಾಡಿದ್ದಾರೆ. ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ ಗ್ರಾಮೀಣ ಶಾಲೆಯಾದರೂ ದೇಶವೇ ಮೆಚ್ಚುವ ಸಾಧನೆಗಳ ಮೂಲಕ ಗುರುಸಿಕೊಂಡಿದೆ.

ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಅಲ್ಬಾಡಿ-ಆರ್ಡಿಯಲ್ಲಿ‌ ಈ ಶಾಲೆ ಇದೆ. ಹಳ್ಳಿಮೂಲೆಯ ಶಾಲೆ ಒಂದೂವರೆ ವರ್ಷಗಳಲ್ಲಿ ಮೂರು ಬಾರಿ ರಾಷ್ಟ್ರಮಟ್ಟದ ಸಾಧನೆ ಮಾಡಿ ಹೆಸರುವಾಸಿಯಾಗಿದೆ. ಹೌದು, ಸಿಎಸ್​ಐಆರ್​ ಇನೋವೆಷನ್​ ಅವಾರ್ಡ್​ ಫಾರ್​ ಸ್ಕೂಲ್​ ಚಿಲ್ಡ್ರನ್​ 2021( INNOVATION AWARD FOR SCHOOL CHILDREN 2021) ರ ರಾಷ್ಟ್ರಪ್ರಶಸ್ತಿ ಪಡೆದ ಇಡೀ ದೇಶದ ಏಕೈಕ ಸರಕಾರಿ ಶಾಲೆ ಎಂಬುವುದು ಈ ಶಿಕ್ಷಣ ಕೇಂದ್ರದ ವೈಶಿಷ್ಟ್ಯ. ಈಗ ರಾಷ್ಟ್ರಮಟ್ಟದ ಈ ಪ್ರಶಸ್ತಿಗೆ ಭಾಜನರಾದವರು ಅತ್ಯಂತ ಗ್ರಾಮೀಣ ಪ್ರದೇಶದ ಇಬ್ಬರು ಹೆಣ್ಣು ಮಕ್ಕಳು ಎನ್ನುವುದು ಇನ್ನೊಂದು ವಿಶೇಷ.

10ನೇ ತರಗತಿಯ ಅನುಷಾ ಹಾಗೂ ರಕ್ಷಿತ ನಾಯ್ಕ ಎಂಬಿಬ್ಬರು ವಿದ್ಯಾರ್ಥಿನಿಯರು ಈ ಸಾಧನೆಯನ್ನು ಮಾಡಿ, ‘ಅಲ್ಬಾಡಿ-ಆರ್ಡಿ’ ಎಂಬ ಅತ್ಯಂತ ಗ್ರಾಮೀಣ ಪ್ರದೇಶದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಪಸರಿಸಿದ್ದಾರೆ. ಈ ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಸಾಯ್ಬರಕಟ್ಟೆ ಇವರ ನಿರ್ದೇಶನದಲ್ಲಿ, ಶಾಲೆಯ ವಿಜ್ಞಾನ ಶಿಕ್ಷಕಿ ವೈಶಾಲಿ ರಾವ್ ಅವರ ಮಾರ್ಗದರ್ಶನದಲ್ಲಿ ಜಿಎಸ್​ಕೆ ಕಿಟ್‌ನ್ನು ಸಿದ್ಧಪಡಿಸಲಾಗಿತ್ತು.

ಕೇವಲ 600 ರೂಪಾಯಿಯ ಆಸುಪಾಸಿನಲ್ಲಿ ತಯಾರಿಸಲಾದ ಜಿಎಸ್​ಕೆ (GAS SAVING KIT) ಉಪಕರಣವನ್ನು, ಗ್ಯಾಸ್ ಸ್ಟೌಗೆ ಅಳವಡಿಸಿದರೆ, ಒಲೆಯ ಮೇಲೆ ಅಡುಗೆ ಆಗುತ್ತಿರುವಾಗಲೇ, ಇಡೀ ಕುಟುಂಬಕ್ಕೆ ಬೇಕಾಗುವಷ್ಟು ಸ್ನಾನದ ಬಿಸಿ ನೀರು ಪುಕ್ಕಟೆಯಾಗಿ ದೊರಕುತ್ತದೆ. ಪ್ರಪಂಚದಾದ್ಯಂತ ಇದನ್ನು ಎಲ್ಲಾ ಮನೆ, ಹೋಟೇಲ್‌ಗಳಲ್ಲಿ ಬಳಸಿದರೆ, ದಿನವೊಂದಕ್ಕೆ ಲಕ್ಷಗಟ್ಟಲೆ ಟನ್ ಎಲ್​ಪಿಜಿ ಉಳಿತಾಯವಾಗುತ್ತದೆ ಎಂಬುದನ್ನು ಈ ಇಬ್ಬರು ಪುಟಾಣಿಗಳು ತೋರಿಸಿದ್ದಾರೆ. ಈ ಕಿಟ್‌ನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ ಹಾಗೂ ಇದಕ್ಕೆ ಪೇಟೆಂಟ್ ಪಡೆಯಲು ಈಗಾಗಲೇ ತಯಾರಿ ನಡೆಸಲಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಜನಪ್ರತಿನಿಧಿಗಳು, ಇಲಾಖಾ ಉನ್ನತ ಅಧಿಕಾರಿಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಪ್ರಧಾನಮಂತ್ರಿಗಳ ಮಹಾತ್ವಾಕಾಂಕ್ಷಿ ಯೋಜನೆಯಾದ ‘ಪರೀಕ್ಷಾ ಪೇ ಚರ್ಚಾ-2021’ ಕಾರ್ಯಕ್ರಮಕ್ಕೆ ಆನ್‌ಲೈನ್ ಅರ್ಜಿಸಲ್ಲಿಸಲು ದೇಶಾದ್ಯಂತ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಪ್ರೇರಣೆ ನೀಡುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಶಾಲೆ ಮಹತ್ವದ ಪ್ರಯೋಗ ನಡೆಸಿತ್ತು. ಅತ್ಯಾಧುನಿಕ ಗೂಗಲ್ ಅರ್ಥ್ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ ಪ್ರಮೋಶನಲ್ ವೀಡಿಯೋಗೆ ರಾಷ್ಟಮಟ್ಟದ ಮನ್ನಣೆ ದೊರೆತಿತ್ತು.

ಶಿಕ್ಷಕ ಸುರೇಶ ಮರಕಾಲ ಸಾಯ್ಬರಕಟ್ಟೆ ಇವರ ನಿರ್ದೇಶನದಲ್ಲಿ ಶಾಲಾ ಶಿಕ್ಷಕರು ಹಾಗೂ ಏಳು ವಿದ್ಯಾರ್ಥಿಗಳು ಸೇರಿ ರಚಿಸಿದ ಈ ಪ್ರೋಮೋ ವೀಡಿಯೋ ರಾಷ್ಟ್ರಮಟ್ಟದಲ್ಲಿ ಶಿಕ್ಷಣಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿತ್ತು. 2021ರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾದ ರಾಜ್ಯ ಎರಡು ಶಾಲೆಗಳಲ್ಲಿ ಒಂದು ಈ ಶಾಲೆ ಎನ್ನುವುದು ಹೆಗ್ಗಳಿಕೆ. ಸದ್ಯ ಇಡೀ ರಾಜ್ಯವೇ ಅಭಿಮಾನದಿಂದ ಈ ವಿದ್ಯಾಸಂಸ್ಥೆಯನ್ನು ವೀಕ್ಷಿಸುವಂತಾಗಿದೆ.

ಮಹಾನಗರಗಳಲ್ಲಿ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಸಾಧನೆ ಮಾಡುವುದು ಸುಲಭ. ಆದರೆ ಸರಿಯಾಗಿ ವಿದ್ಯುತ್ ರಸ್ತೆ ಗಳಂತಹ ಮೂಲಭೂತ ಸೌಕರ್ಯಗಳೇ ತಲುಪಿರುವ ವಿದ್ಯಾರ್ಥಿಗಳು ದೇಶದಲ್ಲೇ ಸದ್ದು ಮಾಡುತ್ತಿರುವುದು ಒಂದು ಅಪರೂಪದ ಶೈಕ್ಷಣಿಕ ವಿದ್ಯಮಾನವಾಗಿದೆ. ಸದ್ಯ ಎಲ್ಲರೂ ಈ ಸರ್ಕಾರಿ ಶಾಲೆಯ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.

ವರದಿ: ಹರೀಶ್​ ಪಾಲೆಚ್ಚಾರ್

ಇದನ್ನೂ ಓದಿ: ನಿಟ್ಟೂರು ಸ್ವರ್ಣ ಭತ್ತ: ಸುವರ್ಣ ಸಂಭ್ರಮದಲ್ಲಿದ್ದ ಪ್ರೌಢಶಾಲೆಯು ಮಾಡಿದ ಅನನ್ಯ ಸಾಧನೆ ಇದು..

ಸಾವಯವ ಕೃಷಿಯಲ್ಲಿ ರೈತನ ಅಮೋಘ ಸಾಧನೆ, ಕೃಷಿ & ಉಪಕಸುಬಿನ ಮೂಲಕ ಲಕ್ಷ ಲಕ್ಷ ಗಳಿಕೆ

Published On - 8:52 am, Tue, 26 October 21

ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು