ಕೊವಿಡ್ ರೂಲ್ಸ್ ಬ್ರೇಕ್: ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಮಾಡಿಸಿಕೊಂಡ ಕಲ್ಲಿನಾಥ ಸ್ವಾಮೀಜಿ!
ತಹಶಿಲ್ದಾರ್ ಹಾಗೂ ಪೊಲೀಸರು ಜಾತ್ರೆ ನಡೆಸದಂತೆ ತಿಳಿ ಹೇಳಿದರೂ ನಿಯಮ ಮೀರಿ ಸದರಿ ಸ್ವಾಮೀಜಿ ಪಲ್ಲಕ್ಕಿ ಮೆರವಣಿಗೆ ನಡೆಸಿದ್ದಾರೆ. ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಕಲ್ಲಿನಾಥ ಸ್ವಾಮೀಜಿಯಿಂದ ಪಲ್ಲಕ್ಕಿ ಮೆರವಣಿಗೆ ನಡೆದಿದೆ.
ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ದಿಗಂಭರೇಶ್ವರ ಮಠದ ಪೀಠಾಧಿಪತಿ ಕಲ್ಲಿನಾಥ ಸ್ವಾಮೀಜಿ ಅವರು ಕೋವಿಡ್ ನಿಯಮ ಉಲ್ಲಂಘಿಸಿ ಪಲ್ಲಕ್ಕಿ ಮರೆವಣಿಗೆ ನಡೆಸಿದ್ದಾರೆ. ಪ್ರತಿ ದವನದ ಹುಣ್ಣಿಮೆಗೆ ಜರಗುವ ದಿಗಂಬರೇಶ್ವರ ಮಠದ ಕಲ್ಲಪ್ಪಯ್ಯ ಜಾತ್ರೋತ್ಸವದಲ್ಲಿ ಈ ಘಟನೆ ನಡೆದಿದೆ. ಜಾತ್ರೋತ್ಸವ ಹಿನ್ನೆಲೆ ಬುಧವಾರ ಕಲ್ಲಿನಾಥ ಸ್ವಾಮೀಜಿ ಪಟ್ಟಣದಲ್ಲಿ ಭಕ್ತರನ್ನು ಕರೆದುಕೊಂಡು ನಿಯಮ ಉಲ್ಲಂಘಿಸಿ ಪಲ್ಲಕ್ಕಿ ಮರೆವಣಿಗೆ ಹೊರಟಿದ್ದಾರೆ.
ತಹಶಿಲ್ದಾರ್ ಹಾಗೂ ಪೊಲೀಸರು ಜಾತ್ರೆ ನಡೆಸದಂತೆ ತಿಳಿ ಹೇಳಿದರೂ ನಿಯಮ ಮೀರಿ ಸದರಿ ಸ್ವಾಮೀಜಿ ಪಲ್ಲಕ್ಕಿ ಮೆರವಣಿಗೆ ನಡೆಸಿದ್ದಾರೆ. ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಕಲ್ಲಿನಾಥ ಸ್ವಾಮೀಜಿಯಿಂದ ಪಲ್ಲಕ್ಕಿ ಮೆರವಣಿಗೆ ನಡೆದಿದೆ. ಪಲ್ಲಕ್ಕಿಯಲ್ಲಿ ಸ್ವತಃ ಕೂತು ಭಕ್ತರಿಂದ ಮೆರವಣಿಗೆ ಮಾಡಿಸಿಕೊಂಡಿದ್ದಾರೆ ಕಲ್ಲಿನಾಥ ಸ್ವಾಮೀಜಿ.
(kolhara digambareshwar mutt kallinatha swamiji breaks corona guidelines and take pallaki procession) ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಗನ್‌ಮ್ಯಾನ್ ರಮೇಶ್ ಕೊರೊನಾ ಸೋಂಕಿಗೆ ಬಲಿ