ಕೊಪ್ಪಳ: ಕೊರೊನಾ ಸೋಂಕಿಗೆ ಬಲಿಯಾಗಿದ್ದ ಮೊಮ್ಮಗನನ್ನು ಕಳೆದುಕೊಂಡ ಚಿಂತೆಯಲ್ಲಿ ಗಂಭೀರ ಸ್ಥಿತಿಗೆ ತಲುಪಿದ್ದ ಶ್ರೀಗಳು ಸದ್ಯ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿದ್ದಾರೆ. ಕೊಪ್ಪಳದ ಕನಕಗಿರಿ ತಾಲೂಕಿನ ಸುಳೇಕಲ್ ಭುವನೇಶ್ವರ ಶ್ರೀಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಹತ್ತು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಕಳೆದ 9 ದಿನಗಳ ಹಿಂದೆ ಶ್ರೀಗಳ ಮೊಮ್ಮಗ ಕೊರೊನಾಗೆ ಬಲಿಯಾಗಿದ್ರು. ಮೊಮ್ಮಗ ಸಾವನ್ನಪ್ಪಿದ ಬಳಿಕ ತೀವ್ರ ಅಸ್ವಸ್ಥರಾಗಿದ್ದ ಸ್ವಾಮೀಜಿ ಆಕ್ಸಿಜನ್ ಮೂಲಕ ಗಂಗಾವತಿಯಲ್ಲಿ ಯಶೋಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಾ.ಸತೀಶ್ ರಾಯ್ಕರ್ ಶ್ರೀಗಳಿಗೆ ಧೈರ್ಯ ತುಂಬಿ ಚಿಕಿತ್ಸೆ ನೀಡುತ್ತಿದ್ದರು.
ನನಗೆ ನಿಜವಾಗಿಯೂ ಭಯವಾಗಿತ್ತು, ನಾನು ಮರಳಿ ಮಠಕ್ಕೆ ಹೋಗುವುದಕ್ಕೆ ಡಾಕ್ಟರ್ ಕಾರಣ ಎಂದು ಶ್ರೀಗಳು ಧನ್ಯವಾದ ತಿಳಿಸಿದ್ದಾರೆ. ಶ್ರೀಗಳು ಗುಣಮುಖರಾಗಿದ್ದಕ್ಕೆ ಭಕ್ತರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಶ್ರೀಗಳಿಗೆ ಸನ್ಮಾನಿಸಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಲಾಗಿದೆ.
ಕೊರೊನಾಗೆ ಬೃಹನ್ಮಠ ಗವಿಸಿದ್ದೇಶ್ವರ ಸ್ವಾಮೀಜಿ ತಾತನ ಪುತ್ರ ಬಲಿ
19 ವರ್ಷದ ಪ್ರಸಾದ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಯುವಕ ಮನೆಗೆ ಹೋಗಿದ್ದರು. ಆದರೆ ಇಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿದ ಯುವಕ ಕೊನೆಗೂ ಉಸಿರು ಚೆಲ್ಲಿದ್ದರು. ಬಾಳಿ ಬುದುಕಬೇಕಿದ್ದ ಕೇವಲ 19 ವರ್ಷದ ಯುವಕನನ್ನು ಕೊರೊನಾ ಬಲಿ ಪಡೆದಿದ್ದು, ಅರಳಹಳ್ಳಿಯ ಮಠದ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆದಿತ್ತು. ಗಂಗಾವತಿ ತಾಲೂಕಿನ ಅರಳಹಳ್ಳಿ ರಾಜರಾಜೇಶ್ವರಿ ಬೃಹನ್ಮಠದ ಗವಿಸಿದ್ದೇಶ್ವರ ತಾತನವರ ಪುತ್ರ ಪ್ರಸಾದ್ ಕೊರೊನಾ ಸೋಂಕಿಗೆ ಬಲಿಯಾದ ಯುವಕ.
ಇದನ್ನೂ ಓದಿ: ಬೃಹನ್ಮಠ ಗವಿಸಿದ್ದೇಶ್ವರ ಸ್ವಾಮೀಜಿ ತಾತನ ಪುತ್ರ ಕೊರೊನಾ ಸೋಂಕಿಗೆ ಬಲಿ