ಕೊರೊನಾ ಅಲ್ಲ; ಬೇರೆ ಕಾಯಿಲೆಗಳಿಂದ ಸಂವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 70 ಮಂದಿ ಸಾವು
80 ಜನರ ಪೈಕಿ 10 ಜನರು ಕೊರೊನಾ ಸೋಂಕಿಗೆ ಬಲಿಯಾದ್ರೆ ಉಳಿದ 70 ಜನ ಇತರ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಸರಣಿ ಸಾವು ಸಂಭವಿಸಿದ್ರೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ಮಹಾಮಾರಿ ಕೊರೊನಾ ಎಲ್ಲೆಡೆ ತನ್ನ ಕಬಂದ ಬಾಹುಗಳನ್ನು ಚಾಚುತ್ತ ಸಾಗಿದೆ. ಕೊರೊನಾಗೆ ಬಲಿಯಾಗುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಒಂದು ಕಡೆ ಕೊರೊನಾ ನರಕ ತೋರಿಸುತಿದ್ರೆ ಮತ್ತೊಂದೆಡೆ ಇತರ ಖಾಯಿಲೆಗಳಿಗೆ ಬಲಿಯಾಗುತ್ತಿರುವ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸದ್ಯ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸಂವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 80 ಜನ ಬಲಿಯಾಗಿದ್ದಾರೆ.
80 ಜನರ ಪೈಕಿ 10 ಜನರು ಕೊರೊನಾ ಸೋಂಕಿಗೆ ಬಲಿಯಾದ್ರೆ ಉಳಿದ 70 ಜನ ಇತರ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಸರಣಿ ಸಾವು ಸಂಭವಿಸಿದ್ರೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಪಿ.ರಾಜೀವ್ ವಿರುದ್ಧ ಸಂವಸುದ್ದಿ ಗ್ರಾಮಸ್ಥರು ಆಕ್ರೋಶ: ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ 80 ಜನ ಮೃತಪಟ್ಟಿದ್ರೂ 10 ಜನ ಮೃತಪಟ್ಟಿದ್ದಾಗಿ ಪಿಡಿಒರಿಂದ ವರದಿ ಸಲ್ಲಿಕೆ ಮಾಡಲಾಗಿದೆ. ಜನ ಸಾಯುತ್ತಿದ್ದರು ಒಂದೇ ಒಂದು ಮಾತ್ರೆಯನ್ನೂ ಸಹ ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿಲ್ಲ. ಯಾರು ನಮ್ಮನ್ನ ನೋಡಲು ಬರುತ್ತಿಲ್ಲ.
ಶಾಸಕರು ನಮ್ಮ ಪಾಲಿಗೆ ಇದ್ದಾರೋ ಸತ್ತಿದ್ದಾರೋ ಗೊತ್ತಿಲ್ಲ. ಇನ್ನೊಮ್ಮೆ ಮತ ಕೇಳಲು ಬಂದ್ರೆ ಚಪ್ಪಲಿಹಾರ ಹಾಕುತ್ತೇವೆ ಎಂದು ಶಾಸಕ ಪಿ.ರಾಜೀವ್ ವಿರುದ್ಧ ಸಂವಸುದ್ದಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಗ್ರಾಮಕ್ಕೆ ಬಂದು ನಮ್ಮನ್ನ ರಕ್ಷಣೆ ಮಾಡಿ ಅಂತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬಿ.ಶ್ರೀರಾಮುಲು ಪ್ರತಿನಿಧಿಸುವ ಕ್ಷೇತ್ರದಲ್ಲಿ ಇದೆಂತಾ ಸಮಸ್ಯೆ, ಕೊರೊನಾಗಿಂತ ಈ ಕಾಯಿಲೆಗೆ ಮೃತಪಟ್ಟವರೇ ಹೆಚ್ಚು