AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ನಡುವೆ ಮನೆ ಹರಾಜಿಗೆ ಮುಂದಾದ ಆರ್​ಡಿಸಿಸಿ ಬ್ಯಾಂಕ್; ದಯಾಮರಣ ಕೋರಿ ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿಗೆ ಪತ್ರ ಬರೆದ ಕೊಪ್ಪಳ ಯುವಕ

ಜಿಲ್ಲೆಯ ಕುಷ್ಟಗಿ ತಾಲೂಕಿನ ಬಸವರಾಜ್ ಎಂಬ ವ್ಯಕ್ತಿ ದಯಾಮರಣಕ್ಕೆ ಅರ್ಜಿ ಬರೆದಿದ್ದಾರೆಂದು ತಿಳಿದುಬಂದಿದೆ. 2018ರಲ್ಲಿ ಮನೆ ಅಡವಿಟ್ಟು ಬಸವರಾಜ್ ಎಂಬುವವರು ಆರ್​ಡಿಸಿಸಿ ಬ್ಯಾಂಕ್​ನಲ್ಲಿ ಸಾಲ ಪಡೆದಿದ್ದರು. 3 ಲಕ್ಷ ರೂ. ಸಾಲ ಪಡೆದಿದ್ದರು. ಇದರಲ್ಲಿ 1 ಲಕ್ಷ 40 ಸಾವಿರ ರೂಪಾಯಿ ಬ್ಯಾಂಕ್​ಗೆ ಪಾವತಿಸಿದ್ದರು.

ಕೊರೊನಾ ನಡುವೆ ಮನೆ ಹರಾಜಿಗೆ ಮುಂದಾದ ಆರ್​ಡಿಸಿಸಿ ಬ್ಯಾಂಕ್; ದಯಾಮರಣ ಕೋರಿ ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿಗೆ ಪತ್ರ ಬರೆದ ಕೊಪ್ಪಳ ಯುವಕ
ಪ್ರಾತಿನಿಧಿಕ ಚಿತ್ರ
sandhya thejappa
|

Updated on: May 04, 2021 | 1:48 PM

Share

ಕೊಪ್ಪಳ: ಕೊರೊನಾ ತುರ್ತು ಸಮಯದಲ್ಲೂ ಆರ್​ಡಿಸಿಸಿ ಬ್ಯಾಂಕ್ ಮನೆ ಹರಾಜು ಪ್ರಕ್ರಿಯೆಗೆ ಮುಂದಾದ ಹಿನ್ನೆಲೆ ವಿಶೇಷ ಚೇತನ ಯುವಕ ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿಗೆ ದಯಾಮರಣ ಕೋರಿ ಅರ್ಜಿ ಬರೆದಿದ್ದಾರೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ಬಸವರಾಜ್ ಎಂಬ ವ್ಯಕ್ತಿ ದಯಾಮರಣಕ್ಕೆ ಅರ್ಜಿ ಬರೆದಿದ್ದಾರೆಂದು ತಿಳಿದುಬಂದಿದೆ. 2018ರಲ್ಲಿ ಮನೆ ಅಡವಿಟ್ಟು ಬಸವರಾಜ್ ಎಂಬುವವರು ಆರ್​ಡಿಸಿಸಿ ಬ್ಯಾಂಕ್​ನಲ್ಲಿ ಸಾಲ ಪಡೆದಿದ್ದರು. 3 ಲಕ್ಷ ರೂ. ಸಾಲ ಪಡೆದಿದ್ದರು. ಇದರಲ್ಲಿ 1 ಲಕ್ಷ 40 ಸಾವಿರ ರೂಪಾಯಿ ಬ್ಯಾಂಕ್​ಗೆ ಪಾವತಿಸಿದ್ದರು.

ಬಸವರಾಜ್ ತಂದೆಗೆ ಅನಾರೋಗ್ಯ ಹಿನ್ನೆಲೆ ಹಣ ಕಟ್ಟಲಾಗಿಲ್ಲ. ಹೀಗಾಗಿ ಮನೆ ಹರಾಜಿಗೆ ಬ್ಯಾಂಕ್ ಸಿಬ್ಬಂದಿ ಮುಂದಾಗಿದೆ. ಸಾಲ ಮರುಪಾವತಿಸದ ಹಿನ್ನೆಲೆ ಆರ್​ಡಿಸಿಸಿ ಬ್ಯಾಂಕ್ ಮನೆ ಹರಾಜಿಗೆ ಮುಂದಾಗಿದೆ. ಕೊರೊನಾ ತಡೆಗೆ ಲಾಕ್​ಡೌನ್ ಹೇರಿದ್ರೂ ಬ್ಯಾಂಕ್ ಸಿಬ್ಬಂದಿ ಕಿರುಕುಳ ಕೊಡುತ್ತಿದ್ದಾರೆ ಹೀಗಾಗಿ ನನಗೆ ದಯಾಮರಣಕ್ಕೆ ಅವಕಾಶ ಮಾಡಿಕೊಡಿ ಎಂದು ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದು ಬಸವರಾಜ್ ತಿಳಿಸಿದ್ದಾರೆ.

ಇದನ್ನೂ ಓದಿ

ಚಾಮರಾಜನಗರ ಸಾವು ಪ್ರಕರಣದಲ್ಲಿ ಮೈಸೂರು ಜಿಲ್ಲಾಡಳಿತದ ಸ್ಪಷ್ಟನೆ ಸುಳ್ಳು; ಸಾ.ರಾ.ಮಹೇಶ್ ಆರೋಪ

ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಶತದಿನ ಪೂರೈಸಿದರೆ ವೈದ್ಯಕೀಯ ಸಿಬ್ಬಂದಿಗೆ ಕಾದಿದೆ ಬಂಪರ್​ ಕೊಡುಗೆ!

(Koppal young man faces House Auction by RDCC Bank amid Covid and writes letter to grant mercy death at President Governor and Chief minister)