ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಪ್ರತಿ ವರ್ಷ 5 ಸಾವಿರ ಕೋಟಿ ರೂ.: ಡಿ.ಕೆ ಶಿವಕುಮಾರ್​ ಘೋಷಣೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 17, 2023 | 10:17 PM

ಕೊಪ್ಪಳದಲ್ಲಿ ಇಂದು(ಜ.17) ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಬಿಜೆಪಿ ಸರ್ಕಾರದ ಹಗರಣವನ್ನ ಮನೆ ಮನೆಗೆ ತಲುಪಿಸುತ್ತೇವೆ ಎಂದು ಡಿ.ಕೆ ಶಿವಕುಮಾರ್​ ಹೇಳಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಪ್ರತಿ ವರ್ಷ 5 ಸಾವಿರ ಕೋಟಿ ರೂ.: ಡಿ.ಕೆ ಶಿವಕುಮಾರ್​ ಘೋಷಣೆ
ಡಿ.ಕೆ ಶಿವಕುಮಾರ್
Follow us on

ಕೊಪ್ಪಳ: ಪ್ರತಿ ವರ್ಷ 50 ಸಾವಿರ ಸರ್ಕಾರಿ ಉದ್ಯೋಗ ನೀಡುತ್ತೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಪ್ರತಿ ವರ್ಷ ಐದುಸಾವಿರ ಕೋಟಿ ರೂಪಾಯಿ ನೀಡುತ್ತೇವೆ. ನಾವು ನಿಮ್ಮ ಬದುಕಿನ ಬಗ್ಗೆ ಮಾತನಾಡುತ್ತಿವಿ. ಬಿಜೆಪಿಯವರು ಜನರ ಭಾವನೆಗಳ ಬಗ್ಗೆ ಚೆಲ್ಲಾಟ ಆಡುತ್ತಿದ್ದಾರೆ. ರಾಜ್ಯ ಆಳುತ್ತಿರುವ ಪಕ್ಷದ ಅಧ್ಯಕ್ಷ ಏನ್ ಹೇಳಿದ್ರು ಅವರಿಗೆ ನಾಚಿಕೆಯಾಗಬೇಕು. ಕಾಂಟ್ರಾಕ್ಟರ್ ಅಸೋಸಿಯೇಶನ್ ಮೋದಿಯವರಿಗೆ ಪತ್ರ ಬರೀತು. ಅದಕ್ಕೆ ಉತ್ತರ ನೀಡಿಲ್ಲ. ಕೊನೆಗೆ ಅವರನ್ನೆ ಅರೆಸ್ಟ್ ಮಾಡುವ ಸಂಚು‌ ನಡೀತು. ಅವರ ಪಾಪದ ಪುರಾಣ ಮನೆ ಮನೆಗೆ ಹಂಚುತ್ತೇವೆ. ಇಲ್ಲಿ ಸೇರಿರುವ ಜನ ನೋಡಿದರೆ ಕೊಪ್ಪಳದಲ್ಲಿ ನಾವು ಐದಕ್ಕೆ ಐದು ಕ್ಷೇತ್ರ ಗೆಲ್ಲುತ್ತೇವೆ ಅನ್ನಿಸುತ್ತಿದೆ. ಇದೇ ಕಾಂಗ್ರೆಸ್ ಗೆಲುವಿಗೆ ಮುನ್ನಡಿ ಎಂದು  ಕಾಂಗ್ರೆಸ್​  ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಹೇಳಿದರು.

ಎಂಎಲ್​ಎ ಸರ್ಕಾರಕ್ಕೆ ಬ್ರೋಕರ್, ಅಧಿಕಾರಿಗಳು ಮಿನಿಸ್ಟರ್​ಗೆ ಬ್ರೋಕರ್, ಪಿಎಸ್​ಐ ಸ್ಲ್ಯಾಮ್​ನಲ್ಲಿಯೂ ಬ್ರೋಕರ್. ಪಿಎಸ್​ಐ ಹಗರಣಕ್ಕೆ ಸಂಬಂಧಿಸಿ ಜಿಲ್ಲೆಯ ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಢೇಸಗೂರು ಮತ್ತು ನಿವೃತ್ತ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಪರಸಪ್ಪ ಎಂಬುವವರು ಮಾತನಾಡಿದ ಆಡಿಯೋ ಈ ಹಿಂದೆ ವೈರಲ್ ಆಗಿತ್ತು. ಕೊಟ್ಟಿದ್ದ15 ಲಕ್ಷ ಹಣವನ್ನು ಕೇಳಲು ಶಾಸಕರಿಗೆ ಪರಸಪ್ಪ ಅವರು ಕರೆ ಮಾಡಿದ್ದರು. ಈ ವೇಳೆ ಪರಸಪ್ಪನನ್ನ ಶಾಸಕರು ತರಾಟೆಗೆ ತೆಗೆದುಕೊಂಡಿರುವ ಆಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇಂತವರನ್ನ ಬಿಟ್ಟು ನಮ್ಮ ಎಂಎಲ್​ಎ ಪ್ರಿಯಾಂಕ್ ಖರ್ಗೆಯವರಿಗೆ ನೋಟಿಸ್ ಕೊಟ್ಟರು. ರಾಜಕೀಯ ಮಾಡುವುದಕ್ಕೆಯೇ ನಾವೆಲ್ಲ ನಿಂತಿದ್ದೇವೆ. ಇನ್ನು ಸರಿಯಾಗಿ ನೂರು ದಿನದಲ್ಲಿ ಎಲೆಕ್ಷನ್ ಬರುತ್ತೆ. ಅದು ನಮಗೆ ಒಂದ್ ರೀತಿ ಪರೀಕ್ಷೆ ಇದ್ದ ಹಾಗೇ ಎಂದರು.

ಇದನ್ನೂ ಓದಿ:ಕೊಪ್ಪಳದಲ್ಲಿ ಅಬ್ಬರಿಸಿದ ಸಿದ್ದರಾಮಯ್ಯ; ಭಾಷಣದುದ್ದಕ್ಕೂ ಮೋದಿ, ಬಿಜೆಪಿ ವಿರುದ್ಧ ಟೀಕಾ ಪ್ರಹಾರ

ಗವಿಸಿದ್ದೇಶನ ಸನ್ನಿಧಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ನಾವು ನುಡಿದಂತೆ ನಡೆದಿದ್ದೇವೆ. ಈಗಾಗಲೇ ನಾವು ಮತ್ತೆ ಎರಡೂ ಭರವಸೆ ನೀಡಿದ್ದೆವೆ. 200 ಯುನಿಟ್ ವಿದ್ಯುತ್, 2 ಸಾವಿರ‌ ಮಾಸಾಶನ ಘೋಷಣೆ ಮಾಡಿದ್ದೇವೆ. ಇದು ಎಂತಹ ಭಾಗ್ಯ ನೆನೆಪಿಸಿಕೊಳ್ಳಿ ಎಂದರು. ಗವಿಸಿದ್ದೇಶ್ವರನ ನಾಡಿನಲ್ಲಿ ಪ್ರತಿಜ್ಞೆ ಮಾಡುತ್ತಿದ್ದೇವೆ. ನಾವು ನುಡಿದಂತೆ ನಡೆಯುತ್ತೆವೆ. ನಿಮ್ಮ ಮನೆಗೆ ನಾವು ಬರ್ತೆವೆ, ನೀವು ಆರ್ಜಿ ತುಂಬಿಕೊಡಿ. ನಿಮ್ಮ ಛಲಾನೇ ನಮ್ಮ ಬಲ. ನವಕರ್ನಾಟಕ ನಿರ್ಮಾಣಕ್ಕೆ ನಮ್ಮ ಜೊತೆ ಕೈ ಜೋಡಿಸಿ. 200 ಯೂನಿಟ್ ವಿದ್ಯುತ್ ಕೊಡೋಕೆ ಸಂಪನ್ಮೂಲ ಹೇಗೆ ಕ್ರೂಡಿಕರಣ ಮಾಡಬೇಕು ಎನ್ನೋದು ನಮಗೆ ಗೊತ್ತಿದೆ. 13 ಬಜೆಟ್​ನ್ನ ಮಂಡಿಸಿ ಸಿದ್ದರಾಮಯ್ಯನವರಿಗೆ ಗೊತ್ತಿದೆ ಎಂದು ಕೊಪ್ಪಳದ ಕೈ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ