ಗಾಂಧಿಜೀ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಅಂದಿದ್ರು, ನಾವು ಬಿಜೆಪಿಯನ್ನು ಒದ್ದೋಡಿಸಿ ಎಂದು ಕರೆ ನೀಡಿದ್ದೇವೆ: ಬಿ.ಕೆ.ಹರಿಪ್ರಸಾದ್
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯು ಇಂದು(ಜ.17) ಕೊಪ್ಪಳವನ್ನ ತಲುಪಿದ್ದು, ತಾಲೂಕು ಕ್ರೀಡಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮ ಜರುಗಿತು ಈ ವೇಳೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಕೊಪ್ಪಳ: ಗಾಂಧೀಜಿಯವರು ಬ್ರಿಟಿಷರಿಗೆ ಭಾರತ ಬಿಟ್ಟು ತೊಲಗಿ ಎಂದು ಹೇಳಿದ ಸ್ಥಳದಿಂದ ನಾವು ಯಾತ್ರೆ ಆರಂಭ ಮಾಡಿದ್ದೇವೆ. ಗಾಂಧಿಯವರು ಬ್ರಿಟಿಷರನ್ನ ಭಾರತ ಬಿಟ್ಟು ತೊಲಗಿ ಎಂದಿದ್ದರು, ನಾವು ಬಿಜೆಪಿಯವರನ್ನ ರಾಜ್ಯದಿಂದ ಒದ್ದೋಡಿಸಿ ಎನ್ನುವ ಕರೆ ನೀಡಿದ್ದೇವೆ. ಅವರ ನಾಯಕ ಸುಳ್ಳಿನ ಸರದಾರ, ಅವರ ಶಿಷ್ಯ ನಳೀನ್ ಕುಮಾರ್ ಕಟೀಲ್ ಅಭಿವೃದ್ಧಿ ಬಗ್ಗೆ ಕೇಳಬೇಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ ಎನ್ನುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾತೆತ್ತಿದ್ರೆ ಯುಪಿ, ಗುಜರಾತ್ ಮಾಡೆಲ್ ಮಾಡುತ್ತೇವೆ ಎನ್ನುತ್ತಾರೆ. ರಾಜ್ಯದಲ್ಲಿ ಮಹಿಳೆಯರ ನಾಪತ್ತೆ, ಅತ್ಯಾಚಾರ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಗುಜರಾತ್, ಯುಪಿ ಮಾಡೆಲ್ ಕಾರಣನಾ? ಎಂದು ಪ್ರಜಾಧ್ವನಿ ಸಮಾವೇಶದಲ್ಲಿ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಲಾಡ್ಯರು, ಬಡವರ ಮೇಲೆ ದೌರ್ಜನ್ಯ ಮಾಡುವ ಕಾಲ ಬಂದಿದೆ. ರಾಜ್ಯದ ಕೀರ್ತಿಗೆ ಅಪಕೀರ್ತಿ ತರುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ. ಶಿವಮೊಗ್ಗಕ್ಕೆ ಒಬ್ಬ ಭಯೋತ್ಪಾದಕ ಎಂಪಿ ಬಂದಿದ್ದರು. ಅವರು ಚಾಕು ಹಿಡರಿ, ಸಾಣೆ ಹಿಡಿರಿ ಎನ್ನುವ ಮೂಲಕ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಿದ್ದರು ಎಂದರು.
ಕೆಪಿಸಿಸಿ ಕಚೇರಿಯಿಂದ ಆರಂಭವಾಗಿರುವ ಪ್ರಜಾಧ್ವನಿ ಯಾತ್ರೆಯು ಇಂದು(ಜ.17) ಕೊಪ್ಪಳಕ್ಕೆ ಬಂದಿದ್ದು, ಮೊದಲಿಗೆ ಕಾಂಗ್ರೆಸ್ನ ಎಲ್ಲಾ ನಾಯಕರು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡುವ ಮೂಲಕ ಶ್ರೀಗಳ ಆರೋಗ್ಯವನ್ನ ವಿಚಾರಿಸಿದರು. ನಂತರ ನಗರದ ಬಸವೇಶ್ವರ ವೃತ್ತದ ಬಳಿಯಿಂದ ಭವ್ಯ ಮೆರವಣಿಗೆ ಮೂಲಕ ತಾಲೂಕು ಕ್ರಿಡಾಂಗಣಕ್ಕೆ ತಲುಪಿತು ಈ ವೇಳೆ ಕಾಂಗ್ರೆಸ್ನ ಹಲವು ನಾಯಕರು ಉಪಸ್ಥಿತರಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ