Koppala News: ಗಂಟಲಲ್ಲಿ ಅನ್ನ ಸಿಲುಕಿ 14 ವರ್ಷದ ಬಾಲಕ ಸಾವು

|

Updated on: Jun 15, 2023 | 10:21 AM

ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಊಟ ಮಾಡುವಾಗ ಅನ್ನದ ತುತ್ತು ಗಂಟಲಲ್ಲಿ ಸಿಲುಕಿ 14 ವರ್ಷದ ಬುದ್ಧಿಮಾಂದ್ಯ ಬಾಲಕ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಆಂಜನೇಯ ಮೃತ ಬಾಲಕ.

Koppala News: ಗಂಟಲಲ್ಲಿ ಅನ್ನ ಸಿಲುಕಿ 14 ವರ್ಷದ ಬಾಲಕ ಸಾವು
ಮೃತ ಬಾಲಕ
Follow us on

ಕೊಪ್ಪಳ: ಜಿಲ್ಲೆಯ ಕನಕಗಿರಿ (Kanakagiri) ಪಟ್ಟಣದಲ್ಲಿ ಊಟ ಮಾಡುವಾಗ ಅನ್ನದ ತುತ್ತು ಗಂಟಲಲ್ಲಿ ಸಿಲುಕಿ 14 ವರ್ಷದ ಬುದ್ಧಿಮಾಂದ್ಯ ಬಾಲಕ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಆಂಜನೇಯ ಮೃತ ಬಾಲಕ. ತಾಯಿ ರುದ್ರಮ್ಮ ಬುದ್ಧಿಮಾಂದ್ಯ ಮಗನಿಗೆ ಊಟ ಬಡಿಸಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅನ್ನದ ತುತ್ತು ಗಂಟಲಿಗೆ ಸಿಲುಕಿಕೊಂಡು ಆಂಜನೇಯ ಸಾವನ್ನಪ್ಪಿದ್ದಾನೆ.

ರಸ್ತೆ ದಾಟುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ, ವ್ಯಕ್ತಿ ಸ್ಥಳದಲ್ಲೇ ಸಾವು

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ವೇಗವಾಗಿ ಬಂದ ಕಾರು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಇನ್ನು ಕಾರು ಡಿಕ್ಕಿಯಾಗುತ್ತಿದ್ದಂತೆ ರಸ್ತೆಯ ಮದ್ಯ ಭಾಗಕ್ಕೆ ಬಿದ್ದ ಮೃತ ದೇಹದ ಮೇಲೆ ವೇಗವಾಗಿ ಬರುತ್ತಿದ್ದ ಮುರ್ನಾಲ್ಕು ವಾಹನಗಳು ಹರಿದು ಹೋದ ಪರಿಣಾಮ ಮೃತ ದೇಹ ಛಿದ್ರಗೊಂಡಿದೆ. ಇದರಿಂದ ಮೃತನ ಗುರುತು ಕೂಡ ಪತ್ತೆಯಾಗಿಲ್ಲ. ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಸ್ವಿಮ್ಮಿಂಗ್ ಪೂಲ್​ನಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು ಪ್ರಕರಣ; ಮೃತದೇಹ ಇಟ್ಟು ಸ್ಥಳೀಯರಿಂದ ಪ್ರತಿಭಟನೆ

ಮೆಡಿಕಲ್ ಸ್ಟೋರ್​ನ ಬೀಗ ಮುರಿದು ಹಣ ಕದ್ದ ಕಳ್ಳರು

ತುಮಕೂರು: ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕಠಿಣ ಕ್ರಮ ಕೈಗೊಂಡರು ತಡೆಯಲಾಗುತ್ತಿಲ್ಲ. ಅದರಂತೆ ಇದೀಗ ನಗರದ ಬಿಹೆಚ್​ ರಸ್ತೆಯ ಪಾಲನೇತ್ರ ಮೆಡಿಕಲ್ ಸ್ಟೋರ್​ನ ಬೀಗ ಮುರಿದು ಕಳ್ಳರು ಕೈ ಚಳಕ ತೋರಿಸಿದ್ದಾರೆ. ಹೌದು ನಿನ್ನೆ ರಾತ್ರಿ ಮೆಡಿಕಲ್​ನ ಬಾಗಿಲು ಮುರಿದು ಹಣವನ್ನ ಕದ್ದಿದ್ದು, ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ