ಕೇದಾರನಾಥ ಯಾತ್ರೆಗೆ ತೆರಳಿದ್ದ ಕೊಪ್ಪಳದ ಅರ್ಚಕ ಹೃದಯಾಘಾತದಿಂದ ಸಾವು

ಜೂನ್ 10ರಂದು ಕೇದಾರನಾಥ ಯಾತ್ರೆಗೆ ತೆರಳಿದ್ದ ಅರ್ಚಕ ಸಿದ್ದಯ್ಯ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ 10 ದಿನಗಳಿಂದ ಧಾರ್ಮಿಕ ಸ್ಥಳಗಳ ದರ್ಶನ ಪಡೆಯುತ್ತಿದ್ದ ಸಿದ್ದಯ್ಯ ಕೇದಾರನಾಥ ದರ್ಶನ ಮುಗಿಸಿ ಋಷಿಕೇಶ್​ಗೆ ಬಂದಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ.

ಕೇದಾರನಾಥ ಯಾತ್ರೆಗೆ ತೆರಳಿದ್ದ ಕೊಪ್ಪಳದ ಅರ್ಚಕ ಹೃದಯಾಘಾತದಿಂದ ಸಾವು
ಕೊಪ್ಪಳದ ಅರ್ಚಕ ಹೃದಯಾಘಾತದಿಂದ ಸಾವು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಆಯೇಷಾ ಬಾನು

Updated on:Jun 20, 2024 | 11:12 AM

ಕೊಪ್ಪಳ, ಜೂನ್.20: ಕೇದಾರನಾಥ ಯಾತ್ರೆಗೆ (Kedarnath Yatra) ತೆರಳಿದ್ದ ಕೊಪ್ಪಳ ಮೂಲದ ಅರ್ಚಕ ಸಿದ್ದಯ್ಯ ಹಿರೇಮಠ(32) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜೂನ್ 10ರಂದು ಕೇದಾರನಾಥ ಯಾತ್ರೆಗೆ ತೆರಳಿದ್ದ ಅರ್ಚಕ ಸಿದ್ದಯ್ಯ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ. ಮೃತ ಸಿದ್ದಯ್ಯ ಕಳೆದ 10 ದಿನಗಳಿಂದ ಧಾರ್ಮಿಕ ಸ್ಥಳಗಳ ದರ್ಶನ ಪಡೆಯುತ್ತಿದ್ದರು. ಕೇದಾರನಾಥ ದರ್ಶನ ಮುಗಿಸಿ ಋಷಿಕೇಶ್​ಗೆ ಬಂದಾಗ ಹೃದಯಾಘಾತ ಸಂಭವಿಸಿದೆ.

ಸಿದ್ದಯ್ಯ ಅವರು ಈ ಮೊದಲು ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಅರ್ಚಕರಾಗಿದ್ದರು. ಸದ್ಯ ಈಗ ಕೊಪ್ಪಳ ಶಿವರಾತ್ರೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಆದರೆ ಕೇದಾರನಾಥ ಯಾತ್ರೆಯಲ್ಲಿ ಮರಣ ಹೊಂದಿದ್ದಾರೆ.

ಹಜ್​ ಯಾತ್ರೆಗೆ ತೆರಳಿದ್ದ 90 ಮಂದಿ ಭಾರತೀಯರು ಸಾವು

ಹಜ್​ ಯಾತ್ರೆ ಮಾಡಲು ಸೌದಿ ಅರೇಬಿಯಾಗೆ ತೆರಳಿದ್ದ ಭಾರತೀಯರ ಪೈಕಿ 90 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಮೆಕ್ಕಾದಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿರುವ ಪರಿಣಾಮ ಇದುವರೆಗೆ ಒಟ್ಟು 900ಕ್ಕೂ ಅಧಿಕ ಮಂದಿ ಯಾತ್ರಿಗಳು ಮೃತಪಟ್ಟಿದ್ದಾರೆ. ಅದರಲ್ಲಿ 90 ಮಂದಿ ಭಾರತದವರಾಗಿದ್ದಾರೆ. ಈಜಿಪ್ಟ್ ಅತೀ ಹೆಚ್ಚು ಯಾತ್ರಿಕರು ಬಿಸಿಗಾಳಿಗೆ ಸಾವು ಎಂದು ತಿಳಿದುಬಂದಿದೆ.

ಇದನ್ನೂ ಓದಿ: 7 ಮಂದಿ ಗಂಡಂದಿರು, ಮೂವರು ಮಕ್ಕಳಿದ್ದ ಮಹಿಳೆ ಮತ್ತೊಂದು ಮದುವೆಯಾಗಲು ಹೋಗಿ ಸಿಕ್ಕಿಬಿದ್ಲು

ಹೋಟೆಲ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

ಹೋಟೆಲ್ ಮಾಲೀಕ ವಿಜಯೇಂದ್ರ ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಿಲಿಕಾನ್ ಟೌನ್​ನಲ್ಲಿ ದುಷ್ಕೃತ್ಯ ನಡೆದಿದೆ. ಹಲ್ಲೆಯಿಂದ ವಿಜಯೇಂದ್ರ ಶೆಟ್ಟಿ ಕೋಮಾಗೆ ಜಾರಿದ್ದಾರೆ. ಮಂಜುನಾಥ ಟಿಫನ್ ಸೆಂಟರ್ ಮಾಲೀಕನಾಗಿರುವ ವಿಜಯೇಂದ್ರ ಶೆಟ್ಟಿ, ಮೊನ್ನೆ ರಾತ್ರಿ ಮಲಗುವಾಗ ಕಿಟಕಿ ಬಳಿ ರೂಂ ಕೀ ಇಟ್ಟು ಮಲಗಿದ್ದಾರೆ. ಇದನ್ನು ಗಮನಿಸಿದ್ದವರು ಕಿಟಕಿ ಬಳಿಯಿಟ್ಟಿದ್ದ ಕೀ ಮೂಲಕ ಡೋರ್ ತೆಗೆದು ಹಲ್ಲೆ ನಡೆಸಿ ಮತ್ತೆ ಬೀಗಹಾಕಿಕೊಂಡು ಪರಾರಿಯಾಗಿದ್ದಾರೆ.

ದೇವಸ್ಥಾನದ ಬಳಿ ಕರಡಿ ಪ್ರತ್ಯಕ್ಷ

ದಾವಣಗೆರೆ ಜಿಲ್ಲೆ ಜಗಳೂರಿನ ಕೊಡದಗುಡ್ಡ ವೀರಭದ್ರೇಶ್ವರ ದೇವಸ್ಥಾನ ಬಳಿ ಕರಡಿ ಪ್ರತ್ಯಕ್ಷವಾಗಿದೆ. ನಾಯಿಗಳು ಬೊಗಳುತಿದ್ದಂತೆ ಕರಡಿ ಕಾಲ್ಕಿತ್ತಿದೆ. ಸ್ಥಳೀಯರೊಬ್ಬರು ಕರಡಿ ಎಂಟ್ರಿಕೊಟ್ಟಿದ್ದ ದೃಶ್ಯವನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ದೇವಸ್ಥಾನದ ಬಳಿ ಕರಡಿ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:08 am, Thu, 20 June 24

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ