ಕೊಪ್ಪಳ, ಅ.06: ಕೆಲಸ ಕೊಡಿಸುವಂತೆ ಉಪಲೋಕಾಯುಕ್ತ(Upa-Lokayukta) ಫಣೀಂದ್ರ ಎದುರು ಮಹಿಳೆಯೋರ್ವಳು ಕಣ್ಣೀರಿಟ್ಟ ಘಟನೆ ಕೊಪ್ಪಳ(Koppala) ಜಿಲ್ಲಾಡಳಿತ ಭವನದಲ್ಲಿ ನಡೆದಿದೆ. ಶೋಭಾ ಕಟ್ಟಿಮನಿ ಕಣ್ಣೀರು ಹಾಕಿದ ಮಹಿಳೆ, ಇವರು 22 ವರ್ಷದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ್ದರು. ಆದ್ರೆ, ಈಗ ಏಕಾಏಕಿ ಕೆಲಸದಿಂದ ತೆಗೆದಿದ್ದಾರಂತೆ ಹೀಗಾಗಿ ಶೋಭಾ ಅವರು ‘ನಮ್ಮ ಜೀವನ ನಿರ್ವಹಿಸಲು ತುಂಬಾ ಕಷ್ಟವಾಗುತ್ತಿದೆ. ದಯವಿಟ್ಟು ಕೆಲಸ ನೀಡಿ ಎಂದು ಕಣ್ಣೀರು ಹಾಕಿದ್ದಾರೆ.
‘ನನ್ನ ಪತಿ ನನ್ನನ್ನು ಬಿಟ್ಟು ಬೇರೆ ಮದುವೆ ಆಗಿದ್ದಾನೆ. ಇದರಿಂದ ನನಗೆ ಜೀವನ ನಿರ್ವಹಣೆ ಕಷ್ಟವಾಗಿದ್ದು, ಮಕ್ಕಳನ್ನ ಶಾಲೆಗೆ ಕಳುಹಿಸಿಸಲು ಆಗುತ್ತಿಲ್ಲ. ಅದಕ್ಕಾಗಿ ಸಣ್ಣ ಕೆಲಸ ಕೊಡಿಸಿ ಎಂದು ಮಹಿಳೆ ತನ್ನ ಅಳಲು ತೊಡಿಕೊಂಡಿದ್ದಾರೆ. ಈ ಹಿನ್ನಲೆ ಕೂಡಲೇ ಉಪಲೋಕಾಯುಕ್ತ ಫಣೀಂದ್ರ ಅವರು, ಇವರಿಗೆ ಕೆಲಸ ನೀಡುವಂತೆ ಜಿಲ್ಲಾ ಪಂಚಾಯತಿ ಸಿಇಒಗೆ ಸೂಚಿಸಿದ್ದು, ಜಿಲ್ಲಾ ಪಂಚಾಯತ್ ಸಿಇಒ ತಿಂಗಳೊಳಗೆ ಕೆಲಸ ನೀಡುವ ಭರವಸೆ ಕೊಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Sat, 7 October 23