ಕೊಪ್ಪಳ ಜಿಲ್ಲೆಯಲ್ಲೊಬ್ಬ ಕಾಮುಕ ಶಿಕ್ಷಕ: ಮಕ್ಕಳ ಗುಪ್ತಾಂಗವನ್ನ ಅಳತೆ ಮಾಡೋ ಕಾಮುಕ ಶಿಕ್ಷಕನ ವಿಡಿಯೋ ವೈರಲ್

ಇಬ್ಬರು ಮಹಿಳೆಯರೊಂದಿಗೆ ರಾಸಲೀಲೆಯ ವಿಡಿಯೋ ಮಾಡಿಕೊಂಡಿದ್ದು, ಶಿಕ್ಷಕ ಅಜರುದ್ದೀನ್ ಕಾಮದಾಟದ ವಿಡಿಯೋ ವೈರಲ್ ಆಗಿದೆ. ಅಜರುದ್ದೀನ್​ಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲೊಬ್ಬ ಕಾಮುಕ ಶಿಕ್ಷಕ: ಮಕ್ಕಳ ಗುಪ್ತಾಂಗವನ್ನ ಅಳತೆ ಮಾಡೋ ಕಾಮುಕ ಶಿಕ್ಷಕನ ವಿಡಿಯೋ ವೈರಲ್
ಶಿಕ್ಷಕ ಅಜರುದ್ದೀನ್.
Updated By: ಗಂಗಾಧರ​ ಬ. ಸಾಬೋಜಿ

Updated on: Jul 02, 2022 | 12:27 PM

ಕೊಪ್ಪಳ: ಮಕ್ಕಳ ಗುಪ್ತಾಂಗವನ್ನ ಅಳತೆ ಮಾಡೋ ಶಿಕ್ಷಕನ (Teacher) ಕಾಮದಾಟದ ವಿಡಿಯೋ ವೈರಲ್ ಆಗಿರುವಂತಹ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ. ಸಿಂಧನೂರ ತಾಲೂಕಿನ ಸರ್ಕಾರಿ ಶಾಲೆಯ ಅಜರುದ್ದೀನ್ ಕಾಮುಕ ಶಿಕ್ಷಕ. ಕಾರಟಗಿ ಪಟ್ಟಣದ ಜೆ.ಪಿ.ನಗರದಲ್ಲಿ ವಾಸವಿದ್ದ. ಮಕ್ಕಳಿಗೆ ಪಾಠದ ನೆಪದಲ್ಲಿ ವಿಚಿತ್ರವಾಗಿ ಕಿರುಕುಳ ನೀಡಿದ್ದು, ಮನೆಯಲ್ಲಿ ಇಬ್ಬರು ಮಹಿಳೆಯರೊಂದಿಗೆ ಕಾಮದಾಟವಾಡಿದ್ದಾನೆ. ಮಕ್ಕಳನ್ನ ಮನೆಗೆ ಕರೆಸಿ ವಿದ್ಯಾರ್ಥಿಗಳ ಗುಪ್ತಾಂಗವನ್ನು ಕೋಲಿನಿಂದ ಅಳತೆ ಮಾಡಿ ವಿಡಿಯೋ ಮಾಡಿಕೊಂಡ ಶಿಕ್ಷಕ. ಇಬ್ಬರು ಮಹಿಳೆಯರೊಂದಿಗೆ ರಾಸಲೀಲೆಯ ವಿಡಿಯೋ ಮಾಡಿಕೊಂಡಿದ್ದು, ಶಿಕ್ಷಕ ಅಜರುದ್ದೀನ್ ಕಾಮದಾಟದ ವಿಡಿಯೋ ವೈರಲ್ ಆಗಿದೆ. ಅಜರುದ್ದೀನ್​ಗೆ ಸ್ಥಳೀಯರು ಧರ್ಮದೇಟು ನೀಡಿದ್ದು, ಕಳೆದ ಮೂರು ದಿನಗಳಿಂದ ಶಿಕ್ಷಕ ನಾಪತ್ತೆಯಾಗಿದ್ದಾನೆ. ವಿಡಿಯೋ ವೈರಲ್ ಆದ ಬಳಿಕ ಶಿಕ್ಷಕನನ್ನು ಅಧಿಕಾರಿಗಳು ಅಮಾನತ್ತು ಮಾಡಿದ್ದಾರೆ.

ಕಾಮುಕ ಶಿಕ್ಷಕನ ವಿರುದ್ದ FIR ದಾಖಲು:

ಮಹಿಳೆಯರೊಂದಿಗೆ ಕಾಮದಾಟವಾಡಿದ್ದ ಶಿಕ್ಷಕ ಅಜರುದ್ದೀನ್ ವಿರುದ್ಧ ಜಯಶ್ರೀ ಎನ್ನುವವರು ಕೊಪ್ಪಳ‌ ಜಿಲ್ಲೆ ಕಾರಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್​ಐಆರ್​​ ದಾಖಲು ಮಾಡಲಾಗಿದೆ. ಜಯಶ್ರೀಗೆ ಬೆದರಿಕೆ ಹಾಕಿದ್ದ ಅಜರುದ್ದೀನ್,
ನನ್ನ‌ ಜೊತೆ ಲೈಂಗಿಕ ಸಂಪರ್ಕ ಮಾಡದೆ ಹೋದರೆ ನಿನ್ಮ ಸಾಯಿಸುತ್ತೇನೆಂದು ಬೆದರಿಕೆ ಹಾಕಿದ್ದ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಸ್ತೀನಿ ಎಂದು ಜಯಶ್ರೀಯನ್ನು ಪರಿಚಯ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡಿದ್ದ. ನೀನು ಸಹಕರಿಸಿದಿದ್ದರೆ ವಿಡಿಯೋ ಅಪ್ಲೋಡ್ ಮಾಡೋದಾಗಿ ಬೆದರಿಕೆ ಹಾಕಿದ್ದ. ಶಿಕ್ಷಕ ಅಜರುದ್ದೀನ್ ವಿರುದ್ಧ 376, 354, 323, 504, 506,ಸೆಕ್ಷನ್ ಅಡಿಯಲ್ಲಿ ದೂರು ದಾಖಲು ಮಾಡಲಾಗಿದೆ.

ಶಿಕ್ಷಕ ಅಜರುದ್ದಿನ್ ಗೆ ಹಿಂದು ಮಹಿಳೆಯರೇ ಟಾರ್ಗೆಟ್..?

ಶಾಲೆಗೆ ಬರ್ತಿದ್ದ ವಿದ್ಯಾರ್ಥಿಗಳ ತಾಯಂದಿರೇ ಮೇಲೆಯೇ ಆತ ಕಣ್ಣು ಹಾಕುತ್ತಿದ್ದ. ಈ ಹಿಂದೆ ಅಂಗವಿಕಲ ವಿದ್ಯಾರ್ಥಿಯ ಸ್ಕಾಲರ್ ಶಿಫ್ ವಿಚಾರವಾಗಿ ಮಾತನಾಡಲು ಬಂದಿದ್ದ ಆ ವಿದ್ಯಾರ್ಥಿ ತಾಯಿಯೇ ಬ್ಯುಟಿಶಿಯನ್ ಆಗಿದ್ದರು. ಸ್ಕಾಲರ್ ಶಿಪ್ ಕೊಡಿಸೋದಾಗಿ ಆಮೀಷವೊಡ್ಡಿ ಲೈಂಗಿಕವಾಗಿ ಬಳಕೆ ಮಾಡಿದ್ದ ಎನ್ನಲಾಗುತ್ತಿದೆ. ಸದ್ಯ ಆಕೆಯಿಂದಲೇ ಕೊಪ್ಪಳದ ಕಾರಟಗಿಯಲ್ಲಿ ದೂರು ದಾಖಲಾಗಿದೆ.  ಇದೇ ರೀತಿ ಸುಮಾರು 20 ಕ್ಕು ಹೆಚ್ಚು ಮಹಿಳೆಯರಿಗೆ ವಂಚನೆ ಶಂಕೆ ವ್ಯಕ್ತವಾಗಿದೆ.

ಶಾಲಾ ವಿದ್ಯಾರ್ಥಿಗಳನ್ನು ಬಿಡದೇ ಕಾಡುತ್ತಿದ್ದು, ಎಲ್ಲೆಂದರಲ್ಲಿ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಮಾಡುತ್ತಿದ್ದ. ಇದೇ ಕಾರಣಕ್ಕೆ ನೂರಾರು ವಿದ್ಯಾರ್ಥಿನಿಯರು ಶಾಲೆ ಬಿಟ್ಟಿದ್ದರು. ಹಿಂದು ಮಹಿಳೆಯರನ್ನ ಟಾರ್ಗೆಟ್ ಮಾಡಿ ಶಿಕ್ಷಕ ಕೃತ್ಯವೆಸಗಿದ್ದಾನೆ.
ಜಾತಿ(ಸಮುದಾಯ)ರಾಜಕಾರಣವನ್ನೂ ಮಾಡುತ್ತಿರುವ ಆರೋಪ ಕೂಡ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲೂ ಜಾತಿ ಬೇಧ ಮಾಡುತ್ತಿದ್ದ ಎನ್ನಲಾಗುತ್ತಿದೆ.

ಇದನ್ನೂ ಓದಿ; ಶನಿ ಗ್ರಹ ವಕ್ರೀ ಸಂಚಾರ 2022: ಈ 6 ರಾಶಿಯವರಿಗೆ ಮತ್ತೆ ಶನಿ ಗ್ರಹದ ಪ್ರಭಾವ ಆರಂಭವಾಗಲಿದೆ

ಮಹಿಳೆ ಮೇಲೆ ಹಂದಿಗಳು ದಾಳಿ: ಸ್ಥಿತಿ ಗಂಭೀರ

ಧಾರವಾಡ: ಮಹಿಳೆ ಮೇಲೆ ಹಂದಿಗಳು ದಾಳಿ ನಡೆಸಿರುವಂತಹ ಘಟನೆ ನಗರದ ಗೌಳಿಗಲ್ಲಿ ಪ್ರದೇಶದಲ್ಲಿ ನಡೆದಿದೆ. ಅನಿತಾ ಗೌಳಿ ಅನ್ನೋ (40) ವರ್ಷದ ಮಹಿಳೆ ಮೇಲೆ ಹಂದಿಗಳ ಗುಂಪು ದಾಳಿ ನಡೆಸಿ, ಎಲ್ಲೆಂದರಲ್ಲೆ ಕಚ್ಚಿವೆ. ಇದರಿಂದಾಗಿ ಅನಿತಾ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಂದಿ ದಾಳಿಯಿಂದ ಸ್ಥಳೀಯರು ಪಾಲಿಕೆ ಅಧಿಕಾರಿಗಳ ವಿರುದ್ಧ ಅಕ್ರೋಶಗೊಂಡಿದ್ದಾರೆ. ವಿದ್ಯಾಗಿರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಅಮರನಾಥ ಯಾತ್ರಿಗಳು ಮಧ್ಯಾಹ್ನ 3.30 ರ ನಂತರ ಬನಿಹಾಲ್ ಮೂಲಕ ಕಾಶ್ಮೀರ ಪ್ರವೇಶಿಸುವಂತಿಲ್ಲ: ಭದ್ರತಾ ಅಧಿಕಾರಿ

Published On - 7:46 am, Sat, 2 July 22