
ಕೊಪ್ಪಳ, ಡಿಸೆಂಬರ್ 01: ಅಂಜನಾದ್ರಿ (Anjanadri) ಹನುಮ ಹುಟ್ಟಿದ ನಾಡು ಎಂದು ಹೆಸರಾದ ಸ್ಥಳ. ಅಲ್ಲಿ ಇದೇ ಡಿಸೆಂಬರ್ 2 ಮತ್ತು 3ರಂದು ಹನುಮ ಮಾಲೆ ವಿಸರ್ಜನೆ (Hanuman Mala Visarjana) ಕಾರ್ಯಕ್ರಮವಿದೆ. ಈಗಾಗಲೇ ಹನುಮ ಹುಟ್ಟಿದ ಸ್ಥಳ ಮದುವಣಗಿತ್ತಿಯಂತೆ ಶ್ರಂಗಾರಗೊಂಡಿದೆ. ಹನುಮ ಹುಟ್ಟಿದ ಸ್ಥಳಕ್ಕೆ ಈಗಾಗಲೇ ಸಾವಿರಾರು ಭಕ್ತರು ಹರಿದು ಬರ್ತಾರೆ. ಜಿಲ್ಲಾಡಳಿತ ಈಗಾಗಲೇ ಹನುಮ ಮಾಲೆ ವಿಸರ್ಜನೆಗೆ ಜಿಲ್ಲಾಡಳಿತ ಸಕಲ ಸಿದ್ದತೆಯನ್ನ ಮಾಡಿಕೊಂಡಿದೆ. ಮತ್ತೊಂದು ಕಡೆ ಸಂಸದ ರಾಜಶೇಖರ ಹಿಟ್ನಾಳ, ಅಧ್ಯಕ್ಷ ಅಥ್ಲೆಟಿಕ್ ಅಸೋಶಿಯನ್ ಸಂಸ್ಥೆ ಕೂಡಾ ಕೈಜೋಡಿಸಿದೆ. ಆದರೆ ಅದು ಸಹಾಯ ಪಡೆದುಕೊಂಡಿದ್ದು, ಕಾರ್ಖಾನೆಗಳಿಂದ. ಇದೀಗ ಅದು ವಿವಾದಕ್ಕೆ ಕಾರಣವಾಗಿದೆ. ಏಕೆಂದರೆ ಅಲ್ಲಿ ಕಳೆದ 39 ದಿನಗಳಿಂದ ಕಾರ್ಖಾನೆಗಳ ವಿರುದ್ದ ಹೋರಾಟ ನಡೆಯುತ್ತಿದೆ.
ಅಂಜನಾದ್ರಿ ಹನುಮ ಹುಟ್ಟಿದ ಸ್ಥಳ ಎಂದು ಹೆಸರಾದ ಪ್ರದೇಶ. ಇದೇ ಡಿಸೆಂಬರ್ 3ರಂದು ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮ ಇದೆ. ಈಗಾಗಲೇ ಹನುಮ ಮಾಲೆ ಹಿನ್ನಲೆ ಜಿಲ್ಲಾಡಳಿತ ಅಂಜನಾದ್ರಿಯಲ್ಲಿನ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಇಂದಿನಿಂದಲೇ ಅಂಜನಾದ್ರಿಗೆ ಹನುಮ ಭಕ್ತರು ಹರಿದು ಬರ್ತಾರೆ. ಅಂಜನಾದ್ರಿಗೆ ಸುಮಾರು ಒಂದು ಲಕ್ಷ ಭಕ್ತರು ಹರಿದು ಬರುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲಾಡಳಿತ ಬರುವ ಭಕ್ತರಿಗೆ ವಸತಿ, ಶೌಚಾಲಯ, ಊಟ ಎಲ್ಲವನ್ನು ಸಿದ್ದತೆ ಮಾಡಿಕೊಂಡಿದೆ. ಜಿಲ್ಲಾಡಳಿತವಲ್ಲದೆ ಜಿಲ್ಲಾ ಅಥ್ಲೆಟಿಕ್ ಅಸೋಶಿಯನ್ ಕೂಡ ಕೈ ಜೋಡಿಸಿದೆ.
ಇದನ್ನೂ ಓದಿ: ಕೊಪ್ಪಳ: ದೀಪಾವಳಿ ಹಬ್ಬದ ಪ್ರಯುಕ್ತ ಅಂಜನಾದ್ರಿಯಲ್ಲಿ ಹನುಮನಿಗೆ ವಿಶೇಷ ಪೂಜೆ; ವಿಡಿಯೋ ನೋಡಿ
ಅಂಜನಾದ್ರಿಗೆ ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಸುಮಾರು ಎಂಟು ಕಡೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಆದರೆ ಅಥ್ಲೆಟಿಕ್ ಅಸೋಶಿಯನ್ ಕಾರ್ಖಾನೆಗಳ ಸಹಯೋಗ ಪಡದುಕೊಂಡಿದ್ದು ಇದೀಗ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಥ್ಲೆಟಿಕ್ ಅಸೋಶಿಯೇಶನ್ ಕಿರ್ಲೋಸ್ಕರ್, ಮುಕುಂದ ಸುಮಿ, ಅಲ್ಟ್ರಾಟೆಕ್. ಹೊಸಪೇಟೆ ಸ್ಟಿಲ್ಗಳ ಸಹಯೋಗ ಪಡೆದುಕೊಂಡಿದೆ. ಆದರೆ ಕೊಪ್ಪಳದಲ್ಲಿ ಕಾರ್ಖಾನೆಗಳನ್ನ ವಿರೋಧಿಸಿ ಕೊಪ್ಪಳದಲ್ಲಿ ಕಳೆದ 39 ದಿನಗಳಿಂದ ಹೋರಾಟ ನಡೆಯುತ್ತಿದೆ. ಜಿಲ್ಲಾ ಬಚಾವೋ ಆಂದೋಲನ ಸಮಿತಿ ಕೊಪ್ಪಳ ನಗರಸಭೆ ಮುಂಭಾಗ ಹೋರಾಟ ಮಾಡುತ್ತಿದ್ದಾರೆ. ಬಲ್ಡೋಟಾ ಸೇರಿ ಕಿರ್ಲೋಸ್ಕರ್ ಹಾಗೂ ಮುಕುಂದ ಸುಮಿ ವಿಸ್ತರಣೆಗೆ ವಿರೋಧ ಮಾಡಿದ್ದಾರೆ. ಹೀಗಿದ್ದರೂ ಸಂಸದರು ಧಾರ್ಮಿಕ ಕಾರ್ಯಕ್ರಮಕ್ಕೆ ಕಾರ್ಖಾನೆಗಳ ಸಿಎಸ್ಆರ್ ಅನುದಾನ ಬಳಸಿಕೊಳ್ಳುತ್ತಿರುವುದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಖುದ್ದು ಸಂಸದರೇ ಕಾರ್ಖಾನೆಗಳ ಸಹಯೋಗ ಇದೆ ಎಂದು ಒಪ್ಪಿಕೊಂಡಿದ್ದು, ಆದರೆ ನಾವು ಬಲ್ಡೋಟಾ ಕಾರ್ಖಾನೆಯ ಹಣ ಬಳಿಸಕೊಂಡಿಲ್ಲ ಎಂದಿದ್ದಾರೆ. ಕಾರ್ಖಾನೆಗಳ ಸಿಎಸ್ಆರ್ ಅನುದಾನ ಇರೋದೆ ಸಾಮಾಜಿಕ ಕಾರ್ಯಕ್ರಮಕ್ಕೆ ಅನ್ನೋ ಮೂಲಕ ಕಾರ್ಖಾನೆಗಳ ಪರ ಸಂಸದರು ಬ್ಯಾಟ್ ಬೀಸಿದ್ದಾರೆ.
ಇನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಹನುಮ ಹುಟ್ಟಿದ ಸ್ದಳ ಎಂದು ಹೆಸರಾಗಿದೆ. ಹನುಮ ಹುಟ್ಟಿರೋದಕ್ಕೆ ಕೆಲ ಕುರುಹಗಳು ಲಭ್ಯವಾಗಿವೆ. ಹನುಮ ಮಾಲೆ ಮೊದಲು ಆರಂಭವಾಗಿದ್ದು ಕೆಲ ಭಕ್ತರಿಂದ. ಇದೀಗ ಅದು ಲಕ್ಷಾಂತರ ಭಕ್ತರನ್ನು ತಲುಪಿದೆ. ಕೇವಲ 13 ಜನರಿಂದ ಆರಂಭವಾದ ಹುನಮಮಾಲೆ ವ್ರತವನ್ನ ಇಂದು ಲಕ್ಷ ಲಕ್ಷ ಮಂದಿ ಆಚರಣೆ ಮಾಡುತ್ತಾರೆ. ಕಟ್ಟು ನಿಟ್ಟಿನ ವ್ರತ ಮಾಡೋದರ ಮೂಲಕ ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಬಂದು ಮಾಲೆಯನ್ನ ವಿಸರ್ಜನೆ ಮಾಡುತ್ತಾರೆ.
ಕೆಲವರು 45 ದಿನ, ಕೆಲವರು ಒಂದು ತಿಂಗಳು, ಕೆಲವರು 15 ದಿನ, 9 ದಿನ, 3 ದಿನ ಮಾಲೆ ಧರಿಸುವ ಪ್ರತೀತಿ ಇದೆ. ರಾಜ್ಯದ ಮೂಲೆ ಮೂಲೆಯಲ್ಲಿ ಹನುಮ ಭಕ್ತರು ವ್ರತವನ್ನು ಆಚರಣೆ ಮಾಡುತ್ತಾರೆ. ಡಿಸೆಂಬರ್ 3 ರಂದು ಹನುಮ ಮಾಲಾಧಾರಿಗಳು, ಸಾಗರೋಪಾದಿಯಲ್ಲಿ ಆಗಮಿಸುವ ಕಾರಣಕ್ಕೆ ಈಗಾಗಲೇ ಪೊಲೀಸರು ಸಕಲ ಸಿದ್ದತೆಯನ್ನ ಮಾಡಿಕೊಂಡಿದ್ಧಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ಧಾರೆ. ಕೊಪ್ಪಳದಿಂದ ಅಂಜನಾದ್ರಿವರೆಗೂ ಸುಮಾರು 2000 ಪೊಲೀಸರ ನಿಯೋಜನೆ ಮಾಡಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: 101 ಕೆಜಿ ಜೋಳದ ಮೂಟೆ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಯುವಕ: ವಿಡಿಯೋ ನೋಡಿ
ಒಟ್ಟಾರೆ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮ ಇದೀಗ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಕಾರ್ಖಾನೆಗಳ ಸಹಯೋಗ ಪಡೆದುಕೊಂಡಿದ್ದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸಂಸದ ರಾಜಶೇಖರ ಹಿಟ್ನಾಳ ನಡೆ ಇದೀಗ ಪ್ರಶ್ನೆ ಮಾಡುವಂತಾಗಿದೆ. ಭಕ್ತರ ಅನಕೂಲಕ್ಕೆ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಮಾಡುತ್ತಿರುವುದು ಒಳ್ಳೆಯದ್ದೆ, ಆದರೆ ಅದಕ್ಕೆ ಕಾರ್ಖಾನೆಗಳ ಹಣ ಏಕೆ ಅನ್ನೋದು ಜನರ ಪ್ರಶ್ನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.