Election News: ಬಳ್ಳಾರಿಯಲ್ಲಿ ಸಹೋದರನ ವಿರುದ್ಧ ಪತ್ನಿಯನ್ನು ಕಣಕ್ಕಿಳಿಸಿದ ಜನಾರ್ದನ ರೆಡ್ಡಿ

| Updated By: ವಿವೇಕ ಬಿರಾದಾರ

Updated on: Jan 31, 2023 | 2:33 PM

ಬಳ್ಳಾರಿ ಕ್ಷೇತ್ರದಿಂದ ನನ್ನ ಪತ್ನಿ ಅರುಣಾ ಲಕ್ಷ್ಮೀಯನ್ನು ಅಭ್ಯರ್ಥಿ ಅಂತ ಘೋಷಣೆ ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ.

Election News: ಬಳ್ಳಾರಿಯಲ್ಲಿ ಸಹೋದರನ ವಿರುದ್ಧ ಪತ್ನಿಯನ್ನು ಕಣಕ್ಕಿಳಿಸಿದ ಜನಾರ್ದನ ರೆಡ್ಡಿ
ಜನಾರ್ಧನ ರೆಡ್ಡಿ (ಎಡಚಿತ್ರ) ಅರುಣಾಲಕ್ಷ್ಮೀ ರೆಡ್ಡಿ (ಬಲಚಿತ್ರ)
Follow us on

ಕೊಪ್ಪಳ: ಬಳ್ಳಾರಿ ಕ್ಷೇತ್ರದಿಂದ ನನ್ನ ಪತ್ನಿ ಅರುಣಾ ಲಕ್ಷ್ಮೀಯನ್ನು ಅಭ್ಯರ್ಥಿ ಅಂತ ಘೋಷಣೆ ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಈ ಮೂಲಕ ಸಹೋದರ ಬಿಜೆಪಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ವಿರುದ್ಧ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರವಾಗಿ ಪತ್ನಿಯನ್ನು ಕಣಕ್ಕೆ ಇಳಿಸಿದ್ದಾರೆ. ತನ್ನ ಸ್ವಂತ ಪಾರ್ಟಿ ಮೂಲಕ ಸಹೋದರಿನಿಗೆ ಸವಾಲ್ ಹಾಕಿದ್ದಾರೆ. ಜನಾರ್ಧನ ರೆಡ್ಡಿ ಇಂದು (ಜ.31) ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಕಲ್ಯಾಣರಥಯಾತ್ರೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಹನುಮ ಹುಟ್ಟಿದ ಅಂಜನಾದ್ರಿ ನಾಡಿದು‌. ಅಂಜನಾದ್ರಿ ಅಭಿವೃದ್ಧಿಗೆ 5 ಸಾವಿರ ಕೋಟಿ ಯೋಜನೆ ಸಿದ್ದಪಡಿಸಿದ್ದೆನೆ. ಇಡೀ ಜಗತ್ತೆ ನಮ್ಮ ಕಡೆ ನೋಡಬೇಕು ಹಾಗೇ ಮಾಡುತ್ತೇನೆ. ಗಂಗಾವತಿಯಲ್ಲಿ 200 ಬೆಡ್​ಗಳ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇನೆ. ಸ್ಲಂ ಇಲ್ಲದ ರೀತಿಯಾಗಿ ಗಂಗಾವತಿಯನ್ನು ನಿರ್ಮಾಣ ಮಾಡುತ್ತೇನೆ. ರಾಜ್ಯದ 10-15 ಜಿಲ್ಲೆಗಳ ಜನರು ನಮ್ಮ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.

ಮಂತ್ರಿ, ಶಾಸಕರನ್ನು ನಿಮ್ಮ ಬೀದಿಗೆ ಬರುವಂತೆ ಮಾಡುತ್ತೇನೆ

ನಿಮ್ಮ ಶಕ್ತಿ ನಂಗೆ ಆನೆ ಬಲ ತರುತ್ತಿದೆ. ನೀವು ನಿಮ್ಮ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಬೇಕಿಲ್ಲ. ನಂಗೆ ಅಧಿಕಾರ ಕೋಡಿ. ಮಂತ್ರಿ, ಶಾಸಕರನ್ನು ನಿಮ್ಮ ಬೀದಿಗೆ ಬರುವಂತೆ ಮಾಡುತ್ತೇನೆ. ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ತರುತ್ತೆನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನೋಡಿದರೆ, ನಾನು ಗೆದ್ದುಬಿಟ್ಟಿದ್ದೆನೆ ಎನ್ನುವ ನಂಬಿಕೆ ಬಂದಿದೆ‌. ನೀವೆಲ್ಲಾ ನನ್ನನ್ನ ಗೆಲ್ಲಿಸುವ ಜವಬ್ದಾರಿ ತೆಗೆದುಕೊಳ್ಳಿ. ನಾನು 30-40 ಶಾಸಕರನ್ನು ಗೆಲ್ಲಿಸಿಕೊಂಡು ಬರುವ ಜವಬ್ದಾರಿ ತೆಗೆದುಕೊಳ್ಳುತ್ತೇನೆ. ಅವಾಗಲೇ ನಮ್ಮ ಎಲ್ಲ ಕೆಲಸ ಆಗೋದು ಎಂದರು.

ನನ್ನ ಆಸ್ತಿ ಮುಟ್ಟುಗೋಲು ಹಾಕುತ್ತಾರಂತೆ ಹೆದರಿಸುತ್ತಿದ್ದಾರೆ. ನಾನ್ಯಾರಿಗೂ ಹೆದರೋಲ್ಲ. ಯಾರಿಗು ಬಗ್ಗೊಲ್ಲ. ಗಂಡುಮೆಟ್ಡಿದ ನಾಡಲ್ಲಿ ಹುಟ್ಟಿದವನು ನಾನು. ನಂಗೆ ಎಷ್ಟೆಲ್ಲಾ ಅವಮಾನ ಆಗಿದೆ. ಅವೆಲ್ಲ ಸಮನಾಗಿ ಸ್ವಿಕಸಿರಿಸಿದ್ದೆನೆ. ಯಾರು ಏನ್ ಬೇಕಾದರು ಹೇಳಲಿ, ನೀವ್ ತಲೆಕೆಡಿಸಿಕೊಳ್ಳಬೇಡಿ. ನಾನು ಧೃಡ ಸಂಕಲ್ಪ ಮಾಡಿದ್ದೆನೆ. ಪ್ರಾಣ ಹೊದರು ಕೊಟ್ಟ ಮಾತು ತಪ್ಪುವುದಿಲ್ಲ ಈ ರೆಡ್ಡಿ. ಶಥಸಿದ್ದವಾಗಿ ನನ್ನ ಗುರಿಯನ್ನ ಮುಟ್ಟಿಯೇ ಮುಟ್ಟುತ್ತೆನೆ ಎಂದು ವಿಶ್ವಾಸ ನೀಡಿದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೇವಲ ಒಂದು ತಿಂಗಳ ಕೂಸು. ಒಂದು ತಿಂಗಳ ಕೂಸು ರಾಜ್ಯದ ಎಲ್ಲ ಪಕ್ಷಗಳ ನಿದ್ದೆಗೆಡಿಸಿದೆ. ಸುಮಾರು 12 ವರ್ಷಗಳ ಕಾಲ ವನವಾಸ ಅನುಭವಿಸಿದ್ದೇನೆ. ಅದರಿಂದ ಸಿಡಿದೆದ್ದು ಪಕ್ಷ ಕಟ್ಟಿದ್ದೇನೆಂದು ಕೆಲವರು ತಿಳಿದಿದ್ದಾರೆ. ಯಾರ ಮೇಲೂ ಪ್ರತೀಕಾರ ತೀರಿಸಿಕೊಳ್ಳಲು KRPP ಕಟ್ಟಿಲ್ಲ. ಸಾಮಾನ್ಯ ಪೊಲೀಸ್ ಕಾನ್ಸ್​​ಟೇಬಲ್ ಮನೆಯಲ್ಲಿ ಹುಟ್ಟಿದ್ದವನು ನಾನು. ಲಕ್ಷ್ಮೀ ತಾಯಿ ಕೃಪೆಯಿಂದ ಶ್ರೀಮಂತನಾಗಿದ್ದೇನೆ. ಹೆಲಿಕಾಪ್ಟರ್ ಖರೀದಿಸಿದ್ದಕ್ಕೆ ಬಹಳ ದೊಡ್ಡದಾಗಿ ಮಾತನಾಡಿದರು. ಸಮಯ ಉಳಿಸುವುದಕ್ಕಾಗಿ ನಾನು ಹೆಲಿಕಾಪ್ಟರ್​​ ಖರೀದಿಸಿದ್ದೆ. ನನ್ನ ಬಂಧನ ಬಳಿಕ ಮಕ್ಕಳನ್ನು ಎಂದೂ ಹೆಲಿಕಾಪ್ಟರ್ ಹತ್ತಿಸಿಲ್ಲ. ಬಡತನ ಏನೂ ಅಂತಾ ನನಗೆ ಚೆನ್ನಾಗಿ ಗೊತ್ತು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:02 pm, Tue, 31 January 23