ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ
ದೇಶದ ಭವಿಷ್ಯ ದೃಷ್ಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಜಾತಿ, ಧರ್ಮದ ಆಧಾರದಲ್ಲಿ ಬಿಜೆಪಿಯವರು ಒಡೆದು ಆಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ಮಾಡಿದರು.
ಕೊಪ್ಪಳ: ಮಾನ ಮರ್ಯಾದೆ ಇದರೆ ಶಿಕ್ಷಣ ಹಾಗೂ ಆರ್ಥಿಕ ಸ್ಥಿತಿ ಸುಧಾರಿಸಲಿ. ವ್ಯವಹಾರಿಕವಾಗಿ ಕುಳಿತುಕೊಂಡು ದೇಶ ಹಾಳು ಮಾಡುತ್ತಿದ್ದಾರೆ. ಬಿಜೆಪಿ ಅಂದರೆ ಬ್ಯುಸಿನೆಸ್ ಜನತಾ ಪಾರ್ಟಿ (business Janata Party) ಎಂದು ಕೆಪಿಸಿಸಿ ಹಿಂದುಳಿದ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು. ರಾಹುಲ್ ಗಾಂಧಿಗೆ ಬಿಜೆಪಿಯವರು ಪಪ್ಪು ಪಪ್ಪು ಎಂದು ಕರೆಯುತ್ತಾರೆ. ಪಪ್ಪು ಇಂದು ಜನರಿಗಾಗಿ ಬೀದಿಗೆ ಇಳಿದಿದ್ದಾರೆ. ದೇಶದ ಭವಿಷ್ಯ ದೃಷ್ಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಜಾತಿ, ಧರ್ಮದ ಆಧಾರದಲ್ಲಿ ಬಿಜೆಪಿಯವರು ಒಡೆದು ಆಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ಮಾಡಿದರು. ದೇಶದ ಭವಿಷ್ಯ ದೃಷ್ಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಜನರಲ್ಲೂ ಈ ಭಾವನೆ ಇದೆ. ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಮೂರು ದಿನ ಭಾಗವಹಿಸಿರುವೆ. ಜನರು ಆಶೀರ್ವಾದ ಮಾಡಲಿದ್ದಾರೆ. ಜಾತಿ, ಧರ್ಮದ ಆಧಾರದಲ್ಲಿ ಬಿಜೆಪಿ ಒಡೆದಾಳುತ್ತಿದೆ. ಬಿಜೆಪಿಯವರು ತಾವು ಮಾಡಿದ ಒಳ್ಳೆ ಕೆಲಸ ಮುಂದಿಟ್ಟು ಮಾತನಾಡುತ್ತಿಲ್ಲ ಎಂದರು.
ಬದಲಿಗೆ ಒಬ್ಬರನ್ನು ತೇಜೋವಧೆ ಮಾಡುವ ಮಾತಾಡುತ್ತಾರೆ. ಜಾತಿ, ಧರ್ಮದ ವಿಷಬೀಜ ಬಿತ್ತುವುದು, ಸಾವಿನಲ್ಲಿ ರಾಜಕಾರಣ ಮಾಡುವುದು ಬಿಜೆಪಿಗರ ಚಾಳಿ. ಅಮಾಯಕರನ್ನು ರಕ್ಷಿಸಲಿ. ಬಿಜೆಪಿಯವರು ಜನರ ಜೀವನ ತೋಡೊ ಮಾಡಿದ್ದಾರೆ. ಸಂಘ, ಭಜರಂಗದಳ ಮುಂತಾದವರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಅವರೇ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಿಜೆಪಿಗರು ಪರಿವಾರದವರನ್ನೇ ಬಲಿ ನೀಡುತ್ತಿದ್ದಾರೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಬಲಿದಾನ ಮಾಡಿದ ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಯಾರೊಬ್ಬರಿಂದ ಅಲ್ಲಾ ಎಂದು ಮಧು ಬಂಗಾರಪ್ಪ ಹೇಳಿಕೆ ನೀಡಿದರು.
ಕಾಂಗ್ರೆಸ್ ಯಾತ್ರೆ ಬಗ್ಗೆ ಅರುಣ್ ಸಿಂಗ್ ಲೇವಡಿ!
ಬೆಂಗಳೂರು: ಇದು ಭಾರತ್ ಜೋಡೋ ಯಾತ್ರೆ (Bharat Jodo Yatra) ಅಲ್ಲ, ರಾಹುಲ್ ಯಾತ್ರೆ. ಇದೊಂದು ಚುನಾವಣೆ ಯಾತ್ರೆ ಅಷ್ಟೇ ಎಂದು ಭಾರತ್ ಜೋಡೋ ಯಾತ್ರೆ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಲೇವಡಿ ಮಾಡಿದರು. ಯಾತ್ರೆ ವೇಳೆ ಸುಳ್ಳು ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. 40 ಪರ್ಸೆಂಟ್ ಕಮಿಷನ್ ಎಂದು ಸುಮ್ಮನೇ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿ ಕಾಮನ್ ಸಿಎಂ, ಅವರು ಜನಪರ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಆರೋಪ ಮಾಡಿ, ಸಿಎಂಗೆ ಅಪಮಾನ ಮಾಡೋ ಮೂಲಕ ರಾಜ್ಯದ ಜನರಿಗೆ ಅವಮಾನ ಮಾಡಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಜನರು ಕಾಂಗ್ರೆಸ್ಗೆ ಉತ್ತರ ಕೊಡುತ್ತಾರೆ ಎಂದು ಅರುಣ್ ಸಿಂಗ್ ವಾಗ್ದಾಳಿ ಮಾಡಿದರು.
ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಬಗ್ಗೆ ನಾನು ಮಾತಾಡುವುದಿಲ್ಲ. ಅಧ್ಯಕ್ಷ ಸ್ಥಾನದ ಚುನಾವಣೆಗೂ ಮುನ್ನ ಗೊಂದಲಗಳು ನಡೆಯುತ್ತಿವೆ. ದೇಶ ಹಾಗೂ ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ಕಾಂಗ್ರೆಸ್ ಗ್ರಾಫ್ ಕೆಳಗೆ ಹೋಗಿದೆ, ಆ ಗ್ರಾಫ್ ಮೇಲೆ ಏರುವುದಿಲ್ಲ ಎಂದರು. ನಾಳೆ ಕಾರ್ಯಕಾರಿಣಿ ಇದೆ. ವಿಧಾನಸಭೆ ಚುನಾವಣೆ ಸಿದ್ದತೆ ಮಾಡಿಕೊಳ್ಳುತ್ತಿದೆ. 150 ಸೀಟು ನಮಗೆ ಟಾರ್ಗೆಟ್ ಇದೆ. ಇದಕ್ಕೆ ರೋಡ್ ಮ್ಯಾಪ್ ಹಾಕುತ್ತೇವೆ. ನಾಳೆ ಸಭೆಯಲ್ಲಿ ಇವೆಲ್ಲದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:55 pm, Fri, 7 October 22