ನವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವಧಿ ಮುಗಿದ ಔಷಧಿ ಪತ್ತೆ; ಅಧಿಕಾರಿಗಳ ವಿರುದ್ಧ ಆಕ್ರೋಶ

| Updated By: ಆಯೇಷಾ ಬಾನು

Updated on: Dec 17, 2022 | 3:09 PM

ಆರೋಗ್ಯ ಕೇಂದ್ರದ ಸಂರಕ್ಷಣಾ ಅಧಿಕಾರಿಯಾಗಿದ್ದ ಸುವರ್ಣ ಹೀರೆಮಠ್ ಅವರಿಂದ ಕರ್ತವ್ಯ ಲೋಪವಾಗಿದೆ ಎಂದು ಅಲ್ಲಿನ ಜನ ಆರೋಪಿಸಿದ್ದಾರೆ.

ನವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವಧಿ ಮುಗಿದ ಔಷಧಿ ಪತ್ತೆ; ಅಧಿಕಾರಿಗಳ ವಿರುದ್ಧ ಆಕ್ರೋಶ
ನವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವಧಿ ಮುಗಿದ ಔಷಧಿ ಪತ್ತೆ
Follow us on

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ನವಲಹಳ್ಳಿಯ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಅವಧಿ ಮುಗಿದ ಔಷಧಿ ಪತ್ತೆಯಾಗಿದೆ. ಐದು ವರ್ಷ ಹಿಂದಿನ ಔಷಧಿಗಳ ಸ್ಟಾಕ್ ಪತ್ತೆಯಾಗಿದೆ. ಈ ಬಗ್ಗೆ ರೋಗಿಗಳ ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ.

ನವಲಹಳ್ಳಿಯ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸಿಬ್ಬಂದಿ ಸಾರ್ವಜನಿಕರಿಗೆ ಔಷಧಿ ವಿತರಿಸದೆ ದಾಸ್ತಾನು ಮಾಡಿದ್ದಾರೆ. ಆರೋಗ್ಯ ಕೇಂದ್ರದ ಸಂರಕ್ಷಣಾ ಅಧಿಕಾರಿಯಾಗಿದ್ದ ಸುವರ್ಣ ಹೀರೆಮಠ್ ಅವರಿಂದ ಕರ್ತವ್ಯ ಲೋಪವಾಗಿದೆ ಎಂದು ಅಲ್ಲಿನ ಜನ ಆರೋಪಿಸಿದ್ದಾರೆ. ಔಷಧಿ ವಿತರಿಸದೇ ಸುಳ್ಳು ಪಟ್ಟಿ ಸಲ್ಲಿಸುವ ಮೂಲಕ ಕರ್ತವ್ಯಲೋಪವಾಗಿದೆ ಎನ್ನಲಾಗುತ್ತಿದೆ. ಸದ್ಯ ಸುವರ್ಣ ಹೀರೆಮಠ್ ವರ್ಗಾವಣೆಯಾಗಿದ್ದಾರೆ. ಸುವರ್ಣ ಹಿರೇಮಠ್ ಹಾಗೂ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ವಿನಯಕುಮಾರ್ ಹೇಳಿದ್ದಾರೆ. ನಿನ್ನೆ ಅಧಿಕಾರಿ ಜೊತೆಗ ಗ್ರಾಮಸ್ಥರು ಆರೋಗ್ಯ ಕೇಂದ್ರದ ಕೊಠಡಿಗೆ ಭೇಟಿ ನೀಡಿದಾಗ ದಾಸ್ತಾನು ಮಾಡಿದ್ದ ಹಳೆಯ ಔಷಧಿಗಳು ಪತ್ತೆಯಾಗಿದ್ದವು.

ಇದನ್ನೂ ಓದಿ: ಚಿಕ್ಕೋಡಿ ಡಿವೈಎಸ್ಪಿ ಬಸವರಾಜ್ ಅವರ ಇಂಗ್ಲೀಷ್ ವಚನಾನುವಾದ ಬೆಂಗಳೂರು ವಿವಿಗೆ ಪಠ್ಯವಾಯ್ತು!

ಗ್ರಾಮ‌ ಆಡಳಿತ ಅಧಿಕಾರಿಗಳ ಅನಧಿಕೃತ ಕಚೇರಿಗಳ ಮೇಲೆ ದಾಳಿ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ತಹಶೀಲ್ದಾರ್​​ ದಿಢೀರ್ ದಾಳಿ ನಡೆಸಿದ್ದಾರೆ. ಗ್ರಾಮ‌ ಆಡಳಿತ ಕಂದಾಯ ನಿರೀಕ್ಷಕರ ಅನಧಿಕೃತ ಕಚೇರಿಗಳ ಮೇಲೆ ರೇಡ್ ಮಾಡಲಾಗಿದ್ದು ಮಂಡ್ಯದ ನಾಗಮಂಗಲ ಟೌನ್ ನಲ್ಲಿ ಅನಧಿಕೃತ ಕಚೇರಿ ಹೊಂದಿದ್ದ 10ಕ್ಕೂ ಹೆಚ್ಚು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಕೇಂದ್ರಸ್ಥಾನದಲ್ಲಿ ಕರ್ತವ್ಯ ನಿರ್ವಹಿಸದೆ ಅನಧಿಕೃತವಾಗಿ ಕಚೇರಿ ಮಾಡಿಕೊಂಡಿದ್ದ ಅಧಿಕಾರಿಗಳಿಗೆ ತಹಶೀಲ್ದಾರ್ ನಂದೀಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರಸ್ಥಾನದಲ್ಲಿ ಕೆಲಸ ಮಾಡದೇ ಸಾರ್ವಜನಿಕರನ್ನ ಅಲೆಸುತ್ತಿದ್ದ ಗ್ರಾಮಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕ ಅಧಿಕಾರಿಗಳ ಮೈಗಳ್ಳತನದ ಬಗ್ಗೆ ಮಾಹಿತಿ ಪಡೆದ ನಾಗಮಂಗಲ ತಹಸಿಲ್ದಾರ್ ನಂದೀಶ್ ದಿಢೀರ್ ದಾಳಿ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ದಾಳಿ ವೇಳೆ ಅಧಿಕಾರಿಗಳಿಗಾಗಿ ಕಾಯುತ್ತಿದ್ದ ಸಾರ್ವಜನಿಕರ ಅಹವಾಲು ಆಲಿಸಿದ್ದಾರೆ. ಬಳಿಕ ಅನಧಿಕೃತ ಕಚೇರಿಯಲ್ಲಿದ್ದ ಗ್ರಾಮಲೆಕ್ಕಿಗ ಹಾಗೂ ಗ್ರಾಮ‌ ಸಹಾಯಕನಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಚೇರಿ ಏನಕ್ಕೆ ಮಾಡಿಕೊಂಡಿದ್ದೀರಿ? ಎಷ್ಟು ದಿನದಿಂದ ಕಚೇರಿ ಇದೆ. ನೀವು ಹಳ್ಳಿಯಲ್ಲಿರಬೇಕು, ಇಲ್ಲ ನಾಡ ಕಚೇರಿಯಲ್ಲಿರಬೇಕು. ಇಲ್ಲಿ ಏನ್ ಮಾಡ್ತಿದ್ದೀರಾ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:01 pm, Sat, 17 December 22