AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಆಹ್ವಾನ ನೀಡಿದ ಮಾಜಿ ಶಾಸಕ ಹಸನಸಾಬ್ ದೋಟಿಹಾಳ

ಕುಷ್ಟಗಿ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವಂತೆ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಆಹ್ವಾನ ನೀಡಿದ್ದಾರೆ.

ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಆಹ್ವಾನ ನೀಡಿದ ಮಾಜಿ ಶಾಸಕ ಹಸನಸಾಬ್ ದೋಟಿಹಾಳ
ಮಾಜಿ ಸಿಎಂ ಸಿದ್ಧರಾಮಯ್ಯ ಮಾಜಿ ಶಾಸಕ ಹಸನಸಾಬ್ ದೋಟಿಹಾಳ
TV9 Web
| Edited By: |

Updated on: Dec 16, 2022 | 4:07 PM

Share

ಕೊಪ್ಪಳ: ಕುಷ್ಟಗಿ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸುವಂತೆ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಆಹ್ವಾನ ನೀಡಿದ್ದಾರೆ. ಜಿಲ್ಲೆಯ ಕುಷ್ಟಗಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿ, ಅಮರೇಗೌಡರನ್ನು ಕ್ಷೇತ್ರದ ಚುನಾವಣಾ ಉಸ್ತುವಾರಿ ಮಾಡುತ್ತೇವೆ. 1991ರಿಂದ‌ ಕುಷ್ಟಗಿ ಕ್ಷೇತ್ರದ ಮೇಲೆ ಸಿದ್ದರಾಮಯ್ಯಗೆ ಪ್ರೀತಿ ಇದೆ. ನಾನು ಹಾಗೂ ಅಮರೇಗೌಡ ಇಬ್ಬರೂ ಸೇರಿ ಆಹ್ವಾನ ಕೊಟ್ಟಿದ್ದೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒಬ್ಬ ನಾಯಕ ಬರುತ್ತಾನೆ. ಆದಷ್ಟು ಬೇಗ ಸಿದ್ದರಾಮಯ್ಯನವರು ಒಪ್ಪಿಗೆ ಕೊಡಬೇಕೆಂದು ಮನವಿ ಮಾಡಿದರು. ನಿಮ್ಮ ಚುನಾವಣೆ ಜವಾಬ್ದಾರಿ ನಾವು ಹೊರುತ್ತೇವೆ. ಶತಾಯಗತಾಯ ಕುಷ್ಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಿ. ನಮ್ಮ ಸ್ವಾರ್ಥಕ್ಕಾಗಿ ಅವರನ್ನು ಕುಷ್ಟಗಿಗೆ ಸ್ಪರ್ಧಿಸಲು ಆಹ್ವಾನ ನೀಡ್ತಿಲ್ಲ ಎಂದು ಮಾಜಿ ಶಾಸಕ ಹಸನಸಾಬ್ ದೋಟಿಹಾಳ್ ಹೇಳಿದರು.

ನಾನು ಎಲ್ಲರಿಗೂ ವಿನಮ್ರವಾಗಿ ಹೇಳ್ತೇನೆ ಕುಷ್ಟಗಿಗೆ ಬರಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ 

ಕುಷ್ಟಗಿಯಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಆಹ್ವಾನ ವಿಮಾಜಿ ಸಿಎಂ ಸಿದ್ದರಾಮಯ್ಯಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಕೊಪ್ಪಳ ಹಾಗೂ ಕುಷ್ಟಗಿ ಜನರ ಋಣ ನನ್ನ ಮೇಲೆ ಇದೆ. ಅದೇ ಕಾರಣಕ್ಕೆ ಕುಷ್ಟಗಿಯಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ. ನಿಮ್ಮ ಆಹ್ವಾನಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಆದರೆ ನಾನು ಎಲ್ಲರಿಗೂ ವಿನಮ್ರವಾಗಿ ಹೇಳ್ತೇನೆ ಕುಷ್ಟಗಿಗೆ ಬರಲ್ಲ ಎಂದು ಹೇಳಿದರು. ಕೊಪ್ಪಳ, ಕುಷ್ಟಗಿ ಜನ ಬಹಳ ಒಳ್ಳೆಯವರು. ಅವಾಗೆಲ್ಲ ದುಡ್ಡು ಇರ್ತಿರಲಿಲ್ಲ. ಆದರೆ ಇವಾಗ ಚುನಾವಣೆ ದುಬಾರಿ ಆಗಿದೆ. ಅಮರೇಗೌಡ ಸಜ್ಜನ ರಾಜಕಾರಣಿ. ಜನಪರ ರಾಜಕಾರಣಿ ಅಮರೇಗೌಡ ಎಂದು ಹೇಳಿದರು.

ಇದನ್ನೂ ಓದಿ: ಕೊಪ್ಪಳ ಜಿಲ್ಲೆಯನ್ನೇ ಟಾರ್ಗೆಟ್ ಮಾಡಿದ ಬಿಜೆಪಿ ಮತ್ತು ಕಾಂಗ್ರೆಸ್; ಜಿಲ್ಲೆಯಲ್ಲಿ ಎರಡೂ ಪಕ್ಷಗಳ ರಾಜಕೀಯ ಚದುರಂಗದಾಟ

ಕುಷ್ಟಗಿ, ಲಿಂಗಸಗೂರ ಎರಡು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ನಾನು ಮುಖ್ಯಮಂತ್ರಿ ಆದಾಗ ಅವರು ಶಾಸಕರಿರಲಿಲ್ಲ. ಅವರು ಸೋತಾಗಲೂ ನಾನು ಅವರ ಕೆಲಸ ಮಾಡಿದ್ದೇನೆ. ಸೋತು ಅಮರೇಗೌಡ ಮನೆಯಲ್ಲಿ ಕೂರಲಿಲ್ಲ‌. ಅನೇಕ ಸಾರಿ ನನ್ನ ಬಂದು ಭೇಟಿ ಮಾಡಿ ಮನವಿ ಕೊಟ್ಟಿದ್ರು. ಇವತ್ತು ಕುಷ್ಟಗಿ ಯಲಬುರ್ಗಾದಲ್ಲಿ ಕುಡಿಯೋ ನೀರಿನ ಕೆಲಸ ಆಗಿದ್ದರೆ ಅದಕ್ಕೆ ಕಾರಣ ಅಮರೇಗೌಡ, ರಾಯರೆಡ್ಡಿ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ      

ನಡ್ಡಾ ಮೊನ್ನೆ ಬಂದಾಗ ಬಿಜೆಪಿ ಲಂಚರಹಿತ ಸರ್ಕಾರ ಎಂದಿದ್ದಾರೆ. ಮಿಸ್ಟರ್ ನಡ್ಡಾ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬರೀ ಲೂಟಿ ಮಾಡಿದ್ದಾರೆ. ಮಿಸ್ಟರ್ ನಡ್ಡಾ ಅವರು ಅಭಿವೃದ್ಧಿ ಮಾಡಿಲ್ಲ. ಲಂಚರಹಿತ ಸರ್ಕಾರ ಅಂತೀರಾ, ನಿಮಗೆ ನಾಚಿಕೆ ಆಗಲ್ವಾ. ರಿಪೋರ್ಟ್ ಕಾರ್ಡ್ ಹಿಡಿದು ಇಲೆಕ್ಷನ್ ಹೋಗಿ ಅಂತೀರಾ. ಏನ್ ಅಭಿವೃದ್ಧಿ ಮಾಡಿದ್ದೀರಿ. ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತೀರಿ ನಾವು ಮೋದಿ ಹತ್ರ ಆದಾಗ ಮೋದಿ ಏನ್ ಹೇಳಿದ್ರು ಗೊತ್ತಾ? ಮೊದಲು ಗೋವಾ ಒಪ್ಪಸಕೊಂಡು ಬನ್ನಿ ಎಂದು ವಾಪಸ್ ಕಳೆಸಿದ್ರು ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಪಕ್ಷ ಕಟ್ಟಿದ ಪ್ರಮುಖರಲ್ಲಿ ಒಬ್ಬರಾದ ನನ್ನನ್ನು ಕಡೆಗಣಿಸುವ ಪ್ರಶ್ನೆಯೇ ಬರುವುದಿಲ್ಲ: ಬಿಎಸ್​ವೈ

ಮೋದಿ ಅವರು ಅಂತರಾಜ್ಯ ನೀರಾವರಿ ಸಮಸ್ತೆಗೆ ಪ್ರಯತ್ನ ಮಾಡಲೇ‌ ಇಲ್ಲ. ಮಿಸ್ಟರ್ ನಡ್ಡಾ ಅವರೇ ಬಿಜೆಪಿ 40 ಪರ್ಸೆಂಟ್ ಸರ್ಕಾರ, ಇದು ನಾನ ಹೇಳಿಲ್ಲ, ಇಡೀ ರಾಜ್ಯದ ಜನ ಹೇಳಿದ್ದಾರೆ. ವಿಧಾನಸೌಧದ ಗೋಡೆಗಳು ಲಂಚದ ಬಗ್ಗೆ ಪಿಸುಗುಟ್ಟುತ್ತವೇ. ಗುತ್ತಿಗೆದಾರರು 40 ಪರ್ಸೆಂಟ್ ಸರ್ಕಾರ ಎಂದಿದ್ದಾರೆ ಮಿಸ್ಟರ್ ನಡ್ಡಾ. ಮಿಸ್ಟರ್ ಮೋದಿ ಜಿ ನಾ ತಿನ್ನಲ್ಲ ತಿನ್ನೋಕೆ ಬಿಡಲ್ಲ ಎನ್ನುತ್ತಾರೆ, ಮೋದಿ ನಿಮ್ಮ ಸರ್ಕಾರ 40 ಪರ್ಸೆಂಟ್ ಹೊಡೀತಿದಾರೆ ಏನ್ ಮಾಡ್ತೀದಿರಿ ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.

ಬಿಜೆಪಿ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯೂ ಇಲ್ಲ ಎಂದ ಡಿಕೆಶಿ

ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯೂ ಇಲ್ಲ. ಬಿಜೆಪಿಯಲ್ಲಿ ಲಂಚ ಹೊಡೆಯುವುದರಲ್ಲಿ ಕಾಂಪಿಟೇಷನ್​ ಇದೆ. ರಾಜ್ಯ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನ ನಿರ್ಧರಿಸಿದ್ದಾರೆ ಎಂದು ತೀವ್ರ ವಾಗ್ದಾಳಿ ಮಾಡಿದರು. ನಮ್ಮ ಸರ್ವೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್​ 136 ಸ್ಥಾನ ಗೆಲ್ಲಲಿದೆ. ಬಿಜೆಪಿಯವರು ಜನರ ಭಾವನೆ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಧಾನಿ ಆಗಬಹುದಿತ್ತು. ಆದರೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದರು. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದು ನಮ್ಮ ಸೌಭಾಗ್ಯ. ರಾಜ್ಯದಲ್ಲಿ ಬಿಜೆಪಿಯ ಅಧಿಕಾರ ಇನ್ನು ಕೇವಲ 3 ತಿಂಗಳು ಮಾತ್ರ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.