ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಭಕ್ತರಿಗೆ ಭೂರಿ ಭೋಜನ -ದಾಸೋಹಕ್ಕೆ ಲಕ್ಷ ಲಕ್ಷ ಹೋಳಿಗೆ, ರೊಟ್ಟಿ ನೀಡಿದ ಭಕ್ತರು

| Updated By: ಸಾಧು ಶ್ರೀನಾಥ್​

Updated on: Jan 27, 2024 | 3:56 PM

ಕೊಪ್ಪಳ ನಗರದಲ್ಲಿನ ಗವಿಮಠದ ಜಾತ್ರೆ ಅನೇಕ ವೈಶಿಷ್ಟ್ಯ ಗಳಿಂದ ಹೆಸರಾಗಿದೆ. ಮಠದ ಜಾತ್ರೆ ಮತ್ಕು ಮಠದಲ್ಲಿ ಜಾತ್ರೆಯ ಅಂಗವಾಗಿ ನಡೆಯೋ ಅನೇಕ ಕಾರ್ಯಕ್ರಮಗಳು ಎಷ್ಟು ಪ್ರಸಿದ್ದಿಯನ್ನು ಪಡೆದಿವೆಯೋ ಅಷ್ಟೇ ಪ್ರಸಿದ್ದಿ ಪಡೆದಿರೋದು ಜಾತ್ರೆಯಲ್ಲಿ ನಡೆಯೋ ಮಹಾದಾಸೋಹ.

ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಭಕ್ತರಿಗೆ ಭೂರಿ ಭೋಜನ -ದಾಸೋಹಕ್ಕೆ ಲಕ್ಷ ಲಕ್ಷ ಹೋಳಿಗೆ, ರೊಟ್ಟಿ ನೀಡಿದ ಭಕ್ತರು
ಕೊಪ್ಪಳ ಗವಿಮಠದ ಜಾತ್ರೆ: ದಾಸೋಹಕ್ಕೆ ಲಕ್ಷ ಲಕ್ಷ ಹೋಳಿಗೆ, ರೊಟ್ಟಿ!
Follow us on

ಕೊಪ್ಪಳ ನಗರದಲ್ಲಿರುವ ಗವಿಮಠ ದಕ್ಷಿಣ ಭಾರತದ ಕುಂಭಮೇಳ ಅಂತ ಪ್ರಸಿದ್ದಿ ಪಡೆದಿದೆ. ರಥೋತ್ಸವ ದಿನದಿಂದ ತಿಂಗಳ ಕಾಲ ನಡೆಯೋ ಜಾತ್ರೆಗೆ ಹತ್ತು ಲಕ್ಷಕ್ಕೂ ಅಧಿಕ ಭಕ್ತರು ಗವಿಮಠಕ್ಕೆ ಬಂದು, ಗವಿಸಿದ್ದೇಶಿವರರ ದರ್ಶನ ಪಡೆಯುತ್ತಾರೆ. ಇನ್ನು ಮಠಕ್ಕೆ ಬಂದವರು ಯಾರು ಕೂಡಾ ಹಸಿವಿನಿಂದ ಹೋಗಬಾರದು ಅನ್ನೋದು ಗವಿಮಠದ ಪೀಠಾಧಿಪತಿಯಾಗಿರೋ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಆಶಯವಾಗಿದೆ. ಹೀಗಾಗಿ ಜಾತ್ರೆಯ ಸಮಯದಲ್ಲಿ ಭರೋ ಭಕ್ತರಿಗೆ ಭರ್ಜರಿ ಭೂರಿ ಭೋಜನದ ವ್ಯವಸ್ಥೆಯನ್ನು ಮಾಡುತ್ತಾರೆ.

ಒಟ್ಟು 21 ದಿನಗಳ ಕಾಲ ಮಠದಲ್ಲಿ ಮಹಾ ದಾಸೋಹ ನಡೆಯಲಿದ್ದು, ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಲಾಗಿದೆ. ಈಗಾಗಲೇ ಒಂದು ವಾರದಿಂದ ಮಹಾದಾಸೋಹ ಆರಂಭವಾಗಿದ್ದು, ರಥೋತ್ಸವ ದಿನವಾದ ಇಂದು ಭಕ್ತರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಇಂದು ರೊಟ್ಟಿ, ಕಾಳು ಪಲ್ಯಾ, ಬದನೆಕಾಯಿ ಪಲ್ಯಾ, ಶೇಂಗಾ ಹೋಳಿಗೆ, ಮಾದಲಿ, ಕಡಬು ತುಪ್ಪ ಸೇರಿದಂತೆ ಅನೇಕ ಸಿಹಿ ತಿನಿಸುಗಳು, ಅನ್ನ ಸಾರನ್ನು ನೀಡಲಾಗುತ್ತಿದೆ.‌ಪ್ರಸಾದವಾದ್ರು ಕೂಡಾ ಜಾತ್ರೆಗೆ ಬರೋ ಭಕ್ತರಿಗೆ ಭೂರಿ ಭೋಜನದ ವ್ಯವಸ್ಥೆ ಯನ್ನು ಮಠದಿಂದ ಮಾಡಲಾಗಿದೆ.

ದಾಸೋಹಕ್ಕೆ ಲಕ್ಷ ಲಕ್ಷ ಹೋಳಿಗೆ, ರೊಟ್ಟಿ ನೀಡಿದ ಭಕ್ತರು


ಗವಿಮಠದ ಜಾತ್ರೆ ಮಹಾದಾಸೋಹದಿಂದ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಇದಕ್ಕೆ ಮಠದ ಭಕ್ತರು ಕೂಡಾ ಕೈ ಜೋಡಿಸಿದ್ದಾರೆ. ಮಹಾದಾಸೋಹಕ್ಕೆ, ಲಕ್ಷ ಲಕ್ಷ ಶೇಂಗಾ ಹೋಳಿಗೆ, ರೊಟ್ಟಿಯನ್ನು ಸಿದ್ದಗೊಳಿಸಿ ಮಠಕ್ಕೆ ತಂದು ನೀಡಿದ್ದಾರೆ. ಜಾತ್ರೆಗೆ ಒಂದು ತಿಂಗಳು ಇರುವಾಗಲೇ ಭಕ್ತರು ತಮ್ಮ ತಮ್ಮ ಮನೆಯಲ್ಲಿ ತಮ್ಮ ಶಕ್ತ್ಯಾನುಸಾರ ರೊಟ್ಚಿ,ಶೇಂಗಾ ಹೋಳಿಗೆ, ಕಡಬು, ಶೇಂಗಾ ಹಿಂಂಡಿಯನ್ನು ಸಿದ್ದಗೊಳಿಸಿ ಮಠಕ್ಕೆ ತಂದು ನೀಡುತ್ತಾರೆ. ಸಿಂಧನೂರಿನ ಭಕ್ತರ ತಂಡವೊಂದು ಎಂಟು ಲಕ್ಷ ಶೇಗಾ ಹೋಳಿಗೆಯನ್ನು ಸಿದ್ದಗೊಳಿಸಿ ತಂದು ನೀಡಿದ್ದಾರೆ.

ಇನ್ನು ಮಠದಲ್ಲಿ ಪ್ರತಿನಿತ್ಯ ದಾಸೋಹ ವ್ಯವಸ್ಥೆ ಇರುತ್ತದೆ. ಆದ್ರೆ ಜಾತ್ರೆ ಸಮಯದಲ್ಲಿ ಮಹಾ ದಾಸೋಹ ನಡೆಸಲಾಗುತ್ತದೆ. ಜಾತ್ರೆಗೆ ಬರೋ ಭಕ್ತರು ಹಸಿವಿನಿಂದ ಬಳಲಬಾರದು ಅಂತ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಊಟಕ್ಕಾಗಿಯೇ ನೂರಕ್ಕೂ ಹೆಚ್ಚು ಕೌಂಟರ್ ಆರಂಭಿಸಲಾಗಿದೆ. ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಅಡುಗೆ ತಯಾರಿ ಸೇರಿದಂತೆ ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ದಿನದ ಮೂರು ಹೊತ್ತು ಕೂಡಾ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

Published On - 3:54 pm, Sat, 27 January 24