ಪಕ್ಷದಿಂದ ದೂರವಾಗಿರುವ ಗಾಲಿ ಜನಾರ್ಧನ ರೆಡ್ಡಿಯ ಮೇಲೂ ಬಿಜೆಪಿ ನಾಯಕರ ಕಣ್ಣಿದೆಯೇ?
ಹಿಂದೆ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಜನಾರ್ಧನ ರೆಡ್ಡಿ ಇಂದು ಗಂಗಾವತಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿದರು. ಇಡೀ ವಿಶ್ವವೇ ಮೆಚ್ಚುವ ರೀತಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸಿ ಬಾಲರಾಮನ ಪ್ರಾಣ ಪ್ರತಿಷ್ಠೆ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಎಲ್ಲರೂ ಅಭಿನಂದಿಸಲೇಬೇಕು ಎಂದು ರೆಡ್ಡಿ ಹೇಳುತ್ತಾರೆ.
ಕೊಪ್ಪಳ: ಪಕ್ಷ ಬಿಟ್ಟು ಹೋಗಿದ್ದ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ವಾಪಸ್ಸು ಕರೆತರಲಾಗಿದೆ. ಬಿಜೆಪಿ ನಾಯಕರ ಮುಂದಿನ ಟಾರ್ಗೆಟ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ ಮತ್ತು ಶಾಸಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಅವರಾಗಲಿದ್ದಾರೆಯೇ? ಅಥವಾ ಖುದ್ದು ರೆಡ್ಡಿಯವರಿಗೆ ಬಿಜೆಪಿ ಸೇರುವ ಆತುರವಿದೆಯಾ? ಈ ಹಿಂದೆಯೂ ಅವರು ಅಂಥ ಪ್ರಯತ್ನಗಳನ್ನು ಮಾಡಿದ್ದರು, ಅವರ ಆಪ್ತಮಿತ್ರ ಮತ್ತು ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು (B Sriramulu) ಸ್ನೇಹಿತನ ಪರ ವಕಾಲತ್ತು ಸಹ ವಹಿಸಿದ್ದರು. ಆದರೆ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ರೆಡ್ಡಿಯವರನ್ನು ವಾಪಸ್ಸು ಕರೆಸಿಕೊಳ್ಳಲು ಪಕ್ಷದ ದೆಹಲಿ ವರಿಷ್ಠರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಪರಿಸ್ಥಿತಿ ಈಗ ಬದಲಾಗಿದೆ ಮತ್ತು ರಾಜ್ಯ ಬಿಜೆಪಿ ನಾಯಕರು ಘರ್ ವಾಪ್ಸಿ ಅಭಿಯಾನ ಶುರುವಿಟ್ಟುಕೊಂಡಿದ್ದಾರೆ.
ಅದಕ್ಕೆ ಪೂರಕವಾಗಿ ಹಿಂದೆ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಜನಾರ್ಧನ ರೆಡ್ಡಿ ಇಂದು ಗಂಗಾವತಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿದರು. ಇಡೀ ವಿಶ್ವವೇ ಮೆಚ್ಚುವ ರೀತಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸಿ ಬಾಲರಾಮನ ಪ್ರಾಣ ಪ್ರತಿಷ್ಠೆ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಎಲ್ಲರೂ ಅಭಿನಂದಿಸಲೇಬೇಕು ಎಂದು ರೆಡ್ಡಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ