ಧಾರವಾಡ: ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಹಂಪಿ (Hampi) ಸಮೀಪದ ಆನೆಗೊಂದಿಯಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ತಾಲೂಕಾ ಆಡಳಿತ 144 ಸೆಕ್ಷನ್ ಜಾರಿ ಮಾಡಿರುವುದನ್ನು, ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದ ರಾಯರ ಮಠಕ್ಕೆ ಹಿನ್ನಡೆಯಾಗಿದೆ. ಒಂದೇ ವೃಂದಾವನಕ್ಕೆ ರಘುವರ್ಯತೀರ್ಥಯತಿಗಳ ಹಾಗೂ ಜಯತೀರ್ಥಯತಿಗಳ ನಾಮಫಲಕ ಅಳವಡಿಸಿಲಾಗಿತ್ತು. ಈ ಸಂಬಂಧ ಉತ್ತರಾದಿ ಮಠ ಮತ್ತು ರಾಯರ ಮಠದ ನಡುವೆ ವಿವಾದ ಸೃಷ್ಟಿಯಾಗಿತ್ತು.
ಈ ಮಧ್ಯೆ ರಘುವರ್ಯತೀರ್ಥರ ಆರಾಧನೆ ಹಾಗೂ ಜಯತೀರ್ಥರ ಆರಾಧನೆ ವಿಚಾರವಾಗಿ ಉತ್ತರಾದಿ ಮಠ ಮತ್ತು ರಾಯರ ಮಠದ ನಡುವೆ ವಿವಾದ ಉಂಟಾಗಿತ್ತು. ಜಯತೀರ್ಥರ ಆರಾಧನೆ ಮಾಡೋದಾಗಿ ರಾಯರ ಮಠ ವಾದ ಮಾಡಿದರೇ, ರಘುವರ್ಯತೀರ್ಥರ ಆರಾಧನೆಗೆ ಉತ್ತರಾದಿ ಮಠ ಪಟ್ಟು ಹಿಡದಿತ್ತು.
ಹೀಗಾಗಿ ಆರಾಧನೆಗೆ ಅವಕಾಶ ನೀಡಬೇಕು ಎಂದು ಎರಡೂ ಮಠಗಳ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ಉಪವಿಭಾಗಾಧಿಕಾರಿ ನೇತೃತ್ವದ ಸಭೆಯಲ್ಲಿ ಎರಡೂ ಮಠಗಳ ಪ್ರತಿನಿಧಿಗಳು ಒಮ್ಮತಕ್ಕೆ ಬರಲಿಲ್ಲ. ಹೀಗಾಗಿ ಜಿಲ್ಲಾಡಳಿತವು ನವಬೃಂದಾವನ ಗಡ್ಡೆಯಲ್ಲಿ ಆರಾಧನೆಗೆ ನಿರ್ಬಂಧ ವಿಧಿಸುವ ತೀರ್ಮಾನ ತೆಗೆದುಕೊಂಡಿತು.
Published On - 9:54 pm, Fri, 15 July 22