ಕೊಪ್ಪಳ: 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಎಲ್ಲೆಡೆ ಸಕಲ ಸಿದ್ಧತೆ ನಡೆಯುತ್ತಿದೆ. ಹೀಗಿರುವಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ (Basavaraj Rayareddy), ಈ ಬಾರಿ 500 ಅಥವಾ 1000 ರೂಪಾಯಿಗೆ ಮತ ಹಾಕಬೇಡಿ. ಒಂದು ವೋಟ್ಗೆ ಕನಿಷ್ಠ 5 ಲಕ್ಷ ರೂಪಾಯಿ ಕೇಳಿ ಎಂದು ಸ್ವ ಕ್ಷೇತ್ರ ಯಲಬುರ್ಗಾ ಮತದಾರರಿಗೆ ಸಲಹೆ ನೀಡಿದ್ದಾರೆ.
ಮನೆಯಲ್ಲಿ 10 ವೋಟ್ ಇದ್ದರೆ 50 ಲಕ್ಷ ಕೇಳಿ. 500 ಅಥವಾ 1000 ರೂಪಾಯಿ ತೆಗೆದುಕೊಂಡರೆ ಕೊಪ್ಪಳಕ್ಕೆ ಹೋಗಿ ಚಹಾ ಕುಡಿಯುವುದಕ್ಕೂ ಆಗುವುದಿಲ್ಲ. ಅವರಿಂದ ಹಣ ತಗೊಂಡು ನನಗೆ ಒಂದು ವೋಟ್ಗೆ 300 ರೂಪಾಯಿ ಕೊಡಬೇಕು. ಆಗ ನೀವು ಕರ್ನಾಟಕದಲ್ಲಿ ಜನಪ್ರಿಯರಾಗುತ್ತೀರಾ ಎಂದು ಮತದಾರರಿಗೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣ ಪಂಚಾಯತ್ ಚುನಾವಣೆಯ ಪ್ರಚಾರದ ವೇಳೆ ಈ ಹೇಳಿಕೆ ನೀಡಿರುವ ಅವರು, ಈಗೆಲ್ಲ ಗಣಿಗಾರಿಕೆ ಮಂದಿ ರಾಜಕಾರಣಕ್ಕೆ ಬಂದಿದ್ದಾರೆ. ಅವರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಗ್ರ್ಯಾನೆಟ್ ದಂಧೆ ಮಾಡುವವರು ಹೆಚ್ಚು ದುಡ್ಡು ಕೊಡುತ್ತಾರೆ ಎಂದು ಪರೋಕ್ಷವಾಗಿ ಗಣಿ ಸಚಿವ ಹಾಲಪ್ಪ ಆಚಾರಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ:
ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುವಾಗ ಎಂದಿನಂತೆ ಪುಂಡಾಟ ಮೆರೆದ ಎಮ್ ಈ ಎಸ್ ಗೂಂಡಾಗಳು
ವಿಧಾನಸಭೆ ಚುನಾವಣೆಗೆ ಜೆಡಿಎಸ್ ತಯಾರಿ; 4 ದಿನ ಕಾರ್ಯಾಗಾರ; ಹೆಚ್ಡಿ ಕುಮಾರಸ್ವಾಮಿ