New Year Celebration: ಕೊಪ್ಪಳದ ರೆಸಾರ್ಟ್​ಗಳಲ್ಲಿ ವಿದೇಶಿಗರ ಎದರು ದೇಶಿ ಹಾಡು ಹಾಡಲು ತಯಾರಾದ ಕಲಾವಿದರು

| Updated By: ವಿವೇಕ ಬಿರಾದಾರ

Updated on: Dec 31, 2023 | 10:03 AM

ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಕೊಪ್ಪಳದ ರೆಸಾರ್ಟ್​ಗಳು ಸಿದ್ದವಾಗಿವೆ. ಈ ರೆಸಾರ್ಟ್​​ಗಳಲ್ಲಿ ನೆಲಸಿರುವ ವಿದೇಶಿಗರ ಎದುರು ಸ್ಥಳೀಯ ಕಲಾವಿದರು ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು ಸೇರಿದಂತೆ ಅನೇಕ ಕನ್ನಡ ಹಾಡುಗಳನ್ನು ಹಾಡಲು ಸಿದ್ದರಾಗಿದ್ದಾರೆ.

New Year Celebration: ಕೊಪ್ಪಳದ ರೆಸಾರ್ಟ್​ಗಳಲ್ಲಿ ವಿದೇಶಿಗರ ಎದರು ದೇಶಿ ಹಾಡು ಹಾಡಲು ತಯಾರಾದ ಕಲಾವಿದರು
ಕಲಾವಿದರು
Follow us on

ಕೊಪ್ಪಳ, ಡಿಸೆಂಬರ್​​ 31: ಹಂಪಿ (Hampi) ಸೇರಿದಂತೆ ಅಂಜನಾದ್ರಿ, ಪಂಪಾ ಸರೋವರವನ್ನು ನೋಡಲು ರಾಜ್ಯ, ಹೊರ ರಾಜ್ಯದಿಂದ ಮಾತ್ರವಲ್ಲದೆ, ವಿದೇಶದಿಂದ ಕೂಡ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅತಿ ಹೆಚ್ಚು ವಿದೇಶಿಗರು ರಾಜ್ಯಕ್ಕೆ ಬರುವುದು, ಕೊಪ್ಪಳ ಜಿಲ್ಲೆಗೆ ಎಂಬವುದು ವಿಶೇಷ. ವಿದೇಶಿ ಪ್ರವಾಸಿಗರು ಹೊಸ ವರ್ಷವನ್ನು (New Year) ಕೊಪ್ಪಳ (Koppal) ಜಿಲ್ಲೆಯಲ್ಲೇ ಆಚರಿಸಲು ಮುಂದಾಗಿದ್ದು, ಹೊಸ ವರ್ಷ ಸಂಭ್ರಮಾಚರಣೆಯ ತಯಾರಿ ಜೋರಾಗಿ ನಡೆದಿದೆ. ವಿದೇಶದಿಂದ ಪ್ರವಾಸಿಗರು ಬರುವುದರಿಂದ ಕೊರೊನಾ ಸೂಚನೆಗಳನ್ನು ಕೂಡಾ ಕಟ್ಟುನಿಟ್ಟಾಗಿ ಪಾಲಿಸಲು ರೆಸಾರ್ಟ್, ಹೊಟೇಲ್ ಮಾಲಿಕರು ಮುಂದಾಗಿದ್ದಾರೆ.

ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿವೆ ರೆಸಾರ್ಟ್​ಗಳು

ಕೊಪ್ಪಳ ಜಿಲ್ಲೆಯ ಬಸ್ಸಾಪುರ, ಸಾಣಾಪುರ ಸೇರಿದಂತೆ ಸುತ್ತಮುತ್ತಲಿನ ಏರಿಯಾದಲ್ಲಿ ಅನೇರ ರೆಸಾರ್ಟ್ ಗಳಿವೆ. ಇಲ್ಲಿನ ರೆಸಾರ್ಟ್​ಗಳಿಗೆ ಹೆಚ್ಚಾಗಿ ಬರುವದು ವಿದೇಶಿಗರು. ಹೌದು ರಾಜ್ಯದಲ್ಲಿ ಅತಿ ಹೆಚ್ಚು ವಿದೇಶಿಗರು ಬರುವುದು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಗೆ. ವಿಶ್ವಪಾರಂಪರಿಕ ಸ್ಥಳ ಹಂಪಿ ಮತ್ತು ಹುನುಮ ಹುಟ್ಟಿದ ಸ್ಥಳ ಅಂಜನಾದ್ರಿ ಸೇರಿದಂತೆ ಸುತ್ತಮುತ್ತಲು ಅನೇಕ ಪ್ರವಾಸಿ ಸ್ಥಳಗಳು ವಿದೇಶಿಗರನ್ನು ಕೈ ಬೀಸಿ ಕರೆಯುತ್ತವೆ. ಇಲ್ಲಿನ ಪ್ರಕೃತಿ ಸೌಂದರ್ಯ, ಕಲ್ಲಿನ ಬೆಟ್ಟಗಳನ್ನು ನೋಡಲು ಪ್ರಾನ್ಸ್, ಬ್ರೆಜಿಲ್, ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇನ್ನು ಹೊಸ ವರ್ಷದ ಸಮಯದಲ್ಲಿ ಕೂಡಾ ಅನೇಕ ಪ್ರವಾಸಿಗರು ಇಲ್ಲೇ ಇರುವುದರಿಂದ, ಸ್ಥಳೀಯವಾಗಿ ಇದ್ದುಕೊಂಡೇ ಹೊಸ ವರ್ಷವನ್ನು ಆಚರಿಸಲಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ ಕೂಡಾ ಸಾವಿರಾರು ಪ್ರವಾಸಿಗರು, ಹೊಸ ವರ್ಷವನ್ನು ಆಚರಿಸಲು ಮತ್ತು ಐತಿಹಾಸಿಕ ಸ್ಥಳಗಳನ್ನು ನೋಡಲು ಬರುತ್ತಿರುವುದರಿಂದ, ರೆಸಾರ್ಟ್​ಗಳು ಈಗಾಗಲೇ ಪುಲ್ ಆಗಿವೆ. ಹೌದು ಕೊಪ್ಪಳ ತಾಲೂಕು, ಗಂಗಾವತಿ ತಾಲೂಕಿನಲ್ಲಿ ಹೆಚ್ಚಿನ ರೆಸಾರ್ಟ್​ಗಳಿದ್ದು, ಹೊಸ ವರ್ಷವನ್ನು ಆಚರಿಸಲು ಅನೇಕರು ಈಗಾಗಲೇ ರೂಮ್ ಬುಕ್ ಮಾಡಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಚಿಕ್ಕಮಗಳೂರಿನತ್ತ ಲಗ್ಗೆ ಇಟ್ಟ ಪ್ರವಾಸಿಗರು; ಎಲ್ಲೆಡೆ ಟ್ರಾಫಿಕ್, ಹೋಟೆಲ್​ಗಳು ಫುಲ್

ವಿದೇಶಿಗರ ಮುಂದೆ ಕನ್ನಡ ಹಾಡುಗಳ ಝೇಕಾಂರ

ಇನ್ನು ರೆಸಾರ್ಟ್​ಗಳಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ಅವಕಾಶ ಇರುವುದಿಲ್ಲ. ಆದರೆ ದೇಶಿಯ ಆಹಾರ, ದೇಶಿಯ ನೃತ್ಯ, ಮತ್ತು ಸ್ಥಳೀಯ ವಾದ್ಯಗಳನ್ನು ಬಳಸಿಕೊಂಡು, ಪ್ರವಾಸಿಗರಿಗೆ ಸಾಂಸ್ತ್ರತಿಕ ಚಟುವಟಿಕೆಗಳನ್ನು ನಡೆಸಲು ಮಾತ್ರ ಅವಕಾಶವಿದೆ. ಇರುವ ಅವಕಾಶದಲ್ಲಿಯೇ ವಿದೇಶಗರಿಗೆ ಮನರಂಜನೆ ಮೂಲಕ, ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ರೆಸಾರ್ಟ್​ಗಳಲ್ಲಿ ಸಿದ್ದತೆ ಆರಂಭವಾಗಿದೆ. ಸ್ಥಳೀಯ ಕಲಾವಿದರು ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು ಸೇರಿದಂತೆ ಅನೇಕ ಕನ್ನಡ ಹಾಡುಗಳನ್ನು ಹಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

ದೇಶದಲ್ಲಿ ಮತ್ತೆ ಕೊರೊನಾ ಜೆಎನ್ 1 ತಳಿಯ ಉಪಟಳ ಆರಂಭವವಾಗಿರುವುದರಿಂದ, ಮಾಲೀಕರು, ಕೊರೊನಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದ್ದಾರೆ. ವಿದೇಶಿಯರು ಬರುತ್ತಿರುವುದರಿಂದ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಕೇವಲ ಹಾಡು ನೃತ್ಯದ ಮೂಲಕ ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ರೆಸಾರ್ಟ್ ಮಾಲೀಕ ದೀಪಕ್‌ ಹೇಳಿದ್ದಾರೆ.

ಈ ಭಾಗದಲ್ಲಿ ಪ್ರವಾಸೋದ್ಯಮ ಬೆಳದಂತೆ ಜನರಿಗೆ ಉದ್ಯೋಗಸ್ಥರಾಗುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಸಭಲರಾಗುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ವಿದೇಶಿಗರು ಬರುತ್ತಿರುವುದರಿಂದ ಕೊಪ್ಪಳ ಇದೀಗ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ. ಕೊಪ್ಪಳ ಇದೀಗ ಪ್ರವಾಸಿಗರ ನೆಚ್ಚಿನ ತಾಣವಾಗಿ ಅಭಿವೃದ್ದಿಯಾಗುತ್ತಿದೆ. ಹೀಗಾಗಿ ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ದಂಡೇ ಬರುತ್ತಿದೆ. ಹೊಸ ವರ್ಷವನ್ನು ಐತಿಹಾಸಿಕ ಸ್ಥಳಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಆಚರಿಸಿ, ಹೊಸ ವರ್ಷವನ್ನು ಆನಂದಮಯದಿಂದ ಸ್ವಾಗತಿಸಲು ಸಾವಿರಾರು ಪ್ರವಾಸಿಗರ ಸಜ್ಜಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ