ಕೊಪ್ಪಳ: ಬೈಕ್ ಸ್ಕಿಡ್​​ ಆಗಿ ಬಿದ್ದು ಫ್ರಾನ್ಸ್ ಪ್ರವಾಸಿಗ ಸಾವು

| Updated By: ವಿವೇಕ ಬಿರಾದಾರ

Updated on: Oct 30, 2023 | 6:11 PM

ಬೈಕ್ ಸ್ಕಿಡ್​​ ಆಗಿ ಬಿದ್ದು ಫ್ರಾನ್ಸ್ ಪ್ರವಾಸಿಗ ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಬಸಾಪೂರ ಬಳಿ ನಡೆದಿದೆ. ಅಕ್ಟೋಬರ್ 26 ರಂದು ಮೋನ್ಸಲರ್ ಐದು ಜನ ಸ್ನೇಹಿತರೊಂದಿಗೆ ಹಂಪಿ ಪ್ರವಾಸಕ್ಕೆ ಬಂದಿದ್ದರು. ಮೋನ್ಸಲರ್ ಹಾಗೂ ಸ್ನೇಹಿತರು ಇಂದು (ಅ.30) ಬೈಕ್​​ನಲ್ಲಿ ಗೋವಾಕ್ಕೆ ತೆರಳುತ್ತಿದ್ದರು.

ಕೊಪ್ಪಳ: ಬೈಕ್ ಸ್ಕಿಡ್​​ ಆಗಿ ಬಿದ್ದು ಫ್ರಾನ್ಸ್ ಪ್ರವಾಸಿಗ ಸಾವು
ಸಾಂದರ್ಭಿಕ ಚಿತ್ರ
Follow us on

ಕೊಪ್ಪಳ ಅ.30: ಬೈಕ್ ಸ್ಕಿಡ್​​ ಆಗಿ ಬಿದ್ದು ಫ್ರಾನ್ಸ್ (France) ಪ್ರವಾಸಿಗ ಮೃತಪಟ್ಟಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಬಸಾಪೂರ ಬಳಿ ನಡೆದಿದೆ. ಮೋನ್ಸಲರ್ (63) ಮೃತಪಟ್ಟ ಫ್ರಾನ್ಸ್ ಪ್ರವಾಸಿಗ. ಅಕ್ಟೋಬರ್ 26 ರಂದು ಮೋನ್ಸಲರ್ ಐದು ಜನ ಸ್ನೇಹಿತರೊಂದಿಗೆ ಹಂಪಿ (Hampi) ಪ್ರವಾಸಕ್ಕೆ ಬಂದಿದ್ದರು. ಮೋನ್ಸಲರ್ ಹಾಗೂ ಸ್ನೇಹಿತರು ಇಂದು (ಅ.30) ಬೈಕ್​​ನಲ್ಲಿ ಗೋವಾಕ್ಕೆ ತೆರಳುತ್ತಿದ್ದರು. ಆದರೆ ಬಸಾಪೂರದ ಬಳಿ ಬೈಕ್ ಸ್ಕಿಡ್​ ಆಗಿ ಬಿದ್ದಿದ್ದಾರೆ. ಕೂಡಲೆ ಸ್ಥಳೀಯರು ಕೂಡಲೇ ಮೋನ್ಸಲರ್​ನನ್ನು ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ‌ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೋನ್ಸಲರ್ ನಿಧನರಾಗಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ

ಮಂಗಳೂರು: ಕಳೆದ ಮೂರು ವರ್ಷಗಳಿಂದ ಆತ್ಮಹತ್ಯೆಗಳಿಂದ ನಿರಾತಂಕವಾಗಿದ್ದ ಉಳ್ಳಾಲದ ನೇತ್ರಾವತಿ ಸೇತುವೆ ಇದೀಗ ಮತ್ತೆ ಯುವಕನೋರ್ವನ ಆತ್ಮಹತ್ಯೆಯಿಂದ ಸುದ್ದಿಯಾಗಿದೆ. 2019 ರಲ್ಲಿ ಕೆಫೆ ಡೇ ಮಾಲೀಕ ಸಿದ್ದಾಥ್೯ ಆತ್ಮಹತ್ಯೆ ನಂತರ ಸರಣಿ ಆತ್ಮಹತ್ಯೆಗಳೇ ನೇತ್ರಾವತಿ ಸೇತುವೆಯಲ್ಲಿ ನಡೆದಿತ್ತು.

ಇದನ್ನೂ ಓದಿ: ಬೆಂಗಳೂರು: ಬೆನ್ಜ್ ಕಾರು ಅಪಘಾತ, ಓರ್ವ ಸಾವು ಪ್ರಕರಣ; ಆರೋಪಿ ಬಂಧನ

2020 ರಲ್ಲಿ ಆತ್ಮಹತ್ಯೆ ತಡೆಗಾಗಿ ಮುಡಾ ಅಭಿವೃದ್ಧಿ ಅನುದಾನದ ಮೂಲಕ ತಡೆಬೇಲಿ ಅಳವಡಿಸಲಾಯಿತು. ತದನಂತರ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆಗಳು ನಿಂತಿತ್ತು. ಇದೀಗ ಮತ್ತೆ ಚಿಕ್ಕಮಗಳೂರಿನ ಮುಗುಳಬಳ್ಳಿ ಗೋಕುಲ್ ಫಾಮ್೯ ನಿವಾಸಿ ಬಿ.ಎಸ್ ಶಂಕರಗೌಡ ಎಂಬವರ ಪುತ್ರ ಪ್ರಸನ್ನ (37) ಎಂಬವರು ಆತ್ಮಹತ್ಯೆ ಮತ್ತೆ ಆತಂಕ ಮೂಡಿಸಿದೆ.

ಮಧ್ಯಾಹ್ನ ವೇಳೆ ತೊಕ್ಕೊಟ್ಟು ಕಡೆಯಿಂದ ಬಂದು ರಾ.ಹೆ.66 ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯನ್ನು ಪ್ರತ್ಯಕ್ಷ ಕಂಡವರು ತಕ್ಷಣ ರಕ್ಷಣೆಗೆ ಓಡಿದರೂ ಅದಾಗಲೇ ಯುವಕ ನೀರುಪಾಲಾಗಿದ್ದನು. ಘಟನಾ ಸ್ಥಳದಲ್ಲಿ ಕುತೂಹಲಿಗರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಡಚಣೆಯುಂಟಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Mon, 30 October 23