ಕೊಪ್ಪಳ: ವಿಧಾನಸಭೆ ಚುನಾವಣೆ(Karnataka Assembly Election)ಗೆ ದಿನ ಎಣಿಕೆ ಶುರುವಾಗಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಅದರಂತೆ ಬರೋಬ್ಬರಿ ನಾಲ್ಕು ತಿಂಗಳ ಹಿಂದೆ ಜಿಲ್ಲೆಯ ಗಂಗಾವತಿ ಕ್ಷೇತ್ರದ ಖದರ್ ಬದಲಾಗಿ ಹೋಗಿತ್ತು. ಯಾವಾಗ ಗಾಲಿ ಜನಾರ್ದನ ರೆಡ್ಡಿ(Gali Janardhan Reddy) ಗಂಗಾವತಿಯಿಂದ ಈ ಭಾರಿ ಸ್ಪರ್ಧೆ ಮಾಡುತ್ತೆನೆ ಎಂದು ಘೋಷಣೆ ಮಾಡಿದ್ರೋ, ಅವಾಗಲೇ ನೋಡಿ ರಾಜ್ಯದ ಹೈ ವೊಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿತ್ತು. ಅಷ್ಟೆ ಅಲ್ಲದೆ ತಮ್ಮದೇ ಸ್ವಂತ ಪಾರ್ಟಿ ಕಟ್ಟಿದರು ಗಣಿಧಣಿ. ಈ ಮೂಲಕ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ನಡುಕ ಹುಟ್ಟಿಸಿದ್ದರು. ಅಲ್ಲದೆ ಬಳ್ಳಾರಿಯಿಂದ ತಮ್ಮ ಪತ್ನಿಯನ್ನೆ ಕಣ್ಣಕ್ಕಿಳಿಸಿ ಸಹೋದರನಿಗೆ ಸವಾಲ್ ಹಾಕಿದ್ದರು. ಕೆಲವರು ಬಿಜೆಪಿ ಬಿ ಟೀಂ ಎಂದು ಕೆಲವರು ಮಾತಾಡಿಕೊಂಡ್ರೆ, ಇನ್ನು ಕೆಲವರು ಬಿಜೆಪಿಗೆ ಮುಳುವಾಗ್ತಾರೆ ಎಂದು ಕೊಂಡ್ರು.
ಪ್ರಬಲ ಪೈಪೋಟಿ ಎದುರಿಸುತ್ತಿರುವ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ
ಹೌದು ಸದ್ಯ ವಾಸ್ತವದ ಸ್ಥಿತಿ ಬದಲಾಗಿದೆ ಗಣಿಧಣಿ ರೆಡ್ಡಿ ತಾವು ಸ್ಫರ್ಧಿಸುತ್ತಿರೋ ಗಂಗಾವತಿಯಲ್ಲಿಯೇ ಪ್ರಬಲ ಪೈಪೋಟಿ ಎದುರಿಸುತ್ತಿದ್ದಾರೆ. ರಾಜ್ಯ ರಾಜಕಾರಣದದಲ್ಲಿ ಮತ್ತೊಮ್ಮೆ ತಮ್ಮ ಅಸ್ತಿತ್ವ ಪ್ರದರ್ಶನ ಮಾಡೋಕೆ ಹೊರಟ್ಟಿದ್ದ ರೆಡ್ಡಿಗೆ, ತಮ್ಮ ಅಸ್ವಿತ್ವದ ಪ್ರಶ್ನೆ ಎದುರಾಗುತ್ತಿರೋದು ಸುಳ್ಳಲ್ಲ. ಮೊದ ಮೊದಲು ಗಂಗಾವತಿಯಲ್ಲಿ ಬಹಳ ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದ ರೆಡ್ಡಿಗೆ ಸದ್ಯ ಅದೇ ಗಂಗಾವತಿ ನುಂಗಲಾರಾದ ತುತ್ತಾಗಿದೆ. ಯಾಕೆಂದರೆ ರೆಡ್ಡಿಗೆ ಗಂಗಾವತಿಯಲ್ಲಿ ಕಾಂಗ್ರೆಸ್ನ ಇಕ್ಬಾಲ್ ಅನ್ಸಾರಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಸ್ವಲ್ಪ ಯಾಮಾರಿದ್ರು ರಿಸಲ್ಟ್ ಅಲ್ಲೋಲ ಕಲ್ಲೋಲ ಆಗುತ್ತೆ ಎನ್ನುವ ಸುಳಿವು ರೆಡ್ಡಿಗೆ ಸಿಕ್ಕಿದೆ.
ಇದನ್ನೂ ಓದಿ:ಒಂದು ಪಕ್ಷ ಚುನಾವಣೆ ಟಿಕೆಟ್ ಆಫರ್ ಮಾಡಿತ್ತು, ಆದರೆ ಪ್ರಸ್ತುತ ರಾಜಕೀಯ ಭೀಕರ: ನಾಗತಿಹಳ್ಳಿ ಚಂದ್ರಶೇಖರ್
ಕೈ ಅಭ್ಯರ್ಥಿ ಅನ್ಸಾರಿ ಬಗ್ಗೆ ಶುರುವಾದ ಟೆನ್ಷನ್
ಗಂಗಾವತಿಯ ಜಾರಿ ಸಮೀಕರಣವೇ ರೆಡ್ಡಿಗೆ ಮುಳುವಾಗುತ್ತಿದೆ. ಬಿಜೆಪಿ ಹಾಲಿ ಶಾಸಕನ ಬಗ್ಗೆ ರೆಡ್ಡಿಗೆ ಹೆಚ್ಚು ಚಿಂತೆ ಇಲ್ಲ, ಬದಲಿಗೆ ಕೈ ಅಭ್ಯರ್ಥಿ ಅನ್ಸಾರಿ ಬಗ್ಗೆಯೇ ಟೆನ್ಶನ್ ಶುರುವಾಗಿದೆ. ಅದಕ್ಕೆ ಕಾರಣ ಎನಪ್ಪಾ ಅಂದ್ರೆ ಜಾರಿ ಸಮೀಕರಣ. ಹೌದು ಗಂಗಾವತಿಯಲ್ಲಿ ಮುಸ್ಲಿಂ ಸಮುದಾಯದ 40 ಸಾವಿರಕ್ಕೂ ಅಧಿಕ ಮತದಾರರಿದ್ದು, ಕುರುಬ 20, ಕ್ರಿಶ್ಚಿಯನ್ 10 ಸಾವಿರ ಮತದಾರರಿದ್ದಾರೆ. ಇವೆರೆಲ್ಲ ಕಾಂಗ್ರೆಸ್ ಪರವಾಗಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿಯೇ ಸದ್ಯ ರೆಡ್ಡಿಗೆ ಟೆನ್ಶನ್ ಶುರುವಾಗಿದೆ.
ರೆಡ್ಡಿ ತಮ್ಮ ಆಪ್ತ ಅಲಿಖಾನ್ ಮೂಲಕ ಮುಸ್ಲಿಂ ಮತಬ್ಯಾಂಕ್ ಪಡೆದುಕೊಳ್ಳಬಹುದು ಅಂದುಕೊಂಡಿದ್ದ ರೆಡ್ಡಿಗೆ ಮೊದಲ ಯತ್ನವೇ ವಿಪಲವಾಗಿದೆ. ಸ್ವತಃ ಮುಸ್ಲಿಂ ಸಮುದಾಯವೇ ಅಲಿಖಾನ್ಗೆ ನಮ್ಮ ಏರಿಯಾಗಳಿಗೆ ಬರಬೇಡ ಎನ್ನುತ್ತಿದ್ದಾರೆ. ಇದರ ಜೊತೆಗೆ ಕುರುಬ ಹಾಗೂ ಕ್ರಿಶ್ಚಿಯನ್ ಸಮುದಾಯ ಕೈ ಪರ ನಿಂತಿದ್ದಾರೆ. ಇದೇ ವಿಷಯ ಜನಾರ್ದನ ರೆಡ್ಡಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೆ ಗ್ರಾಮೀಣ ಮಟ್ಟದಲ್ಲಿಯೂ ರೆಡ್ಡಿ ಅಷ್ಟಾಗಿ ಪ್ರಚಲಿತದಲ್ಲಿಲ್ಲ. ಹೀಗಾಗೇ ಗ್ರಾಮೀಣ ಭಾಗದ ಮತದಾರರ ಒಲವು ಕೂಡ ರೆಡ್ಡಿ ಪರವಾಗಿ ಕಾಣುತ್ತಿಲ್ಲ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬಲಾಢ್ಯವಾಗಿವೆ. ಇದೇ ವಿಷಯ ಸದ್ಯ ಗಣಿಧಣಿ ನಿದ್ದೆಗೆಡಿಸಿವೆ.
ಇದನ್ನೂ ಓದಿ:ಹನಿ ನೀರಾವರಿಯಲ್ಲಿ 1,500 ಕೋಟಿ ರೂ. ಕೊಳ್ಳೆ: ಚುನಾವಣೆ ಹೊಸ್ತಿಲಲ್ಲಿ ಬೊಮ್ಮಾಯಿ ವಿರುದ್ಧ ಬಿಜೆಪಿ ಶಾಸಕ ಗಂಭೀರ ಆರೋಪ
ಮೊದ ಮೊದಲು ಗಂಗಾವತಿಯಲ್ಲಿ ರೆಡ್ಡಿ ಹವಾ ಜೋರಾಗಿತ್ತು. ಅದ್ರೆ, ದಿನಕಳೆದಂತೆ ವಾಸ್ತವವೇ ಬೇರೆಯದ್ದಾಗಿ ಕಾಣುತ್ತಿದೆ. ಸುಲಭವಾಗಿ ಗೆಲ್ಲುತ್ತಿನಿ ಎಂದುಕೊಂಡಿದ್ದ ರೆಡ್ಡಿಗೆ ಹನುಮ ಜನ್ಮ ಭೂಮಿ ಕಬ್ಬಿಣದ ಕಡಲೆಯಾಗಿದ್ದು ಸುಳ್ಳಲ್ಲ.
ವರದಿ: ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 am, Sun, 16 April 23