ತಗಡಿನ ಮನೆಗೆ 1 ಲಕ್ಷ ರೂ. ವಿದ್ಯುತ್ ಬಿಲ್: ವೃದ್ಧೆ ನಿವಾಸಕ್ಕೆ ದೌಡಾಯಿಸಿ ಸಮಸ್ಯೆ ನಿವಾರಿಸಿದ ಜೆಸ್ಕಾಂ ಅಧಿಕಾರಿ: ಅಜ್ಜಿ ಫುಲ್ ಖುಷ್

ಕೊಪ್ಪಳದ 90 ವರ್ಷದ ಅಜ್ಜಿ ಮನೆಗೆ 1 ಲಕ್ಷ ರೂ ವಿದ್ಯುತ್​ ಬಿಲ್​ ಬಂದ ಸುದ್ದಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಜೆಸ್ಕಾ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಅಜ್ಜಿ ವಿದ್ಯುತ್​ ಬಿಲ್ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

ತಗಡಿನ ಮನೆಗೆ 1 ಲಕ್ಷ ರೂ. ವಿದ್ಯುತ್ ಬಿಲ್: ವೃದ್ಧೆ ನಿವಾಸಕ್ಕೆ ದೌಡಾಯಿಸಿ ಸಮಸ್ಯೆ ನಿವಾರಿಸಿದ ಜೆಸ್ಕಾಂ ಅಧಿಕಾರಿ: ಅಜ್ಜಿ ಫುಲ್ ಖುಷ್
ವೃದ್ಧೆ ನಿವಾಸಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ
Follow us
ರಮೇಶ್ ಬಿ. ಜವಳಗೇರಾ
|

Updated on: Jun 22, 2023 | 12:54 PM

ಕೊಪ್ಪಳ: ಇಲ್ಲಿನ ಭಾಗ್ಯನಗರದ 90 ವರ್ಷದ ಗಿರಿಜಮ್ಮನ ತಗಡಿನ ಚಿಕ್ಕ ಮನೆಯ ವಿದ್ಯುತ್​ ಬಿಲ್(electricity bill)​ ಒಂದು ಲಕ್ಷ ರೂ. ಬಂದಿದ್ದು, ಈ ಬಗ್ಗೆ ಟಿವಿ9 ಕನ್ನಡ ವಿಸ್ತೃತವಾಗಿ ವರದಿ ಬಿತ್ತರಿಸಿದ ಬೆನ್ನಲ್ಲೇ ಇದೀಗ ವೃದ್ಧೆಯ ನಿವಾಸಕ್ಕೆ ಖುದ್ದು ಜೆಸ್ಕಾಂ ಅಧಿಕಾರಿಗಳು ಭೇಟಿ ದೌಡಾಯಿಸಿದ್ದಾರೆ. ಕೊಪ್ಪಳದ ಭಾಗ್ಯನಗರದಲ್ಲಿರುವ ಗಿರಿಜಮ್ಮನ ಮನೆಗೆ ಜೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ (gescom executive engineer) ರಾಜೇಶ ಭೇಟಿ ನೀಡಿದ್ದು, ಮನೆಯ ಮೀಟರ್​ ಪರೀಶಿಲನೆ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜೇಶ, 2021ರಿಂದ ಮೀಟರ್ ರೀಡಿಂಗ್ ತೊಂದರೆಯಿಂದ ಬಿಲ್ ಬಂದಿದೆ. ಅಜ್ಜಿ ಗಿರಿಜಮ್ಮ ವಿದ್ಯುತ್​​ ಬಿಲ್ ಪಾವತಿ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಸಿಬ್ಬಂದಿ ಹಾಗೂ ಬಿಲ್ ಕಲೆಕ್ಟರ್ ತಪ್ಪಿನಿಂದಾಗಿ ಹೀಗಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇಂತಹ ಯಾವುದೇ ಪ್ರಕರಣಗಳಿದ್ದರೂ ನಮ್ಮ ಗಮನಕ್ಕೆ ತನ್ನಿ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸಣ್ಣ ತಗಡಿನ ಶೆಡ್​, ಎರಡೇ ಎರಡು ಬಲ್ಬ್ ಇರುವ 90ರ ವೃದ್ಧೆ ಮನೆಗೆ ಲಕ್ಷಗಟ್ಟಲೇ ವಿದ್ಯುತ್ ಬಿಲ್: ಕಣ್ಣೀರಿಟ್ಟ ಅಜ್ಜಿ

ಗಿರಿಜಮ್ಮನ ಮನೆಗೆ ಭಾಗ್ಯಜ್ಯೋತಿ ಯೋಜನೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಪಯೋಗ ಮಾಡಿಲ್ಲ. ಈಗ ಬಂದಿರುವ ವಿದ್ಯುತ್​ ಬಿಲ್ ರಿವೈಸ್ ಮಾಡುತ್ತೇವೆ. ಅಜ್ಜಿ ಬಿಲ್​ ಕಟ್ಟುವಂತಿಲ್ಲ ಎಂದು ಹೇಳಿದರು. ಜೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ರಾಜೇಶ್​ ಹೀಗೆ ಹೇಳುತ್ತಿದ್ದಂತೆಯೇ ಅಜ್ಜಿ ಗಿರಿಜಮ್ಮ ಫುಲ್ ಖುಷ್ ಆದರು. ಅಲ್ಲದೇ ಬಿಲ್ ಮಾಫಿ ಮಾಡುತ್ತೇವೆ ಎಂದಿದ್ದಕ್ಕೆ ರಾಜೇಶ್ ಅವರಿಗೆ ಅಜ್ಜಿ ಧನ್ಯವಾದ ಹೇಳಿದರು.

ಇನ್ನು ಗಿರಿಜಮ್ಮ ಮನೆಯ ವಿದ್ಯುತ್​ ಬಿಲ್​ 1 ಲಕ್ಷ ರೂ. ಬಂದಿರುವ ಸುದ್ದಿಯನ್ನು ನಿಮ್ಮ ಟಿವಿ9 ಕನ್ನಡ, ಇಂಧನ ಸಚಿವ ಕೆಜೆ ಜಾರ್ಜ್​ ಗಮನಕ್ಕೆ ತಂದಿದ್ದು, ಮೀಟರ್​ ಸಮಸ್ಯೆಯಿಂದ ಈ ರೀತಿಯಾಗಿದೆ. ಅಜ್ಜಿ‌ ಅಷ್ಟೊಂದು ಕರೆಂಟ್​​ ಬಿಲ್​​ ಕಟ್ಟಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಕರಣದ ಹಿನ್ನೆಲೆ

ಕೊಪ್ಪಳದ ಭಾಗ್ಯನಗರದಲ್ಲಿ ಒಂದು ಚಿಕ್ಕ ಶೆಡ್​ನಲ್ಲಿ ವಾಸವಿರುವ 90 ವರ್ಷದ ಗಿರಿಜಮ್ಮ ಎನ್ನುವ ಅಜ್ಜಿ ಮನೆಗೆ ಜೆಸ್ಕಾಂ ಸಿಬ್ಬಂದಿ ಬರೋಬ್ಬರಿ 1,03,315 ರೂ. ವಿದ್ಯುತ್ ಬಿಲ್ ನೀಡಿದ್ದರು. ಭಾಗ್ಯಜ್ಯೋತಿ ಹೊಂದಿದ್ದ ಅಜ್ಜಿ ಮನೆಗೆ ಈ ಹಿಂದೆ ಪ್ರತಿ ತಿಂಗಳು 70ರಿಂದ 80 ರೂ. ಬಿಲ್​ ಬರುತ್ತಿತ್ತು. ಆದ್ರೆ, ಕಳೆದ ಆರು ತಿಂಗಳ ಹಿಂದೆ ಜೆಸ್ಕಾಂ ಸಿಬ್ಬಂದಿ ಹೊಸ ಮೀಟರ್ ಅವಳವಡಿಸಿದ್ದರು. ಅದಾದ ಬಳಿಕ ಇದೀಗ ಅಜ್ಜಿ ಮನೆಗೆ ಒಂದು ಲಕ್ಷ ಚಿಲ್ಲರೆ ಬಿಲ್​ ಬಂದಿದೆ.  ಒಂದೊತ್ತಿನ ಊಟಕ್ಕೂ ಪರದಾಡುವ ಅಜ್ಜಿ ಇಷ್ಟೊಂದು ಬಿಲ್​ ಎಲ್ಲಿಂದ ಕಟ್ಟಲಿ ಎಂದು ಕಣ್ಣೀರಿಟ್ಟಿತ್ತು. ಈ ಬಗ್ಗೆ ನಿಮ್ಮ ಟಿವಿ9 ಕನ್ನಡ ವಿಸ್ತೃತವಾಗಿ ವರದಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆದಿತ್ತು.

ಇನ್ನಷ್ಟು ಕೊಪ್ಪಳ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ