ಕೊಪ್ಪಳ: ಉಕ್ರೇನ್‌ನಲ್ಲಿ ನಿನ್ನೆ ಯುದ್ಧ ನಿಲ್ಲಿಸಿದ್ದು ಪ್ರಧಾನಿ ನರೇಂದ್ರ ಮೋದಿ. ರಷ್ಯಾ 6 ಗಂಟೆಗಳ ಕಾಲ ಯುದ್ಧ ನಿಲ್ಲಿಸೋದು ಸಾಮಾನ್ಯನಾ? ಆದರೆ ಇದನ್ನು ಯಾರೊಬ್ಬರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಯುದ್ಧ ನಡೆಯಬೇಕಾದರೆ ಸಾಕಷ್ಟು ತೊಂದರೆಗಳಾಗುತ್ತೆ. ಆ ಸಂದರ್ಭದಲ್ಲಿ ಯಾರೇ ಇದ್ದರೂ ಅನುಭವಿಸಬೇಕು. ಅದನ್ನು ನಮ್ಮ ದೇಶದ ಮೇಲೆ ಹಾಕೋದು ಸರಿಯಲ್ಲ ಎಂದು ಕೊಪ್ಪಳದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಭಾನುವಾರ ಹೇಳಿಕೆ ನೀಡಿದ್ದಾರೆ.
ಬಾಲ್ಯ ವಿವಾಹದಿಂದ ಮಕ್ಕಳ ಶೋಷಣೆಯಾಗುತ್ತದೆ. ಹೀಗಾಗಿ ಬಾಲ್ಯ ವಿವಾಹ ತಡೆಗೆ 540 ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ. ಇದೇ ವೇಳೆ, ಮಡಹಳ್ಳಿ ಬಳಿ ಗುಮ್ಮಕಲ್ಲು ಗುಡ್ಡದಲ್ಲಿ ಬಂಡೆ ಕುಸಿತ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಿಲ್ಲ. ಚಾಮರಾಜನಗರದ ಎಲ್ಲ ಕ್ವಾರಿಗಳನ್ನ ಸರ್ವೆ ಮಾಡಲಾಗುವುದು. 9 ಅಧಿಕಾರಿಗಳ ತಂಡದಿಂದ ಮತ್ತೊಮ್ಮೆ ಸರ್ವೆ ನಡೆಯಲಿದೆ. ನಿಯಮ ಪಾಲನೆ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳದಲ್ಲಿ ಗಣಿ ಹಾಗೂ ಭೂವಿಜ್ಞಾನ ಸಚಿವ ಹಾಲಪ್ಪ ಹೇಳಿದ್ದಾರೆ.
ಕೊಪ್ಪಳದಲ್ಲಿ ಬಾಲ್ಯ ವಿವಾಹ ಕುರಿತ ಕಾರ್ಯಕ್ರಮ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್ ಬಜೆಟ್ ವಿಚಾರ ಪ್ರಸ್ತಾಪಿದ್ದಾರೆ. ಈ ಕಾರಣದಿಂದ ಸಚಿವ ಹಾಲಪ್ಪ ಆಚಾರ್ ವಿರುದ್ಧ ಹಿಟ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಇಲ್ಲಿ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ನವಲೆ ಸಮಾನಾಂತರ ಜಲಾಶಯ ಕೆಲಸ ಬೇಗ ಆಗಲಿ ಎಂದು ಹಿಟ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ: ಮರಳು ಲಾರಿ ಮಾಲೀಕರಿಂದ ಕಮಿಷನ್ ಆರೋಪ: ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಮುಂದಾದ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ
ಇದನ್ನೂ ಓದಿ: ಎಮ್ ಈ ಎಸ್ ವಿರುದ್ಧ ಮುಂದುವರಿದ ಹೋರಾಟ, ಸಚಿವ ಹಾಲಪ್ಪ ಆಚಾರ್ ಕಾರು ತಡೆದು ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿತು ಕರವೇ