ಎಮ್ ಈ ಎಸ್ ವಿರುದ್ಧ ಮುಂದುವರಿದ ಹೋರಾಟ, ಸಚಿವ ಹಾಲಪ್ಪ ಆಚಾರ್ ಕಾರು ತಡೆದು ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿತು ಕರವೇ
ಆ ಸದಸ್ಯನಿಗೆ ಶೆಟ್ಟಿಯವರು ಗದರಿ ಸುಮ್ಮನಾಗುವಂತೆ ಹೇಳಿದ್ದರೆ ಸಾಕಿತ್ತು. ಸದಸ್ಯ ಸುಮ್ಮನಾಗಿ ಬಿಡುತ್ತಿದ್ದರು. ಆದರೆ ಶೆಟ್ಟರು ಹಾಗೆ ಮಾಡದೆ ಕೆನ್ನೆಗೆ ಬಾರಿಸುತ್ತಾರೆ.
ಬೆಳಗಾವಿಯಲ್ಲಿ ಪುಂಡಾಟ ನಡೆಸಿ ಸರ್ಕಾರಕ್ಕೆ ಸವಾಲು ಹಾಕುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಮ್ ಈ ಎಸ್) ವಿರುದ್ಧ ಪ್ರತಿಭಟನೆ ಜೋರಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಎಮ್ ಈ ಎಸ್ ಅನ್ನು ನಿಷೇಧಿಸದ ಹೊರತು ನಾವು ವಿಶ್ರಮಿಸುವುದಿಲ್ಲ ಎಂದು ಪಣ ತೊಟ್ಟಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಕ್ತ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕನ್ನಡ ಜನತೆಗೆ ಆಶ್ವಾಸನೆ ನೀಡಿರುವುರಾದರೂ ಈ ಸಂಘಟನೆಯನ್ನು ಬ್ಯಾನ್ ಮಾಡುವ ಕುರಿತು ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ. ಎಮ್ ಈ ಎಸ್ ವಿರುದ್ಧ ಪ್ರತಿಭಟನೆಯ ಅಂಗವಾಗಿ ಸೋಮವಾರ ಬೆಳಗಾವಿ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳೆ ಮತ್ತು ಮಕಳ ಕಲ್ಯಾಣ ಖಾತೆ ಸಚಿವ ಹಾಲಪ್ಪ ಆಚಾರ್ ಅವರ ಕಾರನ್ನು ತಡೆದು ಎಮ್ ಈ ಎಸ್ ಅನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಕನ್ನಡ ನಾಡು ಮತ್ತು ಕನ್ನಡಿಗರ ಹಿತರಕ್ಷಣೆಗ ಸರ್ಕಾರ ಬದ್ಧವಾಗಿದೆ ಅಂತ ಹೇಳಿದ ಸಚಿವರು, ಕನ್ನಡ ಪರ ಸಂಘಟನೆಗಳು ಸದನದ ಹೊರಗಡೆ ಹೋರಾಟ ನಡೆಸುತ್ತಿದ್ದರೆ, ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ವ್ಯವಸ್ಥೆಯನ್ನು ತಾವು ಮಾಡುತ್ತಿರುವುದಾಗಿ ಹೇಳಿದರು.
ಕನ್ನಡ ಸಂಘಟನೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು ಸಚಿವ ಹಾಲಪ್ಪನವರೊಂದಿಗೆ ಮಾತಾಡುವಾಗ ಆಚಾತುರ್ಯವೊಂದು ನಡೆಯಿತು. ಅದು ಮಾಧ್ಯಮದ ಕೆಮೆರಾಗಳಲ್ಲಿ ಸೆರೆಯಾಗಿಲ್ಲ ನಿಜ, ಆದರೆ ನಡೆದಿದ್ದದೇನು ಅನ್ನುವುದನ್ನು ಸುಲಭವಾಗಿ ಊಹಿಸಬಹುದು. ಸಚಿವರು ಮಾತಾಡುತ್ತಿರುವಾಗ, ಕ ರ ವೇಯ ಸದಸ್ಯರೊಬ್ಬರು ಘೋಷಣೆ ಕೂಗುವುದನ್ನು ನಿಲ್ಲಿಸಲಿಲ್ಲ.
ಆ ಸದಸ್ಯನಿಗೆ ಶೆಟ್ಟಿಯವರು ಗದರಿ ಸುಮ್ಮನಾಗುವಂತೆ ಹೇಳಿದ್ದರೆ ಸಾಕಿತ್ತು. ಸದಸ್ಯ ಸುಮ್ಮನಾಗಿ ಬಿಡುತ್ತಿದ್ದರು. ಆದರೆ ಶೆಟ್ಟರು ಹಾಗೆ ಮಾಡದೆ ಕೆನ್ನೆಗೆ ಬಾರಿಸುತ್ತಾರೆ.
ವೇದಿಕೆ ಆಧ್ಯಕ್ಷ ನಡೆದುಕೊಳ್ಳಬೇಕಾದ ರೀತಿ ಇದಲ್ಲ. ಅದೂ ಒಬ್ಬ ಸಚಿವರೆದುರು.
ಕೊನೆಗೆ ಸಚಿವರೇ, ಕಪಾಳಮೋಕ್ಷ ಮಾಡಿಸಿಕೊಂಡ ಸದಸ್ಯನ ಹೆಗಲ ಮೇಲೆ ಆತ್ಮೀಯವಾಗಿ ಕೈಹಾಕಿ ಸಂತೈಸುತ್ತಾರೆ.
ನೀವೊಮ್ಮೆ ಗಮನವಿಟ್ಟು ವಿಡಿಯೋ ನೋಡಿ. ಶೆಟ್ಟರ ವರ್ತನೆ ಬಗ್ಗೆ ನಿಮ್ಮಲ್ಲಿ ಹೇವರಿಕೆ ಹುಟ್ಟಿದರೆ, ಸಚಿವರ ಮಾಡಿದ್ದು ನೋಡಿ ಮನಸ್ಸು ಮುದಗೊಳ್ಳುತ್ತದೆ.
ಇದನ್ನೂ ಓದಿ: ಚಿತ್ರದುರ್ಗ: ಅರೆಬೆತ್ತಲೆ ಸ್ಥಿತಿಯಲ್ಲೇ ರೌಡಿಶೀಟರ್ನನ್ನು ಪೊಲೀಸ್ ಠಾಣೆಗೆ ಕರೆತಂದ ಆರೋಪ; ವಿಡಿಯೋ ವೈರಲ್