ಬಾಲಂಗೋಚಿಗಳಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಕಷ್ಟ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ನನಗೆ ಅವಕಾಶ ಕೊಟ್ಟರೆ ಮಾಡಿ ತೋರಿಸುತ್ತೇನೆ. ಒಂದು ವರ್ಷದಲ್ಲಿ ಹೊಸ ಯುಗ ಪ್ರಾರಂಭ ಮಾಡಿ ತೋರಿಸುತ್ತೇನೆ. ನನ್ನ ಬೆಂಬಲಕ್ಕೆ ಎಲ್ಲಾ ಜಿಲ್ಲೆಯ ಶಾಸಕರು ಇದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿ: ಅಧಿಕಾರ ಶಾಶ್ವತ ಅಲ್ಲ ಎಂಬ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagowda patil yatnal), ಸಿಎಂ ಬೊಮ್ಮಾಯಿ ಸಹಜವಾಗಿ ಈ ಮಾತನ್ನು ಹೇಳಿದ್ದಾರೆ. ಈಗ ನಡೆಯುತ್ತಿರುವ ಬೆಳವಣಿಗೆಗಳಿಗೂ ಅದಕ್ಕೂ ಸಂಬಂಧ ಇಲ್ಲ. ನಾವು ಹೇಳಿದ ಭವಿಷ್ಯ ಸುಳ್ಳಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ಸಿಎಂ ಬಿಟ್ಟು ಹೊಸ ವ್ಯವಸ್ಥೆ ಬರುತ್ತದೆ. ಕೆಲಸಕ್ಕೆ ಬಾರದವರನ್ನು ಸಿಎಂ ಮಾಡಿದರೆ ಮುಗಿದೋಯ್ತು. ಪ್ರಾಮಾಣಿಕ ನಿರ್ಣಯ ತೆಗೆದುಕೊಳ್ಳುವವರಾಗಬೇಕು. ಬಾಲಂಗೋಚಿಗಳಿಗೆ ಸಿಎಂ ಸ್ಥಾನ ಕೊಟ್ಟರೆ ಕಷ್ಟ ಎಂದು ಸುವರ್ಣಸೌಧದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದಾರೆ.
ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿಯಾಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬದಲಾವಣೆ ಅನ್ನೋದು ಸಹಜ. ಈ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ನನಗೆ ಅವಕಾಶ ಕೊಟ್ಟರೆ ಮಾಡಿ ತೋರಿಸುತ್ತೇನೆ. ಒಂದು ವರ್ಷದಲ್ಲಿ ಹೊಸ ಯುಗ ಪ್ರಾರಂಭ ಮಾಡಿ ತೋರಿಸುತ್ತೇನೆ. ನನ್ನ ಬೆಂಬಲಕ್ಕೆ ಎಲ್ಲಾ ಜಿಲ್ಲೆಯ ಶಾಸಕರು ಇದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪ್ರತಿಭಟನೆ ಬಿಸಿ.. ವೀರಶೈವ ಮಹಾಸಭಾದಿಂದ ಧರಣಿ, ಆಕ್ರೋಶ
ಎಮ್ಇಎಸ್ ಪುಂಡರ ಕೃತ್ಯ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ; ನೇರ ದೃಶ್ಯ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ