ಚಿತ್ರದುರ್ಗ: ಅರೆಬೆತ್ತಲೆ ಸ್ಥಿತಿಯಲ್ಲೇ ರೌಡಿಶೀಟರ್​ನನ್ನು ಪೊಲೀಸ್​ ಠಾಣೆಗೆ ಕರೆತಂದ ಆರೋಪ; ವಿಡಿಯೋ ವೈರಲ್

ಚಿತ್ರದುರ್ಗ: ಅರೆಬೆತ್ತಲೆ ಸ್ಥಿತಿಯಲ್ಲೇ ರೌಡಿಶೀಟರ್​ನನ್ನು ಪೊಲೀಸ್​ ಠಾಣೆಗೆ ಕರೆತಂದ ಆರೋಪ; ವಿಡಿಯೋ ವೈರಲ್
ಹೆಡ್ ಕಾನ್ಸ್​ಟೇಬಲ್​ ಚಂದ್ರಾನಾಯ್ಕ್ ಮತ್ತು ವೇಣುಗೋಪಾಲ್​

ಠಾಣೆಗೆ ಬರುವಂತೆ ಹೆಡ್ ಕಾನ್ಸ್​ಟೇಬಲ್ ಚಂದ್ರಾನಾಯ್ಕ್ ಸೂಚಿಸಿದ್ದಾರೆ. ಈ ವೇಳೆ ಅರೆಬೆತ್ತಲೆ ಸ್ಥಿತಿಯಲ್ಲೇ ಕೈಲಿ ಜಗ್ ಹಿಡಿದುಕೊಂಡು ಪೊಲೀಸರ ಜತೆ ಠಾಣೆಗೆ ಆಗಮಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

TV9kannada Web Team

| Edited By: preethi shettigar

Dec 20, 2021 | 11:39 AM

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ರೌಡಿಶೀಟರ್ (Rowdy Sheeter) ವೇಣುಗೋಪಾಲ್ ಎಂಬ ವ್ಯಕ್ತಿಯನ್ನು ಅರೆಬೆತ್ತಲೆ ಸ್ಥಿತಿಯಲ್ಲೇ ಪೊಲೀಸರು ಠಾಣೆಗೆ ಕರೆತಂದ ಘಟನೆ ನಡೆದಿದೆ. ಪಕ್ಕದ ಮನೆಯವರಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣುಗೋಪಾಲ್ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿತ್ತು. ಹೀಗಾಗಿ ಹೆಡ್ ಕಾನ್ಸ್​ಟೇಬಲ್​ ಚಂದ್ರಾನಾಯ್ಕ್ ಆರೋಪಿ ವೇಣುಗೋಪಾಲ್ ಬಂಧನಕ್ಕೆ ತೆರಳಿದ್ದಾರೆ. ಈ ವೇಳೆ ಅರೆಬೆತ್ತಲೆ ಸ್ಥಿತಿಯಲ್ಲೇ ವೇಣುಗೋಪಾಲ್​ನನ್ನು ಠಾಣೆಗೆ ಕರೆತಂದಿದ್ದಾರೆ.

ಪೊಲೀಸರು ಆರೋಪಿಯ ಬಂಧನಕ್ಕೆ ತೆರಳಿದ್ದ ವೇಳೆ ಸ್ನಾನಕ್ಕೆ ಹೋಗಿದ್ದ ವೇಣುಗೋಪಾಲ್, ಅದೇ ಅರೆಬೆತ್ತಲೆ ಸ್ಥಿತಿಯಲ್ಲಿ ಹೊರ ಬಂದಿದ್ದಾರೆ. ಠಾಣೆಗೆ ಬರುವಂತೆ ಹೆಡ್ ಕಾನ್ಸ್​ಟೇಬಲ್ ಚಂದ್ರಾನಾಯ್ಕ್ ಸೂಚಿಸಿದ್ದಾರೆ. ಈ ವೇಳೆ ಅದೇ ಅರೆಬೆತ್ತಲೆ ಸ್ಥಿತಿಯಲ್ಲೇ ಕೈಲಿ ಜಗ್ ಹಿಡಿದುಕೊಂಡು ಪೊಲೀಸರ ಜತೆ ಠಾಣೆಗೆ ಆಗಮಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರ್​ಎಸ್​ಎಸ್​ ಕಾರ್ಯಕರ್ತ ವೇಣುಗೋಪಾಲ್ ಮೇಲೆ ಪೊಲೀಸರು ಅನಾಗರಿಕ ವರ್ತನೆ ತೋರಿದ್ದಾರೆಂದು ಆರೋಪಿಸಿ ಕೆಲವರು ಕಿಡಿ ಕಾರಿದ್ದಾರೆ. ಇನ್ನೂ ಕೆಲವರು ರೌಡಿಶೀಟರ್ ಆಗಿರುವ ವೇಣುಗೋಪಾಲ್ ದುರುದ್ದೇಶದಿಂದ ಅರೆಬೆತ್ತಲೆಯಾಗಿ ಬಂದು ಹುಚ್ಚಾಟ ಮೆರೆದಿದ್ದಾನೆ. ಆ ಮೂಲಕ ಕರ್ತವ್ಯ ನಿರತ ಪೊಲೀಸರ ಮನೋಸ್ಥೈರ್ಯ ಕುಗ್ಗಿಸಲು ಯತ್ನಿಸಿದ್ದಾನೆಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.

ಕಳೆದ ಶನಿವಾರ ಈ ಘಟನೆ ನಡೆದಿದ್ದು, ಸದ್ಯ ಜಾಮೀನು ಪಡೆದು ಆರೋಪಿ ವೇಣುಗೋಪಾಲ ಬಿಡುಗಡೆಗೊಂಡಿದ್ದಾರೆ. ಪಿಎಸ್​ಐ ಮಹೇಶ ಹೊಸಪೇಟೆ, ಹೆಡ್ ಕಾನ್ಸ್​ಟೇಬಲ್ ಚಂದ್ರಾನಾಯ್ಕ್ ದುರುದ್ದೇಶದಿಂದ ನನ್ನನ್ನು ಅರೆಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಸ್ನಾನ ಮಾಡಿ ಬರುತ್ತೇನೆಂದರೂ ಬಿಡದೆ ಪಿಎಸ್​ಐ ಸೂಚನೆ ಮೇರೆಗೆ ಪೊಲೀಸ್ ಕಾನ್ಸ್​ಟೇಬಲ್ ನನ್ನನ್ನು ಅರೆಬೆತ್ತಲೆಯಾಗಿಯೇ ಠಾಣೆಗೆ ಕರೆದೊಯ್ದಿದ್ದು, ಅನಾಗರಿಕ ವರ್ತನೆ ತೋರಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಚಲಿಸುವ ರೈಲಿನಿಂದ ಪ್ಲಾಟ್​ಫಾರಂನಲ್ಲಿ ಇಳಿಯುವ ಯತ್ನ, ಬಿಬಿಎಂಪಿ ಎಂಜಿನಿಯರ್​ ಸ್ಥಳದಲ್ಲೇ ಸಾವು

ಶಾಲೆ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ಕುಡಿದ ಮತ್ತಿನಲ್ಲಿ ಸ್ನೇಹಿತರೇ ಕೊಲೆ ಮಾಡಿರುವ ಶಂಕೆ

Follow us on

Related Stories

Most Read Stories

Click on your DTH Provider to Add TV9 Kannada