ಶಾಲೆ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ಕುಡಿದ ಮತ್ತಿನಲ್ಲಿ ಸ್ನೇಹಿತರೇ ಕೊಲೆ ಮಾಡಿರುವ ಶಂಕೆ

ಶಾಲೆ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ಕುಡಿದ ಮತ್ತಿನಲ್ಲಿ ಸ್ನೇಹಿತರೇ ಕೊಲೆ ಮಾಡಿರುವ ಶಂಕೆ
ಶಾಲೆ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ಕುಡಿದ ಮತ್ತಿನಲ್ಲಿ ಸ್ನೇಹಿತರೇ ಕೊಲೆ ಮಾಡಿರುವ ಶಂಕೆ

ಮೊನ್ನೆ ರಾತ್ರಿ ಮನೆಗೆ ಹೋಗದ ಇಲಿಯಾಸ್, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿದ್ದಾನೆ. ರೆಹಮತ್ ನಗರದ ಗ್ರೇಸ್ ಜಯಂತಿ ಶಾಲೆಯ ಕಟ್ಟಡದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಸಿಕ್ಕಿದ್ದು, ಕೊಲೆ ಶಂಕೆ ಎದ್ದಿದೆ.

TV9kannada Web Team

| Edited By: Ayesha Banu

Dec 13, 2021 | 8:33 AM

ಕೋಲಾರ: ಆ ಯುವಕ ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡ್ಕೊಂಡು ಚೆನ್ನಾಗಿದ್ದ. ಯಾರನ್ನೂ ಕೇರ್ ಮಾಡದೆ ಖುಷಿಯಾಗಿದ್ದ. ಆದ್ರೆ, ಕಳೆದ ಬಾರಿ ಲಾಕ್ಡೌನ್ ಆಗಿದ್ದೇ ತಡ ಸ್ವಗ್ರಾಮಕ್ಕೆ ವಾಪಸ್ ಆಗಿದ್ದ. ಅಲ್ಲಿ ಪೋಕರಿಗಳ ಜತೆ ಸೇರ್ಕೊಂಡು ಕಾಲ ಕಳೀತಿದ್ದ. ಆದ್ರೀಗ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದು, ಊರಿನ ಜನ ನಡುಗಿ ಹೋಗಿದ್ದಾರೆ.

ನೇಣುಬಿಗಿದ ಸ್ಥಿತಿಯಲ್ಲಿ ಯುವಕ ಪತ್ತೆ.. ಕೊಲೆ ಶಂಕೆ..! ಕೋಲಾರ ಜಿಲ್ಲೆಯ ರೆಹಮತ್ ನಗರದ ನಿವಾಸಿ ಶೇಕ್ ಇಲಿಯಾಸ್ ಕೂಲಿ ಕೆಲಸ ಮಾಡ್ಕೊಂಡಿದ್ದ. ಯಾರ ತಂಟೆಗೂ ಹೋಗುತ್ತಿರಲಿಲ್ಲ. ಆದ್ರೆ, ಈತನಿಗ ಕುಡಿತದ ಚಟ ಇತ್ತು. ಸ್ನೇಹಿತರ ಜೊತೆ ಸೇರ್ಕೊಂಡು ಫುಲ್ ಮಜಾ ಮಾಡ್ತಿದ್ದ. ಮನೆಯಲ್ಲಿ ಅಡುಗೆ ಮಾಡೋಕೆ ತರಕಾರಿ ಇದ್ಯಾ ಅಂತ್ಲೂ ನೋಡ್ತಿರಲಿಲ್ಲ. ಬದ್ಲಿಗೆ ದುಡಿದ ಹಣದಲ್ಲಿ ಫುಲ್ ಟೈಟ್ ಆಗಿ ಮನೆಗೆ ಹೋಗುತ್ತಿದ್ದ. ಆದ್ರೆ, ಮೊನ್ನೆ ರಾತ್ರಿ ಮನೆಗೆ ಹೋಗದ ಇಲಿಯಾಸ್, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿದ್ದಾನೆ. ರೆಹಮತ್ ನಗರದ ಗ್ರೇಸ್ ಜಯಂತಿ ಶಾಲೆಯ ಕಟ್ಟಡದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಸಿಕ್ಕಿದ್ದು, ಕೊಲೆ ಶಂಕೆ ಎದ್ದಿದೆ. ಕುಟುಂಬಸ್ಥರು ಕೂಡ ಇದು ಆತ್ಮಹತ್ಯೆ ಅಲ್ಲ, ಕೊಲೆ ಅಂತಾ ಆರೋಪ ಮಾಡ್ತಿದ್ದಾರೆ.

ಇನ್ನು, ಮೃತ ಶೇಕ್ ಇಲಿಯಾಸ್ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಆದ್ರೆ, ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಕೋಲಾರದ ರೆಹಮತ್ ನಗರಕ್ಕೆ ಬಂದಿದ್ದ ಈತ, ಸ್ಥಳೀಯ ಯುವಕರ ಗುಂಪು ಸೇರಿದ್ದ. ಡ್ರೈನೇಜ್ ಕ್ಲೀನ್ ಮಾಡ್ಕೊಂಡು, ಅದ್ರಿಂದ ಬರೋ ಹಣದಲ್ಲಿ ಕುಡಿದು ಮಜಾ ಮಾಡ್ತಿದ್ದ. ಬೆಂಗಳೂರಿನಲ್ಲಿರೋ ತಾಯಿ ಮನೆಗೆ ವಾಪಸ್ ಬಾ ಅಂತಾ ಕರೆದ್ರೂ ಇಲಿಯಾಸ್ ಹೋಗಿರಲಿಲ್ಲ. ಆದ್ರೀಗ, ಅನ್ಯಾಯವಾಗಿ ಸಾವಿನ ಮನೆ ಸೇರಿದ್ದು, ಯಾರೋ ಪಾಪಿಗಳು ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಎದ್ದಿದೆ.

ಒಟ್ಟಾರೆ, ಬಾಳಿ ಬದುಕಬೇಕಿದ್ದ ವಯಸ್ಸಲ್ಲಿ ಜೀವನವನ್ನು ಜಾಲಿಯಾಗಿ ತೆಗೆದುಕೊಂಡು ಕುಡಿತದ ಚಟಕ್ಕೆ ಬಿದ್ದಿದ್ದ ಯುವಕ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ. ಕುಡಿತದ ಅಮಲಿನಲ್ಲಿ ಸ್ನೇಹಿತರಿಂದಲೇ ಈತ ಕೊಲೆಯಾದನಾ ಅನ್ನೋ ಅನುಮಾನ ಹುಟ್ಟಿಕೊಂಡಿದ್ದು, ಗಲ್ಪೇಟೆ ಠಾಣಾ ಪೊಲೀಸರು ತನಿಖೆ ಮಾಡ್ತಿದ್ದಾರೆ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ ಭಾವಚಿತ್ರ ಹಿಡಿದುಕೊಂಡು ಶಬರಿಮಲೆ ಯಾತ್ರೆ ಮಾಡಿದ ಅಭಿಮಾನಿಗಳು

Follow us on

Related Stories

Most Read Stories

Click on your DTH Provider to Add TV9 Kannada