ದಕ್ಷಿಣದ ಕಾಶಿ ನಂಜನಗೂಡಿನಲ್ಲಿ ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ, ಮಹಿಷ ಸಂಹಾರ ಉತ್ಸವ ನೆರವೇರಿಕೆ
ದೇವರನ್ನು ಹೊತ್ತ ಅರ್ಚಕರು ಮತ್ತು ಭಕ್ತಾದಿಗಳು ಓಡುತ್ತಾ ಬಂದು ಬ್ಯಾನರ್ ನಲ್ಲಿ ಚಿತ್ರಿಸಿರುವ ಮಹಿಷಾಸುರನನ್ನು ಕೆಳಗೆ ಬೀಳಿಸುತ್ತಾರೆ. ಅಂದರೆ ಸಾಂಕೇತಿಕ ಅಸುರನ ಸಂಹಾರ ಮಾಡಲಾಗುತ್ತದೆ.
ಮೈಸೂರು ಜಿಲ್ಲೆಯ ನಂಜನಗೂಡು ದಕ್ಷಿಣದ ಕಾಶಿ ಅಂತ ಕರೆಸಿಕೊಳ್ಳುತ್ತದೆ. ಕಪಿಲೆಯ ತಟದಲ್ಲಿರುವ ಶ್ರೀಕಂಠೇಶ್ವರ ದೇವರ ಸನ್ನಿಧಿಯಲ್ಲಿ ಹಲವಾರು ಧಾರ್ಮಿಕ ಉತ್ಸವಗಳು ವರ್ಷವಿಡೀ ನಡೆಯುತ್ತಿರುತ್ತವೆ. ರವಿವಾರದಂದು ಹುಣ್ಣಿಮೆಯ ಪ್ರಯುಕ್ತ ನಂಜುಂಡೇಶ್ವರನಿಗೆ ವಿಶೇಷ ಪೂಜೆಯನ್ನು ನೆವೇರಿಸಲಾಯಿತು. ಮಹಿಷ ಸಂಹಾರದ ಅಂಗವಾಗಿ ನಡೆದ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು ಮತ್ತು ಸದರಿ ಉತ್ಸವದ ವಿಡಿಯೋ ನಮಗೆ ಲಭ್ಯವಾಗಿದೆ. ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವ ಹಾಗೆ ಅರ್ಚಕರ ಗುಂಪೊಂದು ಪಲ್ಲಕ್ಕಿಯ ಹಾಗೆ ಮಾಡಿರುವ ಒಂದು ಆಸನದಲ್ಲಿ ಶ್ರೀಕಂಠೇಶ್ವರನನ್ನು ಹೊತ್ತು ಓಡೋಡಿ ಬರುತ್ತಾರೆ. ತಾಳೆ ತಮ್ಮಟೆಗಳ ಜೋರು ಸದ್ದಿನೊಂದಿಗೆ ಶ್ರೀಕಂಠೇಶ್ವರ ದೇವಸ್ಥಾನದ ಆವರಣವನ್ನು ಪ್ರವೇಶಿಸುತ್ತಾನೆ.
ನಂಜುಂಡೇಶ್ವರ ಬರುವ ದಿಕ್ಕಿಗೆ ವಿರುದ್ಧವಾಗಿ ಮಹಿಷಾಸುರನ ಒಂದು ದೊಡ್ಡು ಬ್ಯಾನರ್ ಕಟ್ಟಲಾಗಿದೆ. ದೇವರನ್ನು ಹೊತ್ತ ಅರ್ಚಕರು ಮತ್ತು ಭಕ್ತಾದಿಗಳು ಓಡುತ್ತಾ ಬಂದು ಬ್ಯಾನರ್ ನಲ್ಲಿ ಚಿತ್ರಿಸಿರುವ ಮಹಿಷಾಸುರನನ್ನು ಕೆಳಗೆ ಬೀಳಿಸುತ್ತಾರೆ. ಅಂದರೆ ಸಾಂಕೇತಿಕ ಅಸುರನ ಸಂಹಾರ ಮಾಡಲಾಗುತ್ತದೆ. ಆವರಣದಲ್ಲಿರುವ ಭಕ್ತರು ಹೋ ಎಂದು ತೆಗೆಯುವ ಉದ್ಗಾರ ಮುಗಿಲು ಮುಟ್ಟುತ್ತದೆ.
ನಿಮಗೆ ನೆನಪಿರಬಹುದು. ಡಿಸೆಂಬರ್ 3 ರಂದು ಕಾರ್ತೀಕ ಮಾಸದ ಕಡೆಯ ಸೋಮವಾರದ ಅಂಗವಾಗಿ ಸಹ ಇಲ್ಲಿ ಒಂದು ಉತ್ಸವ ನಡೆಸಲಾಯಿತು. ಅಂದು ಶ್ರೀಕಂಠನಿಗೆ ಕಪಿಲಾ ತೀರ್ಥದ ಮಜ್ಜನ ಸಲ್ಲಿಸಿ ಬಿಲ್ವಪತ್ರೆ, ಜೇನುತುಪ್ಪ, ಹಾಲು, ಮೊಸರು, ಎಳೆನೀರು ಮತ್ತು ಶಾಲಾನ್ಯಗಳಿಂದ ಅಭಿಷೇಕ ಸಲ್ಲಿಸಿದ ನಂತರ ಮಹಾ ಮಂಗಳಾರತಿ ಮಾಡಲಾಗಿತ್ತು. ಆ ಸಂದರ್ಭದಲ್ಲೂ ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು-ವರರ ಮಧ್ಯೆ ಬಂದು ಪೋಸ್ ಕೊಟ್ಟ ನಾಯಿ; ವಿಡಿಯೋ ವೈರಲ್