ಕೊಪ್ಪಳ: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್(Hijab) ಮತ್ತು ಕೇಸರಿ ಶಾಲುಗಳ(Kesari Shawl) ಸಮರ ಜೋರಾಗಿದೆ. ಹಿಜಾಬ್ ಧರಿಸಿದ್ರೆ, ಕೇಸರಿ ಶಾಲು ಧರಿಸಿ ಬರ್ತೀವಿ ಅಂತಾ ವಿದ್ಯಾರ್ಥಿಗಳು ಪೈಪೋಟಿಗೆ ಬಿದ್ದಿದ್ದಾರೆ. ಸದ್ಯ ಈ ಗೊಂದಲದ ನಡುವೆ ಮುಸ್ಲಿಂ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾದರಿಯಾಗಿದೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ತಳಬಾಳ ಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿ ಅಂತ್ಯಕ್ರಿಯೆ ವೇಳೆ ಹಿಂದೂ ವಿಧಿವಿಧಾನಕ್ಕೂ ಅವಕಾಶ ನೀಡಲಾಗಿದೆ. ಪೂಜೆ ಸಲ್ಲಿಸಿ, ಆರತಿ ಮಾಡಿ ಹುಸೇನ್ ಸಾಬ್ ನೂರಭಾಷಾ ಎಂಬುವವರ ಅಂತ್ಯಕ್ರಿಯೆ ಮಾಡಲಾಗಿದೆ. ರಾತ್ರಿಯಿಡೀ ಭಜನೆ ಮಾಡಿ, ಗ್ರಾಮಸ್ಥರು ಭಾವೈಕ್ಯತೆ ಮೆರೆದಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಗಲಾಟೆ ಅನೇಕ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ರೆ ಈ ಹಿಜಾಬ್ ಗಲಾಟೆ ನಡುವೆಯೂ ಮುಸ್ಲಿಂ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾದರಿಯಾಗಿದೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ತಳಬಾಳ ಗ್ರಾಮದಲ್ಲಿ ನಾಟಿ ವೈದ್ಯರಾಗಿದ್ದ ಹುಸೇನ್ ಸಾಬ್ ನೂರಭಾಷಾ ಎಂಬುವವರು ಫೆಬ್ರವರಿ 6 ರಂದು ಮೃತಪಟ್ಟಿದ್ದರು. ಈ ವೇಳೆ ಗ್ರಾಮಸ್ಥರು ಅತ್ಯಸಂಸ್ಕಾರದಲ್ಲಿ ಭಾಗಿಯಾಗಿ ಭಾವೈಕ್ಯತೆ ಮೆರೆದಿದ್ದಾರೆ. ಮುಸ್ಲಿಂ ವ್ಯಕ್ತಿ ಅಂತ್ಯ ಸಂಸ್ಕಾರದ ವೇಳೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿ ಹಿಂದೂ ಧರ್ಮದ ರೀತಿಯಲ್ಲೂ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಅಲ್ಲದೆ ರಾತ್ರಿ ಇಡೀ ಭಜನೆ ಮಾಡಿ, ಭಾವೈಕ್ಯತೆ ಸಾರಿದ್ದಾರೆ. ಮುಸ್ಲಿಂ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಹಿಂದೂ ಧಾರ್ಮಿಕ ಆಚರಣೆಗೂ ಅವಕಾಶ ನೀಡಲಾಗಿದ್ದು ವ್ಯಕ್ತಿ ಸತ್ತ ಮೇಲೂ ಭಾವೈಕ್ಯತೆಗೆ ಮಾದರಿಯಾಗಿದ್ದಾರೆ. ಮನುಷ್ಯನಲ್ಲಿ ಮಾನವೀಯತೆ, ಪ್ರೀತಿ, ವಿಶ್ವಾಸ ಇದ್ದರೆ ಜಾತಿ, ಧರ್ಮ ಅಡ್ಡಿಯಾಗಲ್ಲ ಎಂಬುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.
ಇದನ್ನೂ ಓದಿ: ಹಿಜಾಬ್ ಧರಿಸಿ ಅಧಿವೇಶನಕ್ಕೆ ಬರುವ ಮೊದಲು ದಮ್ ಇದ್ದರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ: ಸಚಿವ ಈಶ್ವರಪ್ಪ ಸವಾಲ್