ವಿದ್ಯಾರ್ಥಿಗಳಲ್ಲಿ ಹಿಜಾಬ್ ಪರ ಮತ್ತು ವಿರೋಧ ಗುಂಪುಗಳು ಹುಟ್ಟಿಕೊಂಡು ಕಾಲೇಜುಗಳ ವಾತಾವರಣ ಕೆಡಲಾರಂಭಿಸಿದೆ

ವಿದ್ಯಾರ್ಥಿಗಳಲ್ಲಿ ಹಿಜಾಬ್ ಪರ ಮತ್ತು ವಿರೋಧ ಗುಂಪುಗಳು ಹುಟ್ಟಿಕೊಂಡು ಕಾಲೇಜುಗಳ ವಾತಾವರಣ ಕೆಡಲಾರಂಭಿಸಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Feb 07, 2022 | 10:34 PM

ಪ್ರಾಯಶಃ ಕಾಲೇಜಿನ ಮ್ಯಾನೇಜ್ಮೆಂಟ್ ನವರು ಇದನ್ನು ಮೊದಲೇ ಮನಗಂಡಿದ್ದರು ಅಂತ ಕಾಣುತ್ತೆ. ಅವರು ಪೊಲೀಸರನ್ನು ಕಾಲೇಜಿಗೆ ಕರೆಸಿಕೊಂಡಿದ್ದಾರೆ. ಪೊಲೀಸ ಮತ್ತು ಕಾಲೇಜು ಅಧ್ಯಾಪಕ ವರ್ಗದ ಕೆಲವರು ಗುಂಪುಗಳನ್ನು ಬೇರೆ ಬೇರೆ ಮಾಡಿ ಆವರಣದಿಂದ ಅವರನ್ನು ಹೊರಹಾಕುತ್ತಾರೆ.

ಏನು ಆಗಬಹುದು ಎಂಬ ಆತಂಕ ಕನ್ನಡಿಗರಲ್ಲಿ ಇತ್ತೋ ಅದು ಅಗುತ್ತಿದೆ. ಹಿಜಾಬ್ (Hijab) ಧರಿಸುವ ಬಗ್ಗೆ ವಿದ್ಯಾರ್ಥಿಗಳಲ್ಲೇ ಪರ-ವಿರೋಧಿ ಎರಡು ಗುಂಪುಗಳಾಗಿ ಶಾಲಾ ಕಾಲೇಜುಗಳ ವಾತಾವರಣ ಹದಗೆಡುವ ಸಾಧ್ಯತೆಯ ಬಗ್ಗೆ ಅನುಮಾನ ಮತ್ತು ಗಾಬರಿ ಬಹಳಷ್ಟು ಪ್ರಜ್ಞಾವಂತ ಕನ್ನಡಿಗರಲ್ಲಿ ಮನೆ ಮಾತಾಡಿತ್ತು. ದುರದೃಷ್ಟವಶಾತ್ ಅದು ನಿಜವಾಗಿಬಿಟ್ಟಿದೆ. ಇದು ಬೇಕಿರಲಿಲ್ಲ. ಚಿಕ್ಕಮಗಳೂರಿನ ಐ ಡಿ ಎಸ್ ಜಿ ಕಾಲೇಜಿನಲ್ಲಿ (IDSG College) ಕಳವಳಕಾರಿ ವಾತಾವರಣ ನಿರ್ಮಾಣವಾಗಿತ್ತು. ಈ ಕಾಲೇಜಿನಲ್ಲಿ ಡ್ರೆಸ್ ಕೋಡ್ ಇಲ್ಲ. ವಿದ್ಯಾರ್ಥಿನಿಯರಂತೂ ಕಾಣುತ್ತಿಲ್ಲ. ಅದರೂ ಹಿಜಾಬ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಎರಡು ಗುಂಪುಗಳಾಗಿವೆ. ಗುಂಪುಗಳನ್ನು ನಾವು ಅವರು ಹೊದ್ದಿರುವ ಶಾಲುಗಳ ಮುಖಾಂತರ ಗುರುತಿಸಬಹುದು. ನೀಲಿ ಶಾಲು ಹೊದ್ದಿರುವ ವಿದ್ಯಾರ್ಥಿಗಳು ಹಿಜಾಬ್ ಪರವಾದರೆ ಕೇಸರಿ ಶಾಲಿನವರು ಅದನ್ನು ವಿರೋಧಿಸುತ್ತಿದ್ದಾರೆ.

ಕೇಸರಿ ಪಡೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದರೆ ನೀಲಿ ಪಡೆ ಜೈ ಭೀಮ್ ಎನ್ನುತ್ತಿದ್ದಾರೆ. ಕಾಲೇಜಿನ ಆವರಣದೊಳಗೆ ಇದು ನಡೆಯುತ್ತಿದೆ. ಪಕ್ಕದಲ್ಲಿ ಕ್ಲಾಸ್ ರೂಮುಗಳನ್ನು ನೀವು ಕಾಣಬಹುದು. ಎರಡು ಗುಂಪುಗಳು ಎದುರು ಬದುರಾಗಿವೆ. ಯಾರಾದರೂ ಮಧ್ಯಪ್ರವೇಶಿಸದೆ ಹೋಗಿದ್ದರೆ ಪರಿಸ್ಥಿತಿ ಖಂಡಿತವಾಗಿಯೂ ವಿಕೋಪಕ್ಕೆ ಹೋಗುತಿತ್ತು.

ಪ್ರಾಯಶಃ ಕಾಲೇಜಿನ ಮ್ಯಾನೇಜ್ಮೆಂಟ್ ನವರು ಇದನ್ನು ಮೊದಲೇ ಮನಗಂಡಿದ್ದರು ಅಂತ ಕಾಣುತ್ತೆ. ಅವರು ಪೊಲೀಸರನ್ನು ಕಾಲೇಜಿಗೆ ಕರೆಸಿಕೊಂಡಿದ್ದಾರೆ. ಪೊಲೀಸ ಮತ್ತು ಕಾಲೇಜು ಅಧ್ಯಾಪಕ ವರ್ಗದ ಕೆಲವರು ಗುಂಪುಗಳನ್ನು ಬೇರೆ ಬೇರೆ ಮಾಡಿ ಆವರಣದಿಂದ ಅವರನ್ನು ಹೊರಹಾಕುತ್ತಾರೆ.

ಆಚೆ ಹೋದ ನಂತರವೂ ಕೇಸರಿ ಶಾಲು ವಿದ್ಯಾರ್ಥಿಗಳ ಗುಂಪು ಗೇಟಿನ ಮುಂದೆ ಕೂತು ಪ್ರತಿಭಟನೆ ಶುರುಮಾಡುತ್ತದೆ. ಪೊಲೀಸ್ ಅವರನ್ನು ಅಲ್ಲಿಂದ ಕಳಿಸುವಲ್ಲಿ ಸಫಲರಾಗುತ್ತಾರೆ.

ಇದನ್ನೂ ಓದಿ:   ದಾಖಲಾತಿ ಪಡೆಯುವಾಗ ಹಿಜಾಬ್ ಬಗ್ಗೆ ಇಲ್ಲದ ನಿರ್ಬಂಧ ಈಗ್ಯಾಕೆ ಅನ್ನುತ್ತಾರೆ ಬೆಳಗಾವಿ ಮುಸ್ಲಿಂ ವಿದ್ಯಾರ್ಥಿನಿಯರು

Published on: Feb 07, 2022 10:33 PM