ಅನುಭವಿ ರೇಣುಕಾಚಾರ್ಯ ಮತ್ತೊಮ್ಮೆ ಸಚಿವನಾಗಲು ಅರ್ಹ! ಹೊನ್ನಾಳಿ ಶಾಸಕನ ಪರ ಬ್ಯಾಟ್ ಮಾಡಿದರು ಈಶ್ವರಪ್ಪ

ಅನುಭವಿ ರೇಣುಕಾಚಾರ್ಯ ಮತ್ತೊಮ್ಮೆ ಸಚಿವನಾಗಲು ಅರ್ಹ! ಹೊನ್ನಾಳಿ ಶಾಸಕನ ಪರ ಬ್ಯಾಟ್ ಮಾಡಿದರು ಈಶ್ವರಪ್ಪ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Feb 07, 2022 | 8:24 PM

ಕಾಂಗ್ರೆಸ್ ನಿಂದ ವಲಸೆ ಬಂದಿದರುವವರಿಗೆ ಸಚಿವ ಸ್ಥಾನ ನೀಡುವ ವಾಗ್ದಾನವನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಡಿದ್ದರಿಂದ ಅವರನ್ನು ಸಚಿವ ಸ್ಥಾನದಿಂದ ತೆಗೆಯಲಾಗದು, ಮೂಲ ಬಿಜೆಪಿ ಶಾಸಕರಿಗೆ ರೊಟೇಶನ್ ಪಾಲಿಸಿ ಅಳವಡಿಸಿಸ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಈಶ್ವರಪ್ಪ ಹೇಳಿದರು.

ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಂಪುಟ ವಿಸ್ತರಣೆ (cabinet expansion) ಮಾಡುವಾಗ ಹಿರಿಯ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಅವರನ್ನು ಕೈಬಿಡುವ ಸಾಧ್ಯತೆ ಇದೆ ಎಂಬ ವದಂತಿಗಳು ಬಲವಾಗಿವೆ. ಯುವಕರಿಗೆ ಆದ್ಯತೆ ನೀಡಿ ಅನ್ನುವ ಕೂಗು ಮತ್ತು ಆಗ್ರಹ ಬಲಗೊಳ್ಳುತ್ತಿದೆ. ಈಶ್ವರಪ್ಪ ಅವರನ್ನು ಪಕ್ಷದ ಸಂಘಟನಾ ಕಾರ್ಯದಲ್ಲಿ ಉಪಯೋಗಿಸಿಕೊಳ್ಳಬೇಕು ಅಂತ ವರಿಷ್ಠರು ತೀರ್ಮಾನಿಸಿದಂತಿದೆ. ಸಚಿವರು ಅದಕ್ಕಾಗಿ ಮಾನಸಿಕ ಸಿದ್ಧತೆ ಮಾಡಿಕೊಳ್ಳುವ ಪ್ರಯತ್ನವೂ ನಡೆಸುತ್ತಿದ್ದಾರೆ. ಹಾಗಾಗೇ ತನಗೆ ಆಪ್ತರಾದವರನ್ನು ಸಂಪುಟಕ್ಕೆ ಸೇರಿಸುವ ಪ್ರಯತ್ನ ಅವರು ಮಾಡುತ್ತಿದ್ದಾರೆಯೇ ಎಂಬ ಗುಮಾನಿ ಈ ವಿಡಿಯೋ ನೋಡಿದ ಬಳಿಕ ಏಳದಿರದು. ಅವರ ಮತ್ತು ಮಾಜಿ ಸಚಿವ ಹಾಗೂ ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ ನಡುವೆ ಅನ್ಯೋನ್ಯ ಸಂಬಂಧವಿದೆ. ದಾವಣಗೆರೆಯಲ್ಲಿ ಸೋಮವಾರ ಸುದ್ದಿಗಾಗರೊಂದಿಗೆ ಮಾತಾಡಿದ ಸಚಿವರು ರೇಣುಕಾಚಾರ್ಯ ಪರ ಬ್ಯಾಟ್ ಮಾಡಿದರು.

ಎಲ್ಲ ಶಾಸಕರಿಗೆ ಮಂತ್ರಿ ಸ್ಥಾನ ಕೊಡಲಾಗದು, ಅದರೆ ಹಿಂದೆ ಸಚಿವರಾಗಿ ಅನುಭವ ಇರುವ ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಅರ್ಹರಾಗಿರುವುದರಿಂದ ಅವರಿಗೆ ನೀಡಬೇಕು ಎಂದು ಈಶ್ವರಪ್ಪ ಹೇಳಿದರು. ಅವರು ತಮ್ಮ ಬಗ್ಗೆ ಹೇಳಲು ಪೀಠಿಕೆ ಹಾಕುವಾಗ ತಾಳ್ಮೆ ಕಳೆದುಕೊಳ್ಳುವ ರೇಣುಕಾಚಾರ್ಯ, ‘ಅಣ್ಣ ನನ್ನ ಬಗ್ಗೆ ಹೇಳಣ್ಣ,’ ಅಂತ ಹೇಳಿದಾಗ ಈಶ್ವರಪ್ಪ, ‘ಸ್ವಲ್ಪ ತಾಳ್ಕೊಳ್ಳಣ್ಣ ಹೇಳ್ತೀನಿ,’ ಅಂತ ಅವರ ಗದ್ದ ಹಿಡಿದು ಸಮಾಧಾನ ಪಡಿಸುತ್ತಾರೆ.

ಕಾಂಗ್ರೆಸ್ ನಿಂದ ವಲಸೆ ಬಂದಿದರುವವರಿಗೆ ಸಚಿವ ಸ್ಥಾನ ನೀಡುವ ವಾಗ್ದಾನವನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಡಿದ್ದರಿಂದ ಅವರನ್ನು ಸಚಿವ ಸ್ಥಾನದಿಂದ ತೆಗೆಯಲಾಗದು, ಮೂಲ ಬಿಜೆಪಿ ಶಾಸಕರಿಗೆ ರೊಟೇಶನ್ ಪಾಲಿಸಿ ಅಳವಡಿಸಿಸ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಈಶ್ವರಪ್ಪ ಹೇಳಿದರು.

ಆದರೆ ಮುಂದಿನ ಬಾರಿ ಸರ್ಕಾರ ರಚನೆಯಾಗುವಾಗ ಈ ಗೊಂದಲವಿರಲಾರದು ಯಾಕೆಂದರೆ ತಮ್ಮ ಪಕ್ಷವೇ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ:   ಮುಸ್ಲಿಮರಿಗೂ ಸತ್ಯ ಗೊತ್ತಾಗಿ ಕಾಂಗ್ರೆಸ್​ನಿಂದ ದೂರವಾಗಿದ್ದಾರೆ: ಇಬ್ರಾಹಿಂ ಹೆಸರು ಪ್ರಸ್ತಾಪಿಸಿ ಟೀಕಿಸಿದ ಈಶ್ವರಪ್ಪ

Published on: Feb 07, 2022 08:23 PM