ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ಕರ್ನಾಟಕ ಎನ್ ಸಿ ಸಿ ಡೈರೆಕ್ಟೋರೇಟ್ ಪಡೆ ನೇತೃತ್ವ ವಹಿಸಿದ್ದ ಪ್ರಮೀಳಾಗೆ ಫೈಟರ್ ಪೈಲಟ್ ಆಗುವಾಸೆ!

ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ಕರ್ನಾಟಕ ಎನ್ ಸಿ ಸಿ ಡೈರೆಕ್ಟೋರೇಟ್ ಪಡೆ ನೇತೃತ್ವ ವಹಿಸಿದ್ದ ಪ್ರಮೀಳಾಗೆ ಫೈಟರ್ ಪೈಲಟ್ ಆಗುವಾಸೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 07, 2022 | 6:08 PM

ಮೈಸೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಪ್ರಮೀಳಾಗೆ ಗಣರಾಜ್ಯೋತ್ಸವದಂದು ದೆಹಲಿಯ ರಾಜ್ಪಥ್​ನಲ್ಲಿ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ ಮತ್ತು ಇತರ ಗಣ್ಯರ ಮುಂದೆ ಎನ್​ ಸಿ ಸಿಯ ಒಂದು ಡೈರೆಕ್ಟೋರೇಟ್ (3-ಕರ್ನಾಟಕ ಗರ್ಲ್ಸ್ ಬೆಟಾಲಿಯನ್) ಅನ್ನು ಲೀಡ್ ಮಾಡುವಷ್ಟು ಬೆಳೆಯುವುದರ ಹಿಂದೆ ಸಾಕಷ್ಟು ಪರಿಶ್ರಮವಿದೆ.

ಪ್ರಮೀಳಾ ಕುಂವರ್ (Pramila Kunwar) ಅವರ ಬಗ್ಗೆ ನಾವು ಈಗಾಗಲೇ ಚರ್ಚಿಸಿದ್ದೇವೆ. ಕನ್ನಡನಾಡಿನ ಈ ಹೆಮ್ಮೆಯ ಯುವತಿ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ರಾಜಪತ್ ನಲ್ಲಿ (Rajpath) ನಡೆದ ಪರೇಡ್ ನಲ್ಲಿ ಕರ್ನಾಟಕ-ಗೋವಾ ಎನ್ ಸಿ ಸಿ ಡೈರೆಕ್ಟೋರೇಟ್ ಪಡೆಯ (Karnataka-Goa NCC Directorate) ನೇತೃತ್ವ ವಹಿಸಿದ್ದರು. ಇದು ಸಮಾನ್ಯವಾದ ಸಾಧನೆಯಲ್ಲ. ಅದರಲ್ಲೂ ವಿಶೇಷವಾಗಿ ಪ್ರಮೀಳಾ ಅವರು ಪ್ರತಿನಿಧಿಸುವ ಸಮುದಾಯಲ್ಲಿ ಎನ್ ಸಿ ಸಿ ಹಾಗಿರಲಿ ಹೆಣ್ಣು ಮಕ್ಕಳನ್ನು ಹೆಚ್ಚು ಓದಿಸಬಾರದು ಅಂತ ಹೇಳುತ್ತಾರೆ. ಆದರೆ, ಪ್ರಮೀಳಾ ಅವರು ತಂದೆ ಪ್ರತಾಪ್ ಕುಂವರ್ (Pratap Kunwar) ತಮ್ಮ ಮೂರು ಮಕ್ಕಳ (ಒಂದು ಹೆಣ್ಣು ಮತ್ತು ಎರಡು ಗಂಡು) ನಡುವೆ ಯಾವುದೇ ತಾರತಮ್ಯ ಮಾಡದೆ ಬೆಳೆಸುತ್ತಿದ್ದಾರೆ ಮತ್ತು ಓದಿಸುತ್ತಿದ್ದಾರೆ. ಹಾಗೆ ನೋಡಿದರೆ ಪ್ರತಾಪ ಅವರದ್ದು ಸ್ಥಿತಿವಂತ ಕುಟುಂಬವೇನಲ್ಲ. ಆದರೆ, ಪ್ರಮೀಳಾ ಮಾಡಿರುವ ಸಾಧನೆ ಯಾವುದೇ ಶ್ರೀಮಂತ ತನ್ನಿಡೀ ಬದುಕಿನಲ್ಲಿ ಅನುಭವಿಸದಷ್ಟು ಸಂತೃಪ್ತಿಯ ಭಾವವನ್ನು ಪ್ರತಾಪ್ ಅವರಲ್ಲಿ ಮೂಡಿಸಿದೆ. ಅವರು ತಮ್ಮ ಮಗಳ ಬಗ್ಗೆ ಅಭಿಮಾನ, ಪ್ರೀತಿ ಮತ್ತು ಗರ್ವದಿಂದ ಮಾತಾಡುವುದು ಕೇಳಿದರೆ ನಮ್ಮ ಹೃದಯಗಳೂ ತುಂಬಿ ಬರುತ್ತವೆ ಮಾರಾಯ್ರೇ.

ಮೈಸೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಪ್ರಮೀಳಾಗೆ ಗಣರಾಜ್ಯೋತ್ಸವದಂದು ದೆಹಲಿಯ ರಾಜ್ಪಥ್​ನಲ್ಲಿ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ ಮತ್ತು ಇತರ ಗಣ್ಯರ ಮುಂದೆ ಎನ್​ ಸಿ ಸಿಯ ಒಂದು ಡೈರೆಕ್ಟೋರೇಟ್ (3-ಕರ್ನಾಟಕ ಗರ್ಲ್ಸ್ ಬೆಟಾಲಿಯನ್) ಅನ್ನು ಲೀಡ್ ಮಾಡುವಷ್ಟು ಬೆಳೆಯುವುದರ ಹಿಂದೆ ಸಾಕಷ್ಟು ಪರಿಶ್ರಮವಿದೆ.

ಮೈಸೂರಿನಲ್ಲಿ ಸೀನಿಯರ್ ಅಂಡರ್ ಆಫೀಸರ್ ಆಗಿರುವ ಅವರಿಗೆ ಬಾಲ್ಯದಿಂದಲೂ ಸಶಸ್ತ್ರ ಪಡೆಗಳ ಮೇಲೆ ಅತೀವ ಒಲವು. ಮುಂದೊಂದು ದಿನ ಫೈಟರ್ ಪೈಲಟ್ ಆಗಬೇಕೆಂಬ ಗುರಿ ಇಟ್ಟುಕೊಂಡಿರುವ ಪ್ರಮಿಳಾಗೆ ಅವರ ಮಾತಿನಲ್ಲಿ ವ್ಯಕ್ತವಾಗುವ ಆತ್ಮವಿಶ್ವಾಸ ಗಮನಿಸಿದರೆ ಆ ಗುರಿ ಸಾಧನೆಗೆ ಯಾವುದೇ ಕಷ್ಟವಾಗಲಾರದು ಅನ್ನೋದು ಸ್ಪಷ್ಟವಾಗುತ್ತದೆ.

ತನ್ನ ತಂದೆ ತಾಯಿಗಳ ಪ್ರೋತ್ಸಾಹ ಬೆಂಬಲ ಮತ್ತು ತ್ಯಾಗವನ್ನು ಕೃತಜ್ಞತೆಯಿಂದ ನೆನೆಯುವ ಪ್ರಮೀಳಾ ಚಿಕ್ಕವಯಸ್ಸಿನಲ್ಲೇ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಅವರ ಹಕ್ಕುಗಳ ಬಗ್ಗೆ ಒಂದು ಅಭಿಯಾನವನ್ನೂ ನಡೆಸುತ್ತಿದ್ದಾರೆ.

ಆಗಲೇ ಹೇಳಿದಂತೆ ಅವರ ಸಮುದಾಯದಲ್ಲಿ ಹೆಣ್ಣುಮಕ್ಕಳಿಗೆ ಜಾಸ್ತಿ ಓದಿಸುವುದಿಲ್ಲ ಮತ್ತು ಬೇಗ ಮದುವೆ ಮಾಡಿಕೊಂಡುವ ಪರಿಪಾಠವಿದೆ. ಅದನ್ನು ಬದಲಾಯಿಸಬೇಕೆನ್ನುವ ನಿಟ್ಟಿನಲ್ಲಿ ಅವರು ಹೋರಾಡುತ್ತಿದ್ದಾರೆ. ಕೇವಲ 20 ರ ತರುಣಿ ನಮ್ಮೆಲ್ಲರಲ್ಲಿ ಅಭಿಮಾನ ಮತ್ತು ಹೆಮ್ಮೆ ಮೂಡಿಸಿರುವುದಂತೂ ಸತ್ಯ ಮಾರಾಯ್ರೇ.

ಅವರು ಅಂದುಕೊಂಡಿದ್ದೆಲ್ಲ ಸಾಕಾರಗೊಳ್ಳಲಿ.

ಇದನ್ನೂ ಓದಿ:   ಗಣರಾಜ್ಯೋತ್ಸವದಂದು ರಾಜಪತ್​ನಲ್ಲಿ ನಡೆಯುವ ಪರೇಡ್​ನಲ್ಲಿ ಎನ್ ಸಿ ಸಿ ತಂಡದ ನೇತೃತ್ವವನ್ನು ಮೈಸೂರಿನ ಪ್ರಮೀಳಾ ಕುನಾವರ್ ವಹಿಸುತ್ತಾರೆ!