ಶಾಸಕರ ವಿರುದ್ಧ ಆರೋಪ ಮಾಡಿರುವ ಮಹಿಳೆಯನ್ನು ಕಮೀಶನರ್ ಕಚೇರಿ ಬಳಿ ತಡೆಯಲೆತ್ನಿಸಿದ ಪೊಲೀಸ್ ಮೇಲೆ ವಕೀಲ ಜಗದೀಶ ರೇಗಾಡಿದರು
ಅವರೊಂದಿಗೆ ಒಬ್ಬ ಪೊಲೀಸ್ ಪೇದೆ ಕೂಡ ವಕೀಲರ ಕಚೇರಿ ಪ್ರವೇಶಿಸಿದ್ದಾರೆ. ಜಗದೀಶ ಅವರು ಹೇಳುವ ಪ್ರಕಾರ ಪೊಲೀಸಪ್ಪ ಮಹಿಳೆಯನ್ನು ಕಚೇರಿ ಒಳಗೆ ಹೋಗದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆ. ಅದು ವಕೀಲರ ಗಮನಕ್ಕೆ ಬರುತ್ತಿದ್ದಂತೆ ಪೊಲೀಸ್ ಪೇದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಶಾಸಕ (BJP MLA) ರಾಜಕುಮಾರ ಪಾಟೀಲ್ ತೆಲ್ಕೂರ್ (Rajkumar Patil Telkur) ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬರು ತನ್ನ 14-ವರ್ಷ ವಯಸ್ಸಿನ ಮಗನಿಗೆ ಶಾಸಕರೇ ತಂದೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಮತ್ತು ಸುದ್ದಿಗೋಷ್ಟಿಯೊಂದನ್ನು ನಡೆಸಿ ರಾಜಕುಮಾರ ಪಾಟೀಲ್ ತೆಲ್ಕೂರ್ ವಿರುದ್ಧ ಆಪಾದನೆ ಮಾಡಿದ್ದಾರೆ. ಈಗಾಗಲೇ ಬೆಂಗಳೂರಿಗೆ ಆಗಮಿಸಿರುವ ಈ ಮಹಿಳೆ ತನಗೆ ನ್ಯಾಯ ದೊರಕಿಸುವಂತೆ ನಗರದ ಖ್ಯಾತ ವಕೀಲ ಕೆ ಎನ್ ಜಗದೀಶ್ (KN Jagadish) ಅವರ ಮೊರೆ ಹೊಕ್ಕಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜಗದೀಶ್ ಅವರು ಮಹಿಳೆಯನ್ನು ವಿಧಾನ ಸೌಧ ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದು ದೂರನ್ನು ಕೊಡಿಸಿದ್ದಾರೆ. ಜಗದೀಶ ಅವರು ಔಟ್ಸ್ಪೋಕನ್ ವ್ಯಕ್ತಿ. ಜೋರಾಗಿ ಮಾತಾಡುತ್ತಾರೆ. ದೂರು ಯಾರ ವಿರುದ್ಧ ಇದ್ದರೂ ಮುಲಾಜಿಲ್ಲದೆ ಸಂತ್ರಸ್ತರ ಪರ ವಾದ ಮಾಡುತ್ತಾರೆ. ಆರೋಪಿಗಳು ಸೆಲಿಬ್ರಿಟಿ, ರಾಜಕೀಯ ಧುರೀಣರಾಗಿದ್ದರೆ ಅವರ ಅವೇಷ ಮತ್ತಷ್ಟು ಹೆಚ್ಚುತ್ತದೆ.
ಸೋಮವಾರ ಬೆಂಗಳೂರಲ್ಲಿ ನಡೆದಿದ್ದು ಅದೇ. ಜಗದೀಶ ಅವರು ಮಹಿಳೆಯನ್ನು ಪೊಲೀಸ್ ಕಚೇರಿಗೆ ಕರೆದೊಯ್ಯುವಾಗ ಮಾಧ್ಯಮದವರು ಅಲ್ಲಿ ಮುಕ್ಕುರಿದ್ದಾರೆ. ಅವರೊಂದಿಗೆ ಒಬ್ಬ ಪೊಲೀಸ್ ಪೇದೆ ಕೂಡ ಕಚೇರಿ ಪ್ರವೇಶಿಸಿದ್ದಾರೆ. ಜಗದೀಶ ಅವರು ಹೇಳುವ ಪ್ರಕಾರ ಪೊಲೀಸಪ್ಪ ಮಹಿಳೆಯನ್ನು ಕಚೇರಿ ಒಳಗೆ ಹೋಗದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆ. ಅದು ವಕೀಲರ ಗಮನಕ್ಕೆ ಬರುತ್ತಿದ್ದಂತೆ ಪೊಲೀಸ್ ಪೇದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೊದಲು ಏಕವಚನದಲ್ಲೇ ಮಾತಾಡುವ ಜಗದೀಶ್ ಅವರು ತನ್ನ ಅನುಮತಿಯಿಲ್ಲದೆ ಮಹಿಳೆಯನ್ನು ಯಾಕೆ ಮಾತಾಡಿಸಿದ್ದು ಅಂತ ಗದರುವ ಧ್ವನಿಯಲ್ಲಿ ಕೇಳುತ್ತಾರೆ. ಆಗ ಪೊಲೀಸ್ ತಾನು ಸರ್ಕಾರೀ ನೌಕರ ಅಂತೆನೋ ಹೇಳಲು ಪ್ರಯತ್ನಿಸಿದ್ದಾರೆ. ಅದಕ್ಕೂ ಜಗದೀಶ ರೇಗಾಡಿದ್ದಾರೆ.
ಇದನ್ನೂ ಓದಿದ್ದಾರೆ: Pragya Singh Thakur: ಪ್ರಗ್ಯಾ ಸಿಂಗ್ ಠಾಕೂರ್ಗೆ ಅಶ್ಲೀಲ ವಿಡಿಯೋ, ಮೆಸೇಜ್ ರವಾನೆ; ಇಬ್ಬರ ವಿರುದ್ಧ ಕೇಸ್ ದಾಖಲು