AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pragya Singh Thakur: ಪ್ರಗ್ಯಾ ಸಿಂಗ್ ಠಾಕೂರ್​ಗೆ ಅಶ್ಲೀಲ ವಿಡಿಯೋ, ಮೆಸೇಜ್ ರವಾನೆ; ಇಬ್ಬರ ವಿರುದ್ಧ ಕೇಸ್ ದಾಖಲು

ತನಗೆ ಬಂದ ಫೋನ್ ಕರೆ ಮತ್ತು ವಿಡಿಯೋಗಳು ತನ್ನ ಮಾನಹಾನಿ ಮತ್ತು ಇಮೇಜ್ ಹಾಳು ಮಾಡುವ ಪಿತೂರಿಯ ಭಾಗವಾಗಿದೆ ಎಂದು ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದಾರೆ

Pragya Singh Thakur: ಪ್ರಗ್ಯಾ ಸಿಂಗ್ ಠಾಕೂರ್​ಗೆ ಅಶ್ಲೀಲ ವಿಡಿಯೋ, ಮೆಸೇಜ್ ರವಾನೆ; ಇಬ್ಬರ ವಿರುದ್ಧ ಕೇಸ್ ದಾಖಲು
ಪ್ರಜ್ಞಾ ಸಿಂಗ್ ಠಾಕೂರ್
TV9 Web
| Updated By: ಸುಷ್ಮಾ ಚಕ್ರೆ|

Updated on: Feb 07, 2022 | 5:12 PM

Share

ಭೂಪಾಲ್: ಭೂಪಾಲ್‌ನ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ (Pragya Singh Thakur) ಅವರಿಗೆ ಅಶ್ಲೀಲ ಸಂದೇಶಗಳು ಮತ್ತು ವಿಡಿಯೋಗಳನ್ನು ಕಳುಹಿಸಿದ ಹಿನ್ನೆಲೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಪರಿಚಿತ ಮೊಬೈಲ್ ನಂಬರ್​ನಿಂದ ತಮಗೆ ಆಕ್ಷೇಪಾರ್ಹ ವಿಡಿಯೋ ಕಾಲ್ ಬಂದಿದೆ ಎಂದು ಪ್ರಗ್ಯಾ ಸಿಂಗ್ ಠಾಕೂರ್ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಪ್ರಗ್ಯಾ ಸಿಂಗ್ ಠಾಕೂರ್ ಮೊದಲು ತಮಗೆ ಬಂದ ಫೋನ್ ಕಾಲ್ ಕಡಿತಗೊಳಿಸಿದರು. ನಂತರ ಆಕೆಗೆ ಮತ್ತೊಂದು ನಂಬರ್​ನಿಂದ ಅಶ್ಲೀಲ ವಿಡಿಯೋ, ಮೆಸೇಜ್ ಕಳುಹಿಸಲಾಯಿತು. ಅಲ್ಲದೆ, ಆ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್​ಲೋಡ್ ಮಾಡುವ ಮೂಲಕ ತನ್ನ ಮಾನಹಾನಿ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಪ್ರಗ್ಯಾ ಸಿಂಗ್ ಠಾಕೂರ್ ದೂರು ನೀಡಿದ್ದಾರೆ” ಎಂದು ಇನ್ಸ್‌ಪೆಕ್ಟರ್ ಚೈನ್ ಸಿಂಗ್ ರಘುವಂಶಿ ಹೇಳಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಲೈಂಗಿಕ ಕಿರುಕುಳ), 507 (ಅನಾಮಧೇಯ ವಿಳಾಸದಿಂದ ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತನಗೆ ಬಂದ ಫೋನ್ ಕರೆ ಮತ್ತು ವಿಡಿಯೋಗಳು ತನ್ನ ಮಾನಹಾನಿ ಮತ್ತು ಇಮೇಜ್ ಹಾಳು ಮಾಡುವ ಪಿತೂರಿಯ ಭಾಗವಾಗಿದೆ ಎಂದು ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದಾರೆ. ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Pragya Thakur: ನಾನು ಕಬಡ್ಡಿಯಾಡಿದ್ದನ್ನು ವಿಡಿಯೋ ಮಾಡಿದವರು ರಾವಣರು; ಬಿಜೆಪಿ ನಾಯಕಿ ಪ್ರಗ್ಯಾ ಠಾಕೂರ್ ಆಕ್ರೋಶ

ನನಗೆ ಕೊರೊನಾ ಸೋಂಕು ತಗುಲಿಲ್ಲ, ಏಕೆಂದರೆ ನಾನು ನಿತ್ಯ ಗೋಮೂತ್ರ ಸೇವಿಸುತ್ತೇನೆ: ಬಿಜೆಪಿ ಸಂಸದೆ ಪ್ರಗ್ಯಾಸಿಂಗ್ ಠಾಕೂರ್

ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್
VIDEO: ಸುಈಈಈಈ... ಪ್ಯಾಟ್ ಕಮಿನ್ಸ್ ವಾಟ್ ಎ ಕ್ಯಾಚ್
VIDEO: ಸುಈಈಈಈ... ಪ್ಯಾಟ್ ಕಮಿನ್ಸ್ ವಾಟ್ ಎ ಕ್ಯಾಚ್
ಶಿವಕುಮಾರ್ ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆ ನಡೆಸಲಿದ್ದಾರೆ: ಸೋಮಣ್ಣ
ಶಿವಕುಮಾರ್ ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆ ನಡೆಸಲಿದ್ದಾರೆ: ಸೋಮಣ್ಣ
ತೇಜಸ್ವಿ ಸೂರ್ಯ ಮನೆಗೆ ಹೊಸ ಅತಿಥಿ: ಹಾಡಿನ ಮೂಲಕ ಸ್ವಾಗತಿಸಿದ ಶಿವಶ್ರೀ
ತೇಜಸ್ವಿ ಸೂರ್ಯ ಮನೆಗೆ ಹೊಸ ಅತಿಥಿ: ಹಾಡಿನ ಮೂಲಕ ಸ್ವಾಗತಿಸಿದ ಶಿವಶ್ರೀ
ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್
ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್
ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ