Sanapur lake: ಸಾಣಾಪೂರ ಕೆರೆ ಬಗ್ಗೆ ಜನರಿಗೆ ಅರಿವು ಮೂಡಿಸಲು ನೀರಿಗೆ ಜಿಗಿದ ಕೊಪ್ಪಳ ಡಿಸಿ -ವಿಡಿಯೋ ವೈರಲ್

| Updated By: ಸಾಧು ಶ್ರೀನಾಥ್​

Updated on: Nov 03, 2021 | 9:44 AM

Koppal Deputy Commissioner Suralkar Vikas Kishor: ಸಾಣಾಪೂರ ಕೆರೆಯಲ್ಲಿ ಈಜಲು ಹೋಗಿ ಅನೇಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಜಾಕೆಟ್ ಅವಶ್ಯಕತೆ ತುಂಬಾ ಮುಖ್ಯ ಅನ್ನೋದನ್ನ ಅರಿವು ಮೂಡಿಸಲು ಡಿಸಿ ವಿಕಾಸ್ ಕಿಶೋರ್ ಯತ್ನಿಸಿದ್ದಾರೆ. ಸಾಣಾಪೂರ ಕೆರೆ ಸುತ್ತ ಮುತ್ತ ಪ್ರವಾಸಿ ತಾಣಗಳ ಅಭಿವೃದ್ದಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಒತ್ತು ನೀಡುತ್ತಿರುವುದು ಗಮನಾರ್ಹ.

Sanapur lake: ಸಾಣಾಪೂರ ಕೆರೆ ಬಗ್ಗೆ ಜನರಿಗೆ ಅರಿವು ಮೂಡಿಸಲು ನೀರಿಗೆ ಜಿಗಿದ ಕೊಪ್ಪಳ ಡಿಸಿ -ವಿಡಿಯೋ ವೈರಲ್
ಸಾಣಾಪೂರ ಕೆರೆ ಬಗ್ಗೆ ಜನರಿಗೆ ಅರಿವು ಮೂಡಿಸಲು ನೀರಿಗೆ ಜಿಗಿದ ಕೊಪ್ಪಳ ಜಿಲ್ಲಾಧಿಕಾರಿ: ವಿಡಿಯೋ ವೈರಲ್
Follow us on

ಕೊಪ್ಪಳ: ಕೊಪ್ಪಳ ಜಿಲ್ಲಾಧಿಕಾರಿ ನೀರಿಗೆ ಜಿಗಿದ ವಿಡಿಯೋ ವೈರಲ್ ಆಗಿದೆ. ಸಾಣಾಪೂರ ಕೆರೆಯಲ್ಲಿ ಯಾವುದೇ ಸೇಫ್ಟಿ ಜಾಕೆಟ್ ಇಲ್ಲದೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ನೀರಿಗೆ ಹಾರಿದ್ದಾರೆ. ಸಾಣಾಪೂರ ಕೆರೆಯಲ್ಲಿ ಸಾವಿನ ಪ್ರಮಾಣ ಹೆಚ್ಚು ಇದ್ದು, ತನ್ಮೂಲಕ ಜನರಿಗೆ ಅರಿವು ಮೂಡಿಸಲು ನಿನ್ನೆ ಮಂಗಳವಾರ ಜಿಲ್ಲಾಧಿಕಾರಿ ಯತ್ನಿಸಿದ್ದಾರೆ.

ಸಾಣಾಪೂರ ಕೆರೆಯಲ್ಲಿ ಈಜಲು ಹೋಗಿ ಅನೇಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಜಾಕೆಟ್ ಅವಶ್ಯಕತೆ ತುಂಬಾ ಮುಖ್ಯ ಅನ್ನೋದನ್ನ ಅರಿವು ಮೂಡಿಸಲು ಡಿಸಿ ವಿಕಾಸ್ ಕಿಶೋರ್ ಯತ್ನಿಸಿದ್ದಾರೆ. ಸಾಣಾಪೂರ ಕೆರೆ ಸುತ್ತ ಮುತ್ತ ಪ್ರವಾಸಿ ತಾಣಗಳ ಅಭಿವೃದ್ದಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಒತ್ತು ನೀಡುತ್ತಿರುವುದು ಗಮನಾರ್ಹ. ಪ್ರಾಯೋಗಿಕವಾಗಿ ತಾವೇ ಚಟುವಟಿಕೆಗಳನ್ನ ಮಾಡೋ ಮೂಲಕ ಗಮನ ಸೆಳೆದಿದ್ದಾರೆ. ಸೈಕ್ಲಿಂಗ್, ಹಾರ್ಸ್ ರೈಡಿಂಗ್, ರಾಕ್ ಕ್ಲೈಂಬಿಂಗ್ ನಂತಹ ಚಟುವಟಿಕೆಗಳಲ್ಲಿ ಡಿ‌ಸಿ ವಿಕಾಸ್ ಕಿಶೋರ್​ ಆಗಾಗ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಆದ್ರೆ ಸ್ವತಃ ತಾವೇ ಜಾಕೆಟ್ ಇಲ್ಲದೆ ಮೇಲಿಂದ ನೀರಿಗೆ ನೀರಿಗೆ ಹಾರಿದ್ದು, ವಿಡಿಯೋ ವೈರಲ್ ಆಗಿದೆ. ಡಿ‌ಸಿ ವಿಕಾಸ್ ಕಿಶೋರ್​ಗೆ ಗಂಗಾವತಿ ತಾಲೂಕ ಪಂಚಾಯತ್ ಇ.ಒ. ಮೋಹನ ಸಹ ಸಾಥ್‌ ನೀಡಿದ್ದಾರೆ! ಆಯಕಟ್ಟಿನ ಸ್ಥಾನದಲ್ಲಿರುವ ಇಬ್ಬರೂ ಅಧಿಕಾರಿಗಳು ಯಾವುದೇ ಸೇಫ್ಟಿ ಜಾಕೆಟ್ ಇಲ್ಲದೆ ಮೇಲಿಂದ ಡೈವ್ ಮಾಡಿದ್ದಾರೆ. ತಾವು ಮೇಲಿಂದ ಡೈವ್ ಮಾಡಿದ್ದನ್ನ ಸ್ವತಃ ಡಿ‌ಸಿ ವಿಕಾಸ್ ಕಿಶೋರ್ ಅವರೇ ವಿಡಿಯೋ ಮಾಡಿಸಿದ್ದಾರೆ.

ಸಾಣಾಪೂರ ಕೆರೆ ಸುತ್ತ ಮುತ್ತ ಪ್ರವಾಸಿ ತಾಣಗಳ ಅಭಿವೃದ್ದಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಒತ್ತು ನೀಡುತ್ತಿರುವುದು ಗಮನಾರ್ಹ

ದೀಪಾವಳಿ ಹಬ್ಬದ ವೇಳೆ ಇಸ್ಪೀಟ್ ಆಡಿದ್ರೆ ಕಾನೂನು ಕ್ರಮ; ಹಳ್ಳಿಗಳಲ್ಲಿ ಪೊಲೀಸರಿಂದ ವಾರ್ನಿಂಗ್
ಕೊಪ್ಪಳ: ದೀಪಾವಳಿ ಹಬ್ಬದ ಹಿನ್ನೆಲೆ ಯಾರು ಜೂಜಾಡುವಂತಿಲ್ಲ ಎಂದು ಕೊಪ್ಪಳ ಜಿಲ್ಲೆಯ ಹಳ್ಳಿಗಳಲ್ಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದರ ಹೊರತಾಗಿಯೂ ಜೂಜಾಡಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ. ಗ್ರಾಮಗಳಲ್ಲಿ ಮೈಕ್ ಮೂಲಕ ಪೊಲೀಸರು ಈ ವಿಚಾರವನ್ನು ಪ್ರಚಾರ ಮಾಡಿದ್ದಾರೆ.

ದೀಪಾವಳಿಯಲ್ಲಿ ಇಸ್ಪೀಟ್ ಆಟವಾಡುವುದು ಕೊಪ್ಪಳ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಹೀಗಾಗಿ ಹಬ್ಬದ ನೆಪದಲ್ಲಿ ಜೂಜಾಟ ಆಡುವವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಇಸ್ಪೀಟ್ ಆಟಕ್ಕೆ ನಿರ್ಬಂಧ ಹೇರಿದ್ದಾರೆ.

TV9 Kannada Headlines @ 9AM (03-11-2021)

(in an awareness attempt koppal Deputy Commissioner Suralkar Vikas Kishor jumps into sanapur lake without life jacket)

Published On - 9:27 am, Wed, 3 November 21